ಕಟೀಲ್ ದೇವಸ್ಥಾನದಲ್ಲಿ ಬದಲಾಗಿದೆ ರೂಲ್ಸ್: ಭೇಟಿ ನೀಡುವ ಮುನ್ನ ಈ ವಿಷಯ ತಿಳಿದಿರಲಿ

ಕಟೀಲು: ಇಲ್ಲಿನ ಶ್ರೀ ದುರ್ಗಾ ಪರಮೇಶ್ವರಿ Kateel Durga Parameshwari Temple ದೇವಸ್ಥಾನದಲ್ಲಿ ಭಕ್ತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆ, ಕ್ಷೇತ್ರದ ಪಾವಿತ್ರ್ಯತೆ ಮತ್ತು ಶಿಸ್ತು ಕಾಪಾಡಲು ದೇವಸ್ಥಾನ ಆಡಳಿತ ಮಂಡಳಿ ಹಲವು ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸಿದೆ. ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತರು ಈ ನಿಯಮಗಳನ್ನು ಮುಂಚಿತವಾಗಿ ತಿಳಿದುಕೊಂಡು ಭೇಟಿ ನೀಡುವುದು ಒಳ್ಳೆಯದು.

ಸಂಪೂರ್ಣ ನಿಷೇಧ

  • ಮೊಬೈಲ್ ಬಳಕೆ ಮತ್ತು ಛಾಯಾಗ್ರಹಣ ಸಂಪೂರ್ಣ ಬ್ಯಾನ್
  • ಚರ್ಮದ ವಸ್ತುಗಳು, ಛತ್ರಿ, ಕೋಲು ಹಾಗೂ ಪ್ರಾಣಿಗಳನ್ನು ಒಳಗೆ ತರಲು ಅನುಮತಿ ಇಲ್ಲ
  • ದೇವಸ್ಥಾನದ ಒಳಗೆ ಹಾಗೂ ಹೊರಭಾಗಗಳಲ್ಲಿ ಧೂಮಪಾನ, ಗುಟ್ಕಾ, ತಂಬಾಕು ಸೇವನೆ ಮತ್ತು ಉಗುಳುವುದು ನಿಷೇಧ
  • ರಥಬೀದಿ ಮತ್ತು ನಂದಿನಿ ನದಿಯ ಸುತ್ತಮುತ್ತ ಸ್ವಚ್ಛತೆ ಕಾಪಾಡುವುದು ಕಡ್ಡಾಯ
  • ಎಳನೀರು ಸೇರಿದಂತೆ ಹೊರಗಿನ ಆಹಾರ/ಪಾನೀಯ ಸೇವನೆಗೆ ಅವಕಾಶ ಇಲ್ಲ

ಉಡುಗೆ ಮತ್ತು ಆಚರಣೆ ನಿಯಮಗಳು

  • ಭಾರತೀಯ ಸಾಂಪ್ರದಾಯಿಕ ಉಡುಪು ಧರಿಸಿ ಮಾತ್ರ ದೇವಸ್ಥಾನ ಪ್ರವೇಶ
  • ಸ್ನಾನ ಮಾಡಿ ಶುದ್ಧತೆಯಿಂದ ಬರಬೇಕು
  • ಮಾಂಸಾಹಾರ ಅಥವಾ ಮದ್ಯ ಸೇವಿಸಿ ಬಂದವರಿಗೆ ಪ್ರವೇಶವಿಲ್ಲ
  • ಮೃತದೇಹದ ದರ್ಶನ ಪಡೆದಿದ್ದರೆ ಶುದ್ಧ ಸ್ನಾನವಿಲ್ಲದೆ ದೇವಸ್ಥಾನ ಪ್ರವೇಶಿಸಬಾರದು
  • ತೀವ್ರ ಗಾಯಗಳಿರುವವರಿಗೆ ಪ್ರವೇಶ ನಿರ್ಬಂಧ
  • ಮರಣ ಅಥವಾ ಜನನ ಸೂತಕದ ಅವಧಿಯಲ್ಲಿ ದೇವಸ್ಥಾನ ಪ್ರವೇಶ ನಿಷೇಧ

ಮಹಿಳೆಯರಿಗೆ ಸಂಬಂಧಿಸಿದ ನಿಯಮಗಳು

  • ಗರ್ಭಿಣಿಯರು 7 ತಿಂಗಳ ನಂತರ ದೇವಸ್ಥಾನಕ್ಕೆ ಬಾರದಿರಲು ಸೂಚನೆ
  • ಮುಟ್ಟಿನ ಅವಧಿಯ 5 ದಿನಗಳವರೆಗೆ ಮಹಿಳೆಯರಿಗೆ ಪ್ರವೇಶವಿಲ್ಲ

ಪೂಜೆ ಮತ್ತು ಪ್ರಸಾದ ಸಂಬಂಧಿತ ಸೂಚನೆಗಳು

  • ಶ್ರೀ ದೇವಿಗೆ ಬಾಳೆ ಹಗ್ಗದಲ್ಲಿ ನೇಯ್ದ ಮಲ್ಲಿಗೆ ಹೂವನ್ನೇ ಅರ್ಪಿಸಬೇಕು
  • ಏಕಾದಶಿ ದಿನ ವಿಶೇಷ ಪೂಜೆ ಇರುವುದಿಲ್ಲ
  • ದೇವಸ್ಥಾನದೊಳಗೆ ಅನಗತ್ಯ ಮಾತುಕತೆ ತಪ್ಪಿಸಲು ಸೂಚನೆ
  • ಪ್ರಸಾದ ಹೊರತುಪಡಿಸಿ ಬೇರೆ ಆಹಾರ ಸೇವನೆ ನಿಷೇಧ
  • ಅಮೂಲ್ಯ ವಸ್ತುಗಳ ಜವಾಬ್ದಾರಿ ಭಕ್ತರದೇ

ದೇವಸ್ಥಾನ ಆಡಳಿತ ಮಂಡಳಿ, ಹೆಚ್ಚಿನ ಜನಸಂದಣಿಯ ದಿನಗಳಲ್ಲಿ ಅನ್ನಪ್ರಸಾದ ಹಾಗೂ ವಸತಿ ವ್ಯವಸ್ಥೆಯಲ್ಲಿ ವ್ಯತ್ಯಯ ಉಂಟಾದರೆ ಭಕ್ತರು ಸಹಕರಿಸುವಂತೆ ಮನವಿ ಮಾಡಿದೆ.