udupixpress
Home Trending ಬಿಜೆಪಿ ಕಾಪು ಮಂಡಲ ಯುವ ಮೋರ್ಚಾದ ಅಧ್ಯಕ್ಷ ಸಚಿನ್ ಪಿತ್ರೋಡಿ ನೇತೃತ್ವದಲ್ಲಿ ಗೋವಿಗಾಗಿ ಮೇವು ಶ್ರಮದಾನ

ಬಿಜೆಪಿ ಕಾಪು ಮಂಡಲ ಯುವ ಮೋರ್ಚಾದ ಅಧ್ಯಕ್ಷ ಸಚಿನ್ ಪಿತ್ರೋಡಿ ನೇತೃತ್ವದಲ್ಲಿ ಗೋವಿಗಾಗಿ ಮೇವು ಶ್ರಮದಾನ

ಉಡುಪಿ: ಬಿಜೆಪಿ ಕಾಪು ಮಂಡಲ ಯುವ ಮೋರ್ಚಾದ ವತಿಯಿಂದ ಗೋವಿಗಾಗಿ ಮೇವು ಅಭಿಯಾನದಡಿ ನೀಲಾವರ ಗೋಶಾಲೆಗೆ ಗೋಗ್ರಾಸ ನೀಡುವ ಶ್ರಮದಾನ ಕಾರ್ಯಕ್ರಮ ಇಂದು ಉದ್ಯಾವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಸಂಪಿಗೆನಗರದಲ್ಲಿ ನಡೆಯಿತು.

ನೀಲಾವರದ ಗೋಶಾಲೆಯಲ್ಲಿ ಮೇವಿನ ಅಭಾವ ಉಂಟಾದ ಹಿನ್ನೆಲೆಯಲ್ಲಿ ಪೂಜ್ಯ ಪೇಜಾವರ ಶ್ರೀಗಳ ಮನವಿಯಂತೆ ಸಂಪಿಗೆನಗರದ ರಸ್ತೆ ಬದಿಯ ಹುಲ್ಲನ್ನು ಕಡಿದು ಗೋಶಾಲೆಗೆ ಕಾಪು ಯುವ ಮೋರ್ಚಾದ ವತಿಯಿಂದ ನೀಡಲಾಯಿತು.

ಈ ಸಂದರ್ಭದಲ್ಲಿ ಕಾಪು ಮಂಡಲದ ಕಾರ್ಯದರ್ಶಿ ರಾಜೇಶ್ ಕುಂದರ್, ಉದ್ಯಾವರ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ರವಿ ಸಾಲ್ಯಾನ್, ಬಿಜೆಪಿ ಕಾಪು ಮಂಡಲ ಯುವ ಮೋರ್ಚಾ ಅಧ್ಯಕ್ಷ ಸಚಿನ್ ಸುವರ್ಣ ಪಿತ್ರೋಡಿ, ಜಿಲ್ಲಾ ಯುವ ಮೋರ್ಚಾದ ಉಪಾಧ್ಯಕ್ಷ ಸಚಿನ್ ಬೊಳ್ಜೆ, ಕಾಪು ಯುವ ಮೋರ್ಚಾ ಕಾರ್ಯದರ್ಶಿ ಸೋನು ಪಾಂಗಾಳ, ಹಿಂದುಳಿದ ಮೋರ್ಚಾದ ಕೋಶಾಧಿಕಾರಿ ಗಣೇಶ್ ಕುಮಾರ್, ಜಿಲ್ಲಾ ಯುವ ಮೋರ್ಚಾದ ಕೋಶಾಧಿಕಾರಿ ಯತೀಶ್ ಮಟ್ಟು ಹಾಗೂ ಉದ್ಯಾವರ ಗ್ರಾಮದ ಬಿ.ಜೆ.ಪಿ ಕಾರ್ಯ ಕರ್ತರು ಉಪಸ್ಥಿತರಿದ್ದರು.

error: Content is protected !!