ಆರ್‌ಆರ್‌ಆರ್ ಸಿನಿಮಾ ವಿವಾದ: ನಿರ್ದೇಶಕ ರಾಜಮೌಳಿಗೆ ಬೆದರಿಕೆ

ಹೈದರಾಬಾದ್: ಖ್ಯಾತ ನಿರ್ದೇಶಕ ರಾಜಮೌಳಿ ಪರಿಕಲ್ಪನೆಯಲ್ಲಿ ಮೂಡಿಬರುತ್ತಿರುವ ತೆಲುಗಿನ ಬಹುನಿರೀಕ್ಷಿತ ಸಿನಿಮಾ ‘ಆರ್‌ಆರ್‌ಆರ್’ ಇದೀಗ ವಿವಾದಕ್ಕೆ ಗುರಿಯಾಗಿದೆ.

ನಿರ್ದೇಶಕ ರಾಜಮೌಳಿ ಇತ್ತೀಚೆಗೆ ಬಿಡುಗಡೆ ಮಾಡಿರುವ ಟೀಸರ್ ನಲ್ಲಿ ಜೂನಿಯರ್ ಎನ್‌ಟಿಆರ್ ಧರಿಸಿದ್ದ ‘ಸ್ಕಲ್‌ ಕ್ಯಾಪ್’ (ಮುಸ್ಲಿಮರು ಧರಿಸುವ ಸಾಂಪ್ರದಾಯಿಕ ಟೋಪಿ) ವಿವಾದಕ್ಕೆ ಕಾರಣವಾಗಿದೆ. ಈ ವಿಷಯಕ್ಕೆ ಸಂಬಂಧಿಸಿ ಬಿಜೆಪಿ ನಾಯಕರೊಬ್ಬರಿಂದ ಬೆದರಿಕೆ ಕರೆ ಕೂಡ ಬಂದಿದೆ ಎಂದು ಹೇಳಲಾಗುತ್ತಿದೆ.

ಚಿತ್ರದ ಶೂಟಿಂಗ್ ಪ್ರಗತಿಯಲ್ಲಿದ್ದು, ಈ ನಡುವೆ ಎನ್‌ಟಿಆರ್ ಪಾತ್ರದ ಪರಿಚಯಕ್ಕಾಗಿ ಬಿಡುಗಡೆ ಮಾಡಿದ್ದ ಟೀಸರ್‌ನಲ್ಲಿ ಕೋಮರಾಮ್ ಭೀಮ್‌ ಪಾತ್ರದಲ್ಲಿ ಎನ್‌ಟಿಆರ್ ಸ್ಕಲ್‌ ಕ್ಯಾಪ್ ಧರಿಸಿದ್ದರು.

ಆರ್‌ಆರ್‌ಆರ್‌ ಸಿನಿಮಾ ಸ್ವಾತಂತ್ರ್ಯ ಹೋರಾಟಗಾರರಾದ ಕೋಮರಾಮ್‌ ಭೀಮ್‌ ಹಾಗೂ ಅಲ್ಲೂರಿ ಸೀತಾರಾಮ ರಾಜು ಅವರ ನಡುವಿನ ಸ್ನೇಹದ ಕಥೆಯನ್ನು ಹೊಂದಿದೆ.