ಬನ್ನಂಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಲೋಕಕಲ್ಯಾಣಾರ್ಥ ರುದ್ರಯಾಗ ಸಂಪನ್ನ

ಬನ್ನಂಜೆ: ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸೋಮವಾರದಂದು ಲೋಕ ಕಲ್ಯಾಣಾರ್ಥವಾಗಿ ದೇವರ ಸನ್ನಿಧಿಯಲ್ಲಿ ಶಶಿಕಾಂತ್ ತಂತ್ರಿಗಳ ನೇತೃತ್ವದಲ್ಲಿ ಶತರುದ್ರಾಭಿಷೇಕ, ನವಕ ಪ್ರಧಾನ ಪೂರ್ವಕ ರುದ್ರಯಾಗ ಜರಗಿತು. ಬೆಳ್ಳಿಗೆ 8 ಗಂಟೆಗೆ ಸಾಮೂಹಿಕ ಪ್ರಾರ್ಥನೆ, ಶತರುದ್ರಾಭಿಷೇಕ, ನವಕ ಪ್ರಧಾನ ಹೋಮ 11 ಗಂಟೆಗೆ ಪೂರ್ಣಾಹುತಿ, ಪಲ್ಲಪೂಜೆ , ಮಹಾಪೂಜೆ ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ನಡೆದು ನೂರಾರು ಭಕ್ತರು ಭೋಜನ ಪ್ರಸಾದ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಹರೀಶ್ ರಾಮ್ ಬನ್ನಂಜೆ, ಉಡುಪಿ ಶಾಸಕ ಯಶಪಾಲ್ ಸುವರ್ಣ, ವಾಸ್ತು ತಜ್ಞ ಸುಬ್ರಮಣ್ಯ ಭಟ್, ಪ್ರಭಾಕರ್ ಪೂಜಾರಿ, ನಗರ ಸಭಾಸದಸ್ಯೆ ಸವಿತಾ ಹರೀಶ್ ರಾಮ್, ಅರ್ಚಕ ವಾಸುದೇವ ಉಪಧ್ಯಾ, ಸಮಿತಿಯ ಸದಸ್ಯರಾದ ಸುರೇಶ ಸೇರಿಗಾರ್, ವಿಠಲ್ ಶೆಟ್ಟಿ , ದಯಾನಂದ ಕಲ್ಮಾಡಿ, ಭುಜಂಗ ಶೆಟ್ಟಿ , ಸುಧಾಕರ್ ಮಲ್ಯ, ಅನುಪಮಾ ಆನಂದ ಸುವರ್ಣ, ಅಶ್ವಿನಿ ಶೆಟ್ಟಿ ಹಾಗೂ ಭಕ್ತರು ಉಪಸ್ಥಿತರಿದ್ದರು.