ಇನ್ನು ಎಂಟು ದಿನ ಬಾಕಿ: ಚಂದ್ರಯಾನ-3 ಕ್ಕೊಂದು ಬಾಹ್ಯಾಕಾಶದ ಪ್ರತಿಸ್ಪರ್ಧಿ ರಶ್ಯಾದ ಲೂನಾ-25!!

ಅನಿರೀಕ್ಷಿತ ಬಾಹ್ಯಾಕಾಶ ಓಟದಲ್ಲಿ, ಭಾರತ ಮತ್ತು ರಷ್ಯಾ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯುವ ವಿಶ್ವದ ಪ್ರಥಮ ರಾಷ್ಟ್ರವಾಗಲು ಪೈಪೋಟಿ ನಡೆಸುತ್ತಿವೆ.

ರಷ್ಯಾ ಕಳೆದ ವಾರ ಲೂನಾ-25 ಮೂನ್ ಮಿಷನ್ ಅನ್ನು ಪ್ರಾರಂಭಿಸಿದ್ದು, ಇದು ಚಂದ್ರನನ್ನು ಭಾರತದ ಚಂದ್ರಯಾನ -3 ಕ್ಕೂ ಮುಂಚೆ ತಲುಪಬಹುದು ಎಂದು ಅಂದಾಜಿಸಲಾಗಿದೆ. ಚಂದ್ರಯಾನ-3 ರ ನಂತರ ಲೂನಾ-25 ಅನ್ನು ಉಡಾವಣೆ ಮಾಡಲಾಗಿದ್ದರೂ, ಅದು ಎರಡು ದಿನಗಳ ಮುನ್ನವೇ ಚಂದ್ರನ ಮೇಲೆ ಇಳಿಯಬಹುದು ಎನ್ನಲಾಗಿದೆ.

Image

 

ಲೂನಾ -25 ರ ನಿಗದಿತ ಲ್ಯಾಂಡಿಂಗ್ ಆಗಸ್ಟ್ 21 ರಿಂದ 23 ರ ನಡುವೆ ಇದೆ. ಇತ್ತ ಚಂದ್ರಯಾನ -3 ಸಹ ಆಗಸ್ಟ್ 23 ರಿಂದ 24 ರಂದು ಇಳಿಯುವ ನಿರೀಕ್ಷೆಯಿದೆ. ಚಂದ್ರನ ದಕ್ಷಿಣ ಧ್ರುವವು ಮುಂಬರುವ ಎಲ್ಲಾ ಪ್ರಮುಖ ಚಂದ್ರನ ಕಾರ್ಯಾಚರಣೆಗಳನ್ನು ಯೋಜಿಸಿರುವ ತಾಣವಾಗಿರುವುದರಿಂದ ಓಟವು ಇನ್ನಷ್ಟು ಆಸಕ್ತಿದಾಯಕವಾಗಿದೆ ಮತ್ತು ಪ್ರಪಂಚದ ಎಲ್ಲಾ ಬಾಹ್ಯಾಕಾಶ ಸಂಸ್ಥೆಗಳು ಚಂದ್ರನ ದಕ್ಷಿಣ ಧ್ರುವದ ಮೇಲೆ ಭಾರತ ಮತ್ತು ರಷ್ಯಾದ ಇಳಿಯುವಿಕೆಯನ್ನು ನಿರೀಕ್ಷಿಸುತ್ತಿವೆ.

ರಷ್ಯಾವು ಬರೋಬ್ಬರಿ ಐದು ದಶಕಗಳ ಬಳಿಕ ಮೂನ್ ಮಿಷನ್ ಅನ್ನು ಲಾಂಚ್ ಮಾಡಿದೆ. ರಷ್ಯಾದ ಕೊನೆಯ ಚಂದ್ರಯಾನ 1976 ರಲ್ಲಿ ನಡೆಸಿತ್ತು.

Image

ಲೂನಾ-25 ಒಂದು ವರ್ಷಗಳ ಕಾಲ ಚಂದ್ರನ ಮೇಲೆ ಮಣ್ಣನ್ನು ವಿಶ್ಲೇಷಿಸಿ, ರೆಗೊಲಿತ್‌ನ ಮೇಲಿನ ಪದರ ಮತ್ತು ಚಂದ್ರನ ಹೊರಗೋಳವನ್ನು ಅಧ್ಯಯನ ಮಾಡಲಿದೆ ಎಂದು ವರದಿಯಾಗಿದೆ.

ಚಂದ್ರನ ದಕ್ಷಿಣ ಧ್ರುವದಲ್ಲಿ ಮಂಜುಗಡ್ಡೆಯ ಉಪಸ್ಥಿತಿಯನ್ನು ಮೊತ್ತ ಮೊದಲಬಾರಿಗೆ ದೃಢಪಡಿಸಿದ್ದು ಭಾರತದ ಚಂದ್ರಯಾನ-1.