ಐಪಿಎಲ್ 2022: ಮೇಲ್ವಿಚಾರಕರು ಮತ್ತು ಮೈದಾನ ಸಿಬ್ಬಂದಿಗಳಿಗೆ ರೂ 1.25 ಕೋಟಿ ಬಹುಮಾನವನ್ನು ಘೋಷಿಸಿದ ಬಿಸಿಸಿಐ

ನವದೆಹಲಿ: ಸೋಮವಾರ, ಮೇ 30 ರಂದು ಐಪಿಎಲ್ 2022 ಅನ್ನು ಆಯೋಜಿಸಿದ ಎಲ್ಲಾ 6 ಸ್ಥಳಗಳ ಮೇಲ್ವಿಚಾರಕರು ಮತ್ತು ಮೈದಾನದ ಸಿಬ್ಬಂದಿಯನ್ನು ಹೊಗಳಿದ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕಾರ್ಯದರ್ಶಿ ಜಯ್ ಶಾ, ಅವರೆಲ್ಲಾ ಈ ಯಶಸ್ವಿ ಋತುವಿನ ‘ಅನ್ ಸಂಗ್ ಹೀರೋಗಳು’ ಎಂದು ಬಣ್ಣಿಸಿದ್ದಾರೆ.

ಐಪಿಎಲ್ 2022 ಸೀಸನ್ ಅನ್ನು ಆಯೋಜಿಸಿದ ಎಲ್ಲಾ 6 ಸ್ಥಳಗಳಲ್ಲಿ ಮೇಲ್ವಿಚಾರಕರು ಮತ್ತು ಮೈದಾನದ ಸಿಬ್ಬಂದಿಗಳಿಗೆ 1.25 ಕೋಟಿ ರೂಪಾಯಿ ಬಹುಮಾನವನ್ನು ಬಿಸಿಸಿಐ ಘೋಷಿಸಿದೆ. ಮುಂಬೈನ ವಾಂಖೆಡೆ ಸ್ಟೇಡಿಯಂ, ಬ್ರಬೋರ್ನ್ ಸ್ಟೇಡಿಯಂ ಮತ್ತು ಡಿವೈ ಪಾಟೀಲ್ ಸ್ಟೇಡಿಯಂ ಹಾಗೂ ಪುಣೆಯ ಎಂಸಿಎ ಸ್ಟೇಡಿಯಂನ ಮೇಲ್ವಿಚಾರಕರು ಮತ್ತು ಮೈದಾನ ಸಿಬ್ಬಂದಿ ತಲಾ 25 ಲಕ್ಷ ರೂ. ಹಾಗೂ ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮತ್ತು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನ ಮೇಲ್ವಿಚಾರಕರು ಮತ್ತು ಮೈದಾನ ಸಿಬ್ಬಂದಿ ತಲಾ 12.5 ಲಕ್ಷ ರೂ ಗಳ ಬಹುಮಾನವನ್ನು ಪಡೆಯಲಿದ್ದಾರೆ.

ಐಪಿಎಲ್ 2022 ರಲ್ಲಿ 6 ಸ್ಥಳಗಳು 74 ಪಂದ್ಯಗಳನ್ನು ಆಯೋಜಿಸಿದ್ದು, ಎಲ್ಲಾ ಸ್ಥಳಗಳ ಮೇಲ್ವಿಚಾರಕರು ಮತ್ತು ಮೈದಾನ ಸಿಬ್ಬಂದಿಗಳ ಕಠಿಣ ಪರಿಶ್ರಮವನ್ನು ಗುರುತಿಸುವ ನಿಟ್ಟಿನಲ್ಲಿ ಈ ಬಹುಮಾನವನ್ನು ಘೋಷಿಸಲಾಗಿದೆ.