ಉಡುಪಿ: ಬಂಟಕಲ್ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾ ವಿದ್ಯಾಲಯದ ವಿದ್ಯಾರ್ಥಿಗಳಿಗೆ ಶ್ರೀನಿವಾಸ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ವಲಚಿಲ್ ಇಲ್ಲಿ ದಿನಾಂಕ 16 ಮತ್ತು 17 ಎಪ್ರಿಲ್ 2026 ರಂದು ನಡೆದ ರಾಷ್ಟ್ರೀಯ ಮಟ್ಟದ ತಾಂತ್ರಿಕ ಮತ್ತು ಸಾಂಸ್ಕೃತಿಕ ಹಬ್ಬ, ಇನ್ವಿಷನ್ 2026 ರಲ್ಲಿ ರನ್ನರ್ -ಅಪ್ ಚಾಂಪಿಯನ್ ಶಿಪ್ ಅನ್ನು ಪಡೆದಿರುತ್ತಾರೆ.
ಗಣಕ ಯಂತ್ರ ವಿಭಾಗದ ವಿದ್ಯಾರ್ಥಿಗಳಾದ ರೋಹನ್ ಮೆಂಡನ್ ಮತ್ತು ಮೊಹಮ್ಮದ್ ಜುನೈದ್ ಇವರು “ಅನಿಮೆ ಕ್ವಿಜ್” ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಹಾಗೂ ಲೈನ್ ಫಾಲೋವರ್ ಸ್ಪರ್ಧೆಯಲ್ಲಿ ಗಣಕ ಯಂತ್ರ ವಿಭಾಗದ ಗೌರವ ಶೆಟ್ಟಿ, ಶ್ರೀ ಕಾರ್ತಿಕ್, ಕೃಷ್ ಬಿ ಪೂಜಾರಿ ಮತ್ತು ಪ್ರಜ್ವಲ್ ಜಿ ಮೋಯ್ಲಿ ಇವರು ಪ್ರಥಮ ಬಹುಮಾನ ಮತ್ತು ಗೌತಮ್, ಬಿ ಅಖಿಲೇಶ್ ಶೆಟ್ಟಿ, ಶ್ರೀ ನಿಶಾಂತ್ ಮತ್ತು ಶ್ರೀ ನವೀನ್ ಎಸ್ ದೇವಾಡಿಗ ಇವರು ದ್ವಿತೀಯ ಬಹುಮಾನ ಪಡೆದಿರುತ್ತಾರೆ.
ವಿದ್ಯಾರ್ಥಿಗಳ ಈ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಸೋದೆ ಶಿಕ್ಷಣ ಸಮೂಹ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಸಂಸ್ಥೆಯ ಪ್ರಾಂಶುಪಾಲರು ಹರ್ಷ ವ್ಯಕ್ತಪಡಿಸಿದ್ದಾರೆ.

















