ರೋಟರಿ ಟ್ರಸ್ಟ್ ನಿಂದ ಕನ್ನಡ ಮಾಧ್ಯಮ ಶಾಲಾ ವಾಹನಕ್ಕೆ 23.00 ಲಕ್ಷ ದೇಣಿಗೆ

ಉಡುಪಿ: ಕನ್ನಡ ಮಾಧ್ಯಮ ಶಾಲೆಗಳನ್ನು ಉಳಿಸಲು ಆಧುನಿಕ ಸವಲತ್ತುಗಳಿಂದ ಮಕ್ಕಳಿಗೆ ಶಿಕ್ಷಣದಲ್ಲಿ ಕೊರತೆಯಾಗದಂತೆ ಸ್ಥಳೀಯ ಮತ್ತು ಕನ್ನಡಾಭಿಮಾನಿಗಳ ಸಹಕಾರದಿಂದ ಶುಲ್ಕರಹಿತ, ಮೌಲ್ಯಯುತ ಶಿಕ್ಷಣ ಕೊಡುತ್ತಿರುವ ಪಟ್ಲ ರೂರಲ್ ಎಜುಕೇಶನ್ ಸೊಸೈಟಿಯ ಯುಎಸ್ ನಾಯಕ್ ಪ್ರೌಢಶಾಲೆಗೆ ನಗರ ಪ್ರದೇಶಗಳ ಮಕ್ಕಳು ಬರುತ್ತಿರುವುದು ಸಂತೋಷದ ವಿಚಾರ. ತಾನು ಹುಟ್ಟಿ ಬೆಳೆದು ಊರಿನಲ್ಲಿ ಕಲಿತ ಶಾಲೆಗೆ ಅಗತ್ಯವಾಗಿ ಬೇಕಾಗಿದ್ದ ಬಸ್ಸಿನ ವ್ಯವಸ್ಥೆಗೆ ಗಣೇಶ್ ನಾಯಕ್ ಅವರ ಕೊಡುಗೆ ನೀಡಿದ್ದು ಇದು ಎಲ್ಲರಿಗೂ ಪ್ರೇರಣೆ.
ಶಾಲಾ ಪುನರ್ ನಿರ್ಮಾಣ ಮತ್ತು ಆಧುನೀಕರಣ ಯೋಜನೆ ವೇಗವಾಗಿ ಸಾಗುತ್ತಿದೆ. ಸುಸಜ್ಜಿತ ವಿದ್ಯಾರ್ಥಿನಿಲಯ ನಿರ್ಮಾಣವಾಗಿದೆ. ಬಾಲನಿಕೇತನ, ಗುರುಗೃಹ, ನಿರ್ಮಾಣ ಕಾರ್ಯ ಮುಕ್ತಾಯ ಹಂತದಲ್ಲಿದೆ ಎಂದು ರೋಟರಿ ಅಧ್ಯಕ್ಷ ನಿತ್ಯಾನಂದ ನಾಯಕ್ ಹೇಳಿದರು.

ಮಣಿಪಾಲ ಟೌನ್ ರೋಟರಿಯ ಮಾಜಿ ಅಧ್ಯಕ್ಷ ರೋ. ಗಣೇಶ್ ನಾಯಕ್ ಮತ್ತು ಶ್ರೀಮತಿ ಶೈಲಾ ಜಿ. ನಾಯಕ್ ಅವರಿಂದ ಶಾಲಾ ವಾಹನಕ್ಕಾಗಿ ಕೊಡಲ್ಪಟ್ಟ  23.00 ಲಕ್ಷ ರೂಪಾಯಿಗಳನ್ನು ಪಟ್ಲ ಯು.ಎಸ್.ನಾಯಕ್ ಪ್ರೌಢಶಾಲೆಗೆ ಹಸ್ತಾಂತರಿಸಲಾಯಿತು.

ಟ್ರಸ್ಟ್‌ ನ ಅಧ್ಯಕ್ಷ ಡಾ. ಶೇಸಪ್ಪ ರೈ, ರೊ. ಶ್ರೀಧರ್ ಡಿ. ಇವರ ಉಪಸ್ಥಿತಿಯಲ್ಲಿ ಶಾಲಾ ಮುಖ್ಯೋಪಾಧ್ಯಾಯ ಶ್ರೀಕಾಂತ ಪ್ರಭು, ರೂರಲ್ ಎಜುಕೇಶನ್ ಸೊಸೈಟಿಯ ಪದಾಧಿಕಾರಿಗಳಾದ ಪ್ರಕಾಶ ವಿ. ನಾಯಕ್ ಬೆಲ್ಪತ್ರೆ ಮತ್ತು ಶ್ರೀಕಾಂತ ಕಾಮತ್ ಇವರು ದೇಣಿಗೆಯನ್ನು ಸ್ವೀಕರಿಸಿದರು.