ಉಡುಪಿ: ಎಸ್.ಕೆ. ಗೋಲ್ಡ್ ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ ಆಪರೇಟಿವ್ ಸೊಸೈಟಿ ಲಿ. ಇದರ ಬೆಳ್ಳಂಪಳ್ಳಿ ಶಾಖೆಯು ಹವಾನಿಯಂತ್ರಿತವಾಗಿ ನವೀಕೃತಗೊಂಡಿದ್ದು, ಇದರ ಉದ್ಘಾಟನಾ ಸಮಾರಂಭ ಎ. 8 ರಂದು ಅದ್ಧೂರಿಯಾಗಿ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿದ ಪರಮಪೂಜ್ಯ ಜಗದ್ಗುರು ಅನಂತ ಶ್ರೀ ವಿಭೂಷಿತ ಶಿವ ಸುಜ್ಞಾನ ತೀರ್ಥ ಮಹಾಸ್ವಾಮೀಜಿಗಳವರು ಆಶೀರ್ವಚನ ನೀಡಿ, ಎಸ್.ಕೆ. ಗೋಲ್ಡ್ ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ ಆಪರೇಟಿವ್ ಸೊಸೈಟಿ ಸಾರ್ವಜನಿಕ ರಂಗಕ್ಕೆ ಅತ್ಯದ್ಬುತವಾದ ಸೇವೆಯನ್ನು ನೀಡಿದೆ. ಪದಾಧಿಕಾರಿಗಳು, ಸಿಬಂಧಿಗಳು, ಗ್ರಾಹಕರು ಎಲ್ಲರೂ ಸೇರಿ ಈ ಸಂಸ್ಥೆಯನ್ನು ಬೆಳೆಸಿದ್ದಾರೆ. ಎಲ್ಲರ ಸಂಯೋಜನೆಯ ಪ್ರತಿಫಲವೇ ಸಂಸ್ಥೆಯ ಸಾಧನೆಗೆ ಕಾರಣವಾಗಿದೆ. ಸಂಸ್ಥೆ ಹಲವಾರು ವರ್ಷಗಳಿಂದ ಸಾಮಾಜಿಕ ರಂಗಕ್ಕೂ, ಧಾರ್ಮಿಕ ರಂಗಕ್ಕೂ ಸೇವೆ ನೀಡುತ್ತ ಬಂದಿದೆ.ಮುಂದೆ ಇನ್ನಷ್ಟು ಬಹುಮುಖಿ ಕೆಲಸಗಳಿಗೆ ಈ ಶಾಖೆ ಪ್ರೇರಣೆ ನೀಡಲಿ ಎಂದರು.
ನಮ್ಮ ಸಂಸ್ಥೆ ಎನ್ನುವ ಭಾವನೆ ಜನರಲ್ಲಿ ಮೂಡಿಸಿದ ಹೆಮ್ಮೆಯ ಎಸ್.ಕೆ. ಗೋಲ್ಡ್ ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ ಆಪರೇಟಿವ್ ಸೊಸೈಟಿ: ಜಗದ್ಗುರು ಅನಂತ ಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮೀಜಿ
ಆನೆಗುಂದಿ ಮಹಾಸಂಸ್ಥಾನದ ಪರಮಪೂಜ್ಯ ಜಗದ್ಗುರು ಅನಂತ ಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮೀಜಿ ಅವರು ಉದ್ಘಾಟಿಸಿ, ಆಶೀರ್ವಚನ ನೀಡಿ ಒಟ್ಟು 18 ಶಾಖೆಗಳನ್ನು ಒಳಗೊಂಡು ಸಾರ್ವಜನಿಕ ರಂಗದಲ್ಲಿ ಮುನ್ನುಗ್ಗುತ್ತಿದೆ ಎಸ್.ಕೆ. ಗೋಲ್ಡ್ ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ ಆಪರೇಟಿವ್ ಸೊಸೈಟಿ ಸಂಸ್ಥೆ. ಸಂಸ್ಥೆಯೊಂದು ತಾನಷ್ಟೇ ಬೆಳೆಯದೇ ಸಮಾಜಮುಖಿಯಾಗಿ ಬೆಳೆಯುವುದೂ ಕೂಡ ಬಹಳ ಮುಖ್ಯ. ಆ ಕೆಲಸನ್ನು ಸಂಸ್ಥೆ ಇನ್ನಷ್ಟು ಮಾಡಲಿ ಎಂದರು. ಎಸ್.ಕೆ. ಗೋಲ್ಡ್ ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ ಆಪರೇಟಿವ್ ಸೊಸೈಟಿ ಸಮಾಜದ ಜೊತೆಗೆ ಬೆರೆತುಕೊಂಡು ಇದು ನಮ್ಮ ಸಂಸ್ಥೆ ಎನ್ನುವ ಭಾವನೆ ಜನರಲ್ಲಿ ಮೂಡಿಸಿದೆ ಎಂದರೆ ಅದು ಸಣ್ಣ ವಿಷಯಲ್ಲ ಎಂದರು.
ಎಲ್ಲರ ಸಹಕಾರ ಮತ್ತು ಪ್ರೀತಿಯಿಂದ ಸಂಸ್ಥೆ ಲಾಭ ಕಂಡಿದೆ: ಪಿ. ಉಪೇಂದ್ರ ಆಚಾರ್ಯ
ಎಸ್.ಕೆ.ಜಿ.ಐ ಕೋ ಆಪರೇಟಿವ್ ಸೊಸೈಟಿ ಮಂಗಳೂರು ಇದರ ಅಧ್ಯಕ್ಷರಾದ ಪಿ. ಉಪೇಂದ್ರ ಆಚಾರ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಈ ವರ್ಷ ಮೂರು ಶಾಖೆಗಳನ್ನು ತೆರೆಯುವ ಯೋಜನೆ ಇದೆ. ಮುಂದಿನ ದಿನಗಳಲ್ಲಿ ನಮ್ಮ ಇತಿ ಮಿತಿಗಳಲ್ಲಿ ಸಮಾಜಮುಖಿಯಾಗಿ ಇನ್ನಷ್ಟು ತೊಡಗಿಸಿಕೊಳ್ಳುವ ಮನಸ್ಸು ನಮ್ಮೆಲ್ಲರಿಗಿದೆ. ಸಿಬಂಧಿಗಳ ಗ್ರಾಹಕರ ಸಹಕಾರದಿಂದ ಠೇವಣಿಯಲ್ಲಿ ಶೇ.25 ವೃದ್ಧಿಯಾಗಿದೆ. ಒಂದೇ ವರ್ಷದಲ್ಲಿ 64 ಕೋಟಿ ಠೇವಣಿ ಸಂಗ್ರಹವಾಗಿದೆ. ಲಾಭದಲ್ಲಿ ಶೇ.33 ರಷ್ಟು ವೃದ್ಧಿಯಾಗಿದೆ. 8 ಕೋಟಿ 6 ಲಕ್ಷ ಲಾಭ ಪಡೆದಿದೆ. ಸಾಲದಲ್ಲಿ ಶೇ.25 ವೃದ್ಧಿಯಾಗಿದೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಭಾಗಹಿಸಿದ ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ನಿಗಮದ ಅಧ್ಯಕ್ಷರಾದ ಬಿ. ಜಯಕರ ಶೆಟ್ಟಿ ಇಂದ್ರಾಳಿ ಮಾತನಾಡಿ, ಗ್ರಾಹಕರಿಗೆ ಅತ್ಯುತ್ತಮ ಸೇವೆ ನೀಡುವಲ್ಲಿ ಎಸ್.ಕೆ. ಗೋಲ್ಡ್ ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ ಆಪರೇಟಿವ್ ಸೊಸೈಟಿ ಶ್ರಮಿಸಿದೆ.ಇದೀಗ ಆಧುನಿಕ ಸೌಲಭ್ಯಗಳೊಂದಿಗೆ ಹವಾನಿಯಂತ್ರಿತ ಶಾಖೆಯನ್ನು ಹೊಂದಿಕೊಂಡು ಗ್ರಾಹಕರಿಗೆ ಇನ್ನಷ್ಟು ಹತ್ತಿರವಾಗಿದೆ. ಸಂಸ್ಥೆಯೊಂದಕ್ಕೆ ಈ ಮೈಲಿಗಲ್ಲು ಸಂಭ್ರಮ ತರುವಂತದ್ದು ಎಂದರು.
ರೈತ ಸಹಕಾರಿ ಸಂಘದ ಅಧ್ಯಕ್ಷರಾದ ಬಿ ಅಶೋಕ್ ಕುಮಾರ್ ಶೆಟ್ಟಿ, ನಿವೃತ್ತ ಮುಖ್ಯ ಶಿಕ್ಷಕರಾದ ಸೀತಾರಾಮ ಶೆಟ್ಟಿಗಾರ್,
ವಿಶ್ವಕರ್ಮ ಸಮಾಜೋದ್ಧಾರಕ ಸಂಘದ ಅಧ್ಯಕ್ಷ ಅಚ್ಚುತ ಆಚಾರ್ಯ, ಕಟ್ಟಡ ಮಾಲಕರಾದ ಪ್ರಸನ್ನ ಪ್ರಭು ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಸಂಸ್ಥೆಗೆ ಶುಭ ಹಾರೈಸಿದರು.
ಸಾಧಕರಿಗೆ ಸನ್ಮಾನ: ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಮಂಜಯ್ಯ ಆಚಾರ್ಯ, ರಾಮು ಆಚಾರ್ಯ, ಸುಧಾಕರ ಸೇರಿಗಾರ್, ರತ್ನಾಕರ್ ಶೆಟ್ಟಿ, ಅಪ್ರಾಯ ಪ್ರಭು, ಗೋವಿಂದರಾಜ ಹೆಗ್ಡೆ ಇವರಿಗೆ ಸನ್ಮಾನಿಸಲಾಯಿತು.
ಹಾಗೂ ಗಣೇಶ್ ಆಚಾರ್ಯ ಎಂಜಿನಿಯರಿಂಗ್ ಎಸ್.ಜಿ.ಐ ಅಸೋಸಿಯೇಟ್ಸ್, ಜೋಕಟ್ಟೆ, ಮತ್ತು ಪ್ರಸಾದ್ ಆಚಾರ್ಯ ಕಾಂಟ್ರಕ್ಟರ್ & ಇಂಜಿನಿಯರ್ ಡೆಕೋರೇಟರ್ಸ್, ಪೆರ್ಡೂರು ಇವರನ್ನು ಸನ್ಮಾನಿಸಲಾಯಿತು.
ಅನಾರೋಗ್ಯದಿಂದ ಬಳಲುತ್ತಿದ್ದ ರವೀಂದ್ರ ಆಚಾರ್ಯ ಪೆರ್ಡೂರು ಇವರಿಗೆ ಎಸ್ ಕೆ ಗೋಲ್ಡ್ ಸ್ಮಿತ್ ಕೋ-ಆಪರೇಟಿವ್ ಸೊಸೈಟಿಯ ವತಿಯಿಂದ 10000 ರೂ.’ಯನ್ನು ನೀಡಲಾಯಿತು.
ಸಂಸ್ಥೆಯ ನಿರ್ದೇಶಕರಾದ ಕೆ.ಯಜ್ಞೇಶ್ವರ ಆಚಾರ್ಯ, ವೈ.ವಿ ವಿಶ್ವಜ್ಞಮೂರ್ತಿ, ವಿ. ಜಯ ಆಚಾರ್ಯ, ಕೆ ಶಶಿಕಾಂತ್ ಆಚಾರ್ಯ, ಮಲ್ಲಪ್ಪ ಎನ್. ಪತ್ತಾರ್, ಶ್ರೀಮತಿ ರೋಹಿಣಿ ಎಂ.ಪಿ., ಶ್ರೀಮತಿ ಜ್ಯೋತಿ ಎಂ. ವಿ., ರಮೇಶ್ ರಾವ್ ಯು., ಕೆ. ಪ್ರಕಾಶ್ ಆಚಾರ್ಯ, ಮಂಜುನಾಥ್ ಆಚಾರ್ಯ, ಚಂದ್ರಶೇಖರ್ ಎ. ಎಸ್. ಉಪಸಿತರಿದ್ದರು.
ಎಸ್ ಕೆ ಗೋಲ್ಡ್ ಸ್ಮಿತ್ ಇಂಡಸ್ಟ್ರಿಯಲ್ ಕೋ ಆಪರೇಟಿವ್ ಸೊಸೈಟಿಯ ಉಪಾಧ್ಯಕ್ಷ ಎ.ಆನಂದ ಆಚಾರ್ಯ ಸ್ವಾಗತಿಸಿದರು. ಎಸ್ ಕೆ ಗೋಲ್ಡ್ ಸ್ಮಿತ್ ಇಂಡಸ್ಟ್ರಿಯಲ್ ಕೋ ಆಪರೇಟಿವ್ ಸೊಸೈಟಿಯ ಪ್ರಧಾನ ವ್ಯವಸ್ಥಾಪಕ ಯಜ್ಞೇಶ್ವರ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಬೆಳ್ಳಂಪಳ್ಳಿ ಶಾಖಾ ಪ್ರಭಾರ ವ್ಯವಸ್ಥಾಪಕ ಮೋಹನದಾಸ್ ಆಚಾರ್ಯ ಟಿ.ಬಿ. ವಂದಿಸಿದರು. ಉಡುಪಿ ಶಾಖೆಯ ಪ್ರಭಾರ ಶ್ರೀಕಾಂತ್ ಹಾಗೂ ಮಂಗಳೂರು ಶಾಖಾ ಲೆಕ್ಕಾಧಿಕಾರಿ ಉಷಾ ಮನೋಜ್ ಕಾರ್ಯಕ್ರಮವನ್ನು ನಿರೂಪಿಸಿದರು.




















