ಎಸ್.ಎಸ್ ರಾಜಮೌಳಿಯವರ ಆರ್.ಆರ್.ಆರ್ ಚಿತ್ರವು 2023 ನೇ ಸಾಲಿನ ಗೋಲ್ಡನ್ ಗ್ಲೋಬ್ ಪ್ರಶಸ್ತಿಗಳಲ್ಲಿ ಅದರ ಹಿಟ್ ಟ್ರ್ಯಾಕ್ “ನಾಟು ನಾಟು” ಗಾಗಿ ಅತ್ಯುತ್ತಮ ಮೂಲ ಹಾಡು ವಿಭಾಗದಲ್ಲಿ ಚಿನ್ನದ ಟ್ರೋಫಿಯನ್ನು ಗೆದ್ದು ಬೀಗಿದೆ. ತೆಲುಗು ಚಲನಚಿತ್ರವು ‘ಅತ್ಯುತ್ತಮ ಚಿತ್ರ-ಇಂಗ್ಲಿಷೇತರ’ ವಿಭಾಗದಲ್ಲಿಯೂ ನಾಮನಿರ್ದೇಶನಗೊಂಡಿದೆ.
ಸಂಗೀತ ನಿರ್ದೇಶಕ ಎಂ.ಎಂ ಕೀರವಾಣಿಯವರು ಪ್ರಶಸ್ತಿ ಸ್ವೀಕರಿಸಿ ಇಡೀ ತಂಡಕ್ಕೆ ಧನ್ಯವಾದಗಳನ್ನು ಸಮರ್ಪಿಸಿದ್ದಾರೆ. ಕಾಲ ಭೈರವ ಮತ್ತು ರಾಹುಲ್ ಸಿಪ್ಲಿಗುಂಜ್ ಹಾಡಿಗೆ ಸಾಹಿತ್ಯ ಬರೆದಿದ್ದಾರೆ.
MM Keeravaani’s #GoldenGlobes2023 acceptance Speech!! ❤️🔥❤️🔥 #RRRMovie #NaatuNaatu pic.twitter.com/9q7DY7Pn5G
— RRR Movie (@RRRMovie) January 11, 2023
ಆರ್.ಆರ್.ಆರ್ ಜಾಗತಿಕ ಗಲ್ಲಾಪೆಟ್ಟಿಗೆಯಲ್ಲಿ 1,200 ಕೋಟಿ ರೂ ಬಾಚಿದೆ.
ಪ್ರಶಸ್ತಿ ಸ್ವೀಕರಿಸುವ ಸಂದರ್ಭದಲ್ಲಿ ಚಿತ್ರದ ನಿರ್ದೇಶಕ ರಾಜಮೌಳಿ, ಎನ್.ಟಿ.ಆರ್ ಮತ್ತು ರಾಮ ಚರಣ್ ತೇಜಾ ಹಾಜರಿದ್ದರು.