ಉಡುಪಿ: ವಿವಿಧ ಬೇಡಿಕೆಗಳನ್ನು ಮುಂದಿರಿಸಿ ಗ್ರಾಮೀಣ ಅಂಚೆ ನೌಕರರಿಂದ ಮುಷ್ಕರ

ಉಡುಪಿ: ಗ್ರಾಮೀಣ ಅಂಚೆ ನೌಕರರ (GDS) ಕೆಂದ್ರ ಜಂಟಿ ಕ್ರಿಯಾ ಸಮಿತಿಯು ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಿದ್ದು ಇದರ ಅಂಗವಾಗಿ ಉಡುಪಿಯಲ್ಲಿ ಕೂಡಾ ರಾಷ್ಟ್ರೀಯ ಗ್ರಾಮೀಣ ಅಂಚೆ ನೌಕರರಿಂದ ಸಾಂಕೇತಿಕ ಮುಷ್ಕರ ಇಲ್ಲಿನ ಪ್ರಧಾನ ಅಂಚೆ ಕಚೇರಿ ಮುಂದುಗಡೆ ನಡೆಯಿತು.

ಮುಷ್ಕರದಲ್ಲಿ ಉಡುಪಿ ಅಂಚೆ ವಿಭಾಗದ ವಿವಿಧ ಅಂಚೆ ಕಚೇರಿಗಳಿಂದ ಆಗಮಿಸಿದ್ದ ಗ್ರಾಮೀಣ ಅಂಚೆ ನೌಕರರು ಭಾಗವಹಿಸಿದ್ದರು. ರಾಷ್ಟ ವ್ಯಾಪಿ ನಡೆದ ಈ ಮುಷ್ಕರಕ್ಕೆ ರಾಷ್ಟ್ರೀಯ ಅಂಚೆ ನೌಕರರ ಸಂಘದ ಗ್ರೂಪ್ ಸಿ, ಪೋಸ್ಟ್ ಮ್ಯಾನ್ -ಎಂಟಿಎಸ್ ಸಂಘಗಳು ಬೆಂಬಲ ಸೂಚಿಸಿದ್ದವು.

ಈ ಸಂದರ್ಭದಲ್ಲಿ ನೌಕರರ ಬೇಡಿಕೆಗಳ ಮನವಿಯನ್ನು ಉಡುಪಿ ಅಂಚೆ ಅಧೀಕ್ಷಕರಿಗೆ ಸಲ್ಲಿಸಲಾಯಿತು. ಅಂಚೆ ಅಧೀಕ್ಷಕರು ಮನವಿಯನ್ನು ಸ್ವೀಕರಿಸಿದರು.

ರಾಷ್ಟ್ರೀಯ ಅಂಚೆ ನೌಕರರ ಸಂಘಗಳ ಪ್ರಮುಖ ನಾಯಕರಾದ ಸುರೇಶ್.ಕೆ., ಪುಷ್ಪ ರಾಜ್, ಸುಭಾಸ್ ತಿಂಗಳಾಯ, ಎನ್.ಎ.ನೇಜಾರ್, ಗಿಲ್ಬರ್ಟ್ ಲೊಬೊ, ಗುರುಪ್ರಸಾದ್, ಪ್ರಶಾಂತ್ ಇವರ ಮಾರ್ಗದರ್ಶನದಲ್ಲಿ ರಾಷ್ಟ್ರೀಯ ಗ್ರಾಮೀಣ ಅಂಚೆ ನೌಕರರ ಉಡುಪಿ ವಿಭಾಗೀಯ ಕಾರ್ಯದರ್ಶಿ ಪ್ರಸನ್ನ ಶೆಟ್ಟಿ ಕೇರಾಡಿ ಇವರ ನೇತೃತ್ವದಲ್ಲಿ ಮುಷ್ಕರ ಯಶಸ್ವಿಯಾಗಿ ನೆರವೇರಿತು.

ಈ ಸಂದರ್ಭದಲ್ಲಿ ಸಂಘಟನೆಯ ಪದಾಧಿಕಾರಿಗಳಾದ ಕಳತ್ತೂರು ಬಿ.ದಿವಾಕರ ಶೆಟ್ಟಿ, ಆನಂದ ಮರಕಾಲ ಮಂದಾರ್ತಿ, ಬಿ.ಸುರೇಶ ಸೇರಿಗಾರ್ ಬ್ರಹ್ಮಾವರ, ಶಂಕರ ಶೆಟ್ಟಿ ಹೆಸ್ಕುತ್ತೂರು, ಕಿಟ್ಟುಕುಮಾರ್ ಅವ್ರಾಲ್, ಅಶೋಕ ಕುಲಾಲ್ ಹೆಜಮಾಡಿ, ಪಿ.ಸುಬ್ರಾಯ ಪೈ ಪಡು ಎರ್ಮಾಳ್, ಪ್ರದೀಪ್ ಶೆಟ್ಟಿ ಕೆ ಮುಂಡೇಲ್, ನಿತ್ಯಾನಂದ ರಾವ್ ಸೈಬ್ರಕಟ್ಟೆ, ಸುರೇಶ್ ಪೈ ಕೆಂಜೂರು, ಬಿ ಪಾಂಡು ಚಾಂತಾರು, ಬಾಸ್ಕರ ಕಾಮತ್ ವಂಡಾರು, ಬಾಬಣ್ಣ ಪೂಜಾರಿ ವಂಡಾರು,ಕೇಶವ ಶೆಟ್ಟಿಗಾರ್ ಮಂದಾರ್ತಿ, ಕೇಶವ ಆಚಾರಿ ಹನೆಹಳ್ಳಿ, ಎನ್. ಭಾಸ್ಕರ ಕುಂಜಿಬೆಟ್ಟು, ಸುಹಾಸಿನಿ ಕೋಡಿಬೆಂಗ್ರೆ, ಸಲೋಚನ ಹನೆಹಳ್ಳಿ,ಜಯ ಚಾಂತಾರು, ರಕ್ಷಿತ ಹೇರೂರು ಮತ್ತಿತರು ಉಪಸ್ಥಿತರಿದ್ದರು.