ಬೆಳ್ಳಂಪಳ್ಳಿ: ಶ್ರೀ ವಿಶ್ವಕರ್ಮ ಸಮಾಜೋದ್ಧಾರಕ ಸಂಘ ಮತ್ತು ಶ್ರೀ ಕಾಳಿಕಾಂಬಾ ಮಹಿಳಾ ಭಜನಾ ಮಂಡಳಿ ಹಾವಂಜೆ – ಬೆಳ್ಳಂಪಳ್ಳಿ – ಕುಕ್ಕೆಹಳ್ಳಿ ವತಿಯಿಂದ 13ನೇ ವರ್ಷದ ಸಾರ್ವಜನಿಕ ಸಾಮೂಹಿಕ ಶನೈಶ್ಚರ ಪೂಜೆ ಮತ್ತು ಎಳ್ಳು ಗಂಟು ದೀಪ ಬೆಳಗುವಿಕೆ ಕಾರ್ಯಕ್ರಮವು ಫೆ. 11 ಶನಿವಾರದಂದು ಸಂಜೆ 3.00 ಗಂಟೆಯಿಂದ ವಿಶ್ವಕರ್ಮ ಸಮುದಾಯ ಭವನ, ಬೆಳ್ಳಂಪಳ್ಳಿ ಇಲ್ಲಿ ಜರುಗಲಿರುವುದು.
ರಾಘವೇಂದ್ರ ಪುರೋಹಿತ್, ಕೀಳಿಂಜೆ ಅವರ ಪೌರೋಹಿತ್ಯದಲ್ಲಿ ಜರುಗಲಿರುವ ಪ್ರಕೃತ ಮಿಥುನ ರಾಶಿಯವರಿಗೆ ಅಷ್ಟಮದ ಶನಿ, ಕನ್ಯಾ ರಾಶಿಯವರಿಗೆ ಪಂಚಮದ ಶನಿ, ಧನು, ಮಕರ, ಕುಂಭ ರಾಶಿಯವರಿಗೆ ಏಳುವರೆ (ಸಾಡೇ ಸಾತಿ) ಶನಿದೋಷ ಒಂದಿಲ್ಲವೊಂದು ವಿಧದಲ್ಲಿ ಗೋಚರಕ್ಕೆ ಬರಲಿರುವುದು. ಶನೈಶ್ಚರನನ್ನು ಯಾರು ಭಕ್ತಿ, ನಿಷ್ಠೆಯಿಂದ ಪೂಜಿಸುತ್ತಾರೋ ಅಂಥವರ ಶನಿದೋಷ ನಿವಾರಣೆಯಾಗುವುದು ನಿಶ್ಚಿತ. ಸಾರ್ವಜನಿಕ ಸದ್ಭಕ್ತರು ಶನೈಶ್ಚರ ಪೂಜೆಯಲ್ಲಿ ಪಾಲ್ಗೊಂಡು ಶನಿದೋಷ ಉಪಶಮನಕ್ಕಾಗಿ ಪ್ರಾರ್ಥಿಸಿಕೊಳ್ಳುವಂತೆ ಪ್ರಕಟಣೆ ತಿಳಿಸಿದೆ.
ಶನೈಶ್ಚರ ಪೂಜೆಯ ವಿವರಗಳು
ಸಾರ್ವಜನಿಕ ಶನೈಶ್ಚರ ಪೂಜೆಗೆ 150/-
ಎಳ್ಳುಗಂಟು ಕಾಣಿಕೆ ರೂ.10/-
ಶನೈಶ್ಚರ ಪೂಜೆಯ ಕಾರ್ಯಕ್ರಮದ ವಿವರಗಳು
ಸಂಜೆ ಗಂಟೆ 4.00 ರಿಂದ ಶ್ರೀ ವಿಶ್ವಕರ್ಮ ಸಂಘ ಮತ್ತು ಕಾಳಿಕಾಂಬಾ ಮಹಿಳಾ ಭಜನಾ ಮಂಡಳಿಯ ಸದಸ್ಯೆಯರಿಂದ ಭಜನೆ.
ರಾತ್ರಿ 7.00ಕ್ಕೆ ಮಹಾಮಂಗಳಾರತಿ ಮತ್ತು ಎಳ್ಳು ಗಂಟು ದೀಪ ಬೆಳಗುವಿಕೆ.
ರಾತ್ರಿ 8.00ಕ್ಕೆ ಅನ್ನಪ್ರಸಾದ ವಿತರಣೆ.
ಭಕ್ತಾಭಿಮಾನಿಗಳ ತುಂಬು ಹೃದಯದ ಧನಸಹಾಯವನ್ನು ಆದರದಿಂದ ಸ್ವೀಕರಿಸಲಾಗುವುದು
ಸರ್ವರಿಗೂ ಆದರದ ಸ್ವಾಗತ ಬಯಸುವ
ಅಧ್ಯಕ್ಷರು ಹಾಗೂ ಕಾರ್ಯಕಾರಿ ಸಮಿತಿಯ ಸರ್ವ ಸದಸ್ಯರು ಶ್ರೀ ಕಾಳಿಕಾಂಬಾ ಸಮಾಜೋದ್ಧಾರಕ ಸಂಘ (ರಿ.)
ಶ್ರೀ ಕಾಳಿಕಾಂಬಾ ಭಜನಾ ಮಂಡಳಿ
ಸಾಂಸ್ಕೃತಿಕ ಮನೋರಂಜನಾ ಕಾರ್ಯಕ್ರಮ
ರಾತ್ರಿ 8.30 ರಿಂದ ಮಕ್ಕಳಿಂದ ವಿವಿಧ ವಿನೋದಾವಳಿ ಮತ್ತು ಸಂಘದ ಮಹಿಳಾ ಸದಸ್ಯೆಯರಿಂದ ‘ತುಳುನಾಡ ವೈಭವ’ ನೃತ್ಯ ರೂಪಕ
ರಾತ್ರಿ 9.30 ರಿಂದ ಸಂಘದ ಸದಸ್ಯರಿಂದ ತುಳುಹಾಸ್ಯಮಯ ನಾಟಕ ಕತೆ ಏರ್ ಬರೆಪೆರ್?
ರಚನೆ – ಸಂಗೀತ: ಬರವುದ ಬೊಳ್ಳಿ ರಾಜೇಶ್ ಆಚಾರ್ಯ, ಪರ್ಕಳ
ಸಾರಥ್ಯ: ಸತ್ಯನಾರಾಯಣ ಆಚಾರ್ಯ, ಗೋಳಿಕಟ್ಟೆ
ನಿರ್ದೇಶನ: ಪ್ರಕಾಶ್ ಆಚಾರ್ಯ, ಕುಕ್ಕೆಹಳ್ಳಿ