ಗ್ರಾಮೀಣ ಬ್ಯಾಂಕ್’ಗಳಲ್ಲಿ 13,217 ಕ್ಲರ್ಕ್, ಪಿಒ ಹುದ್ದೆಗಳ ನೇಮಕಾತಿ; ಕೂಡಲೇ ಅರ್ಜಿ ಸಲ್ಲಿಸಿ!

ಇನ್ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ (IBPS) ಮತ್ತೊಮ್ಮೆ ಹುದ್ದೆಗಳ ನೇಮಕಾತಿಗಾಗಿ ಬೃಹತ್ ಅಧಿಸೂಚನೆಯನ್ನು ಹೊಡಿಸಿದೆ. ದೇಶಾದ್ಯಂತ ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳಲ್ಲಿ ಕ್ಲರ್ಕ್ ಮತ್ತು PO ಹುದ್ದೆಗಳು ಸೇರಿದಂತೆ ಒಟ್ಟು 13,217 ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ.

ಈ ನೇಮಕಾತಿಯೂ ಬಹುಪಯೋಗಿ ಕಚೇರಿ ಸಹಾಯಕ, ಅಧಿಕಾರಿ ಗ್ರೇಡ್–I, ಗ್ರೇಡ್-II, ಗ್ರೇಡ್-III ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸೆಪ್ಟೆಂಬರ್ 1, 2025 ರಿಂದ ಸೆಪ್ಟೆಂಬರ್ 21, 2025 ರವರೆಗೆ ಆನ್‌ಲೈನ್‌ನಲ್ಲಿ ಅಧಿಕೃತ ವೆಬ್‌ಸೈಟ್ ibps.inನಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಿದ ಬಳಿಕ ಪೂರ್ವಭಾವಿ ಪರೀಕ್ಷೆ 2025 ನವೆಂಬರ್​ನಲ್ಲಿ ನಡೆಯಲಿದ್ದು, ಫಲಿತಾಂಶ ಡಿಸೆಂಬರ್ ಇಲ್ಲ, 2026 ಜನವರಿಗೆ ಪ್ರಕಟಿಸಲಿದೆ.

ಈ ನೇಮಕಾತಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಯು ಪದವೀಧರರಾಗಿರಬೇಕು. ಜೊತೆಗೆ ಕೆಲವು ಹುದ್ದೆಗಳಿಗೆ ಅಭ್ಯರ್ಥಿಯು ಎಲೆಕ್ಟ್ರಾನಿಕ್ಸ್ , ಸಂವಹನ , ಕಂಪ್ಯೂಟರ್ ವಿಜ್ಞಾನ , ಮಾಹಿತಿ ತಂತ್ರಜ್ಞಾನ , CA ,MBA , ಕಾನೂನು (LLB) , ಕೃಷಿ , ತೋಟಗಾರಿಕೆ, ಡೈರಿ, ಪ್ರಾಣಿ , ಪಶುವೈದ್ಯಕೀಯ ವಿಜ್ಞಾನ , ಎಂಜಿನಿಯರಿಂಗ್ ಪದವಿ ಪಡೆದಿರಬೇಕು. ವಿವರವಾದ ಅರ್ಹತಾ ವಿವರಗಳಿಗಾಗಿ ಅಧಿಕೃತ ಅಧಿಸೂಚನೆಯನ್ನು ಪರಿಶೀಲಿಸಿ.IBPS RRB ನೇಮಕಾತಿ 2025 ರ ವಯಸ್ಸಿನ ಮಿತಿಯನ್ನು ವಿವಿಧ ಹುದ್ದೆಗಳಿಗೆ ಅನುಗುಣವಾಗಿ ನಿರ್ಧರಿಸಲಾಗಿದೆ. ಕಚೇರಿ ಸಹಾಯಕ (ಗುಮಾಸ್ತ) ಹುದ್ದೆಗೆ, ವಯೋಮಿತಿ 18-28 ವರ್ಷಗಳ ನಡುವೆ ಇರಬೇಕು. ಆಫೀಸರ್ ಗ್ರೇಡ್–I ಹುದ್ದೆಗಳಿಗೆ ಅಭ್ಯರ್ಥಿಯ ವಯಸ್ಸು 18-30 ವರ್ಷಗಳ ನಡುವೆ ಇರಬೇಕು. ಗ್ರೇಡ್–II ಹುದ್ದೆಗಳಿಗೆ 21-32 ವರ್ಷಗಳ ನಡುವೆ ಇರಬೇಕು. ಗ್ರೇಡ್–III ಹುದ್ದೆಗೆ 21-40 ವರ್ಷಗಳ ನಡುವೆ ಇರಬೇಕು.

ಅಧಿಕಾರಿ (ಗ್ರೇಡ್ I, II ಮತ್ತು III) SC/ST/PwBD ಅಭ್ಯರ್ಥಿಗಳು ರೂ.175 ಅರ್ಜಿ ಶುಲ್ಕವನ್ನು ಪಾವತಿಸಬೇಕು. ಉಳಿದ ಎಲ್ಲಾ ವರ್ಗದ ಅಭ್ಯರ್ಥಿಗಳು ರೂ.850 ಅರ್ಜಿ ಶುಲ್ಕವನ್ನು ಪಾವತಿಸಬೇಕು. ಕಚೇರಿ ಸಹಾಯಕ (ಗುಮಾಸ್ತ) SC/ST/PwBD ಅಭ್ಯರ್ಥಿಗಳು ರೂ.175 ಅರ್ಜಿ ಶುಲ್ಕವನ್ನು ಪಾವತಿಸಬೇಕು. ಇತರ ಎಲ್ಲಾ ವರ್ಗದ ಅಭ್ಯರ್ಥಿಗಳು ರೂ.850 ಅರ್ಜಿ ಶುಲ್ಕವನ್ನು ಪಾವತಿಸಬೇಕು.

ಐಬಿಪಿಎಸ್ ನೇಮಕಾತಿ ಪ್ರಕ್ರಿಯೆ ಒಟ್ಟು ಮೂರು ಹಂತಗಳಲ್ಲಿ ನಡೆಸಲಾಗುತ್ತದೆ. ಅಭ್ಯರ್ಥಿಯನ್ನು ಪ್ರಾಥಮಿಕ ಪರೀಕ್ಷೆ, ಮುಖ್ಯ ಪರೀಕ್ಷೆ ಹಾಗೂ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ. ಕ್ಲರ್ಕ್ ಹುದ್ದೆಗೆ ಪ್ರಾಥಮಿಕ ಮತ್ತು ಮುಖ್ಯ ಪರೀಕ್ಷೆಗಳ ಮೂಲಕ ಆಯ್ಕೆ ಮಾಡಲಾಗುತ್ತದೆ.