ಬಂಟಕಲ್: NMAM ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ನಿಟ್ಟೆ ಇಲ್ಲಿ ಫೆ. 22 ರಿಂದ 24 ರವರೆಗೆ ನಡೆದ “ಇನ್ಕ್ರಿಡಿಯಾ-24” ನಲ್ಲಿ ಶ್ರೀ ಮಧ್ವ ವಾದಿರಾಜ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಎಂಡ್ ಮ್ಯಾನೇಜ್ಮೆಂಟ್ ನ ವಿದ್ಯಾರ್ಥಿಗಳು ರನ್ನರ್ ಅಪ್ ಟ್ರೋಫಿ ಹಾಗೂ ರೂಪಾಯಿ 20000 ನಗದು
ಬಹುಮಾನವನ್ನು ಪಡೆದಿರುತ್ತಾರೆ.
“ಇನ್ಕ್ರಿಡಿಯಾ-24” ಇದರ ಅಂಗವಾಗಿ ನಡೆದ ವಿವಿಧ ಸ್ಪರ್ಧೆಗಳಾದ ಕೋಡ್ 45, ವೆಬೆಡ್, ಮೂವಿಡಿಯಾ- ಫೋಟೋಗ್ರಫಿ ಮತ್ತು ಲೈನ್ ಫಾಲೋವರ್ ಸ್ಫರ್ಧೆಗಳಲ್ಲಿ ಪ್ರಥಮ ಸ್ಥಾನಗಳಿಸಿದರೆ, ಶೆರ್ಲಾಕ್ಡ್ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಮತ್ತು ಮೀಮ್ ವಾರ್ಸ್ ಸ್ಫರ್ಧೆಯಲ್ಲಿ ದ್ವಿತೀಯ ಮತ್ತು ತೃತೀಯ ಸ್ಥಾನಗಳಿಸಿದ್ದಾರೆ.
ವಿದ್ಯಾರ್ಥಿಗಳ ಈ ಸಾಧನೆಗೆ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪಪ್ರಾಂಶುಪಾಲರು ಮತ್ತು ಪಠ್ಯೇತರ ಚಟುವಟಿಕೆಯ ಸಂಯೋಜಕರು ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.