ಕಾರ್ಕಳ: ಬ್ರಿಟಿಷ್ ಆದಿಪತ್ಯದ ಕಾಲದಲ್ಲಿ ನಾರಾಯಣ ಗುರುಗಳು ಸಾರಿದ ತತ್ವಗಳು ಇಂದಿನ ವೈಜ್ಙಾನಿಕ ಯುಗವೂ ಕೂಡಾ ಅನುಸರಿಸುವಂತದ್ದು ನಾರಾಯಣ ಗುರುಗಳು ತಮಗೆ ಸವಾಲಾಗಿದ್ದ ಜಾತಿ ವ್ಯವಸ್ಥೆಯ ಬಗ್ಗೆ ಧಾರ್ಮಿಕ ಹೋರಾಟವನ್ನು ಮಾಡಿ ಜಾತಿಯ ಅಂತರವನ್ನು ದೂರ ಮಾಡಿದರು. ಜನರಿಗೆ ಶಿಕ್ಷಣವನ್ನು ನೀಡುವುದಕ್ಕಿಂತ ಹೆಚ್ಚಾಗಿ ಚಿಂತನೆಗೆ ಒಳಮಾಡಿದರು, ನಮ್ಮನ್ನು ನಾವು ಅರಿಯದ ಹೊರತು ದೇವರ ದರ್ಶನ ಪಡೆಯಲು ಸಾಧ್ಯವಿಲ್ಲ ಹಾಗೂ ಇಂದು ನಾರಾಯಣ ಗುರುಗಳನ್ನು ಆರಾಧನೆಯ ದೃಷ್ಟಿಯಲ್ಲಿ ನೋಡುತ್ತಿದೇವೆ ವಿನಃ ಅವರ ತತ್ವಗಳನ್ನು ಅಳವಡಿಸಿಕೊಂಡಿಲ್ಲ ಮತ್ತು ಧರ್ಮಕ್ಕೆ ನಮ್ಮದೇ ಆದ ಬಣ್ಣವನ್ನು ನೀಡಿ ತಿರುಚುತ್ತಾ ಬಂದಿದ್ದೇವೆ. ನಾರಾಯಣ ಗುರುಗಳು ಯಾವುದೇ ಜನಾಂಗಕ್ಕೆ ಸಂಬಂಧಪಟ್ಟವರಲ್ಲ ಅವರು ಮಾನವತಾವಾದಿ ಎಂದು ಆಳ್ವಾಸ್ ಕಾಲೇಜಿನ ಉಪನ್ಯಾಸಕ ಡಾ. ಕೃಷ್ಣರಾಜ ಕರಬ ಹೇಳಿದರು.
ಇವರು ಶ್ರೀ ಭುವನೇಂದ್ರ ಕಾಲೇಜಿನಲ್ಲಿ ಬ್ರಹ್ಮಶ್ರೀ ನಾರಾಯಣಗುರು ಅಧ್ಯಯನ ಪೀಠ ಮಂಗಳಗಂಗೋತ್ರಿ ಹಾಗೂ ಶ್ರೀ ಭುವನೇಂದ್ರ ಕಾಲೇಜಿನ ಕನ್ನಡ ಸಂಘದ ಸಹಯೋಗದಲ್ಲಿ ನಡೆದ ಗುರುವಿನ ಅರಿವು ವಿಶೇಷ ಉಪನ್ಯಾಸ ಮಾಲಿಕೆ ಕಾರ್‍ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಎಲ್ಲರಿಗೂ ಒಂದೇ ಜಾತಿ ಒಂದೇ ದೇವರು ಎಂದು ಸಾರಿದ ಸಂತ ಸುಧಾರಕ ನಾರಾಯಣ ಗುರುಗಳು, ಮಹಿಳಾ ಸ್ವಾತಂತ್ರ್ಯದ ಬಗ್ಗೆ ಗುರುಗಳ ಪರಿಕಲ್ಪನೆ ಅದ್ಭುತ ಹಾಗೂ ಅವರ ಸತ್ವ ಸಂದೇಶ ಸಜ್ಜೀವನ ವಿಕಾಸ ಶ್ಲಾಘಿಸುವಂತದ್ದು ಎಂದು ಕಾರ್‍ಯಕ್ರಮದ ಸಂಯೋಜಕರು ಬ್ರಹ್ಮಶ್ರೀ ನಾರಾಯಣ ಗುರು ಅಧ್ಯಯನ ಪೀಠದ ನಿರ್ದೇಶಕ ಮುದ್ದು ಮೂಡುಬೆಳ್ಳೆ ಹೇಳಿದರು.
ಮಂಗಳೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯ ಹಾಗೂ ಕಾರ್‍ಯಕ್ರಮದ ಅತಿಥಿ ಮೋಹನ್ ಪಡಿವಾಳ್ ಮಾತನಾಡಿದರು.
ಕಾರ್‍ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ. ಮಂಜುನಾಥ ಎ. ಕೋಟ್ಯಾನ್ ವಹಿಸಿದ್ದರು. ಕಾರ್‍ಯಕ್ರಮದಲ್ಲಿ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ. ದತ್ತಾತ್ರೇಯ ಮಾರ್ಪಳ್ಳಿ, ಭೋದಕ ಸಿಬ್ಬಂದಿಗಳು ಹಾಗೂ ವಿದಾರ್ಥಿಗಳು ಉಪಸ್ಥಿತರಿದ್ದರು.
ಕನ್ನಡ ವಿಭಾಗದ ಮುಖ್ಯಸ್ಥೆ ಸರಸ್ವತಿ ಸ್ವಾಗತಿಸಿ, ವನಿತಾ ಶೆಟ್ಟಿ ವಂದಿಸಿ, ನವೀನ್ ಆರ್. ಭಟ್ ಕಾರ್‍ಯಕ್ರಮ ನಿರೂಪಿಸಿದರು.