ಕಾರ್ಕಳ: ರೋಟರಿ ಆನ್ಸ್ ಕ್ಲಬ್ ನ ಪದಗ್ರಹಣ ಸಮಾರಂಭ

ಕಾರ್ಕಳ: ರೋಟರಿ ಆನ್ಸ್ ಕ್ಲಬ್ ನ ಪದಗ್ರಹಣ ಇದರ 2020-21 ಸಾಲಿನ ರಮಿತ ಶೈಲೆಂದ್ರ ರಾವ್ ಅವರ ಅಧ್ಯಕ್ಷತೆಯ ನೂತನ ಪದಗ್ರಹಣ ಸಮಾರಂಭವು ಜುಲೈ 15 ರಂದು ರೋಟರಿ ಬಾಲ ಭವನದಲ್ಲಿ ನೆರವೇರಿತು.
ರೋಟರಿ ಮಾತ್ರ ಸಂಸ್ಥೆಯ ಅಧ್ಯಕ್ಷರು ಈ ಪದಗ್ರಹಣ ಕಾರ್ಯಕ್ರಮವನ್ನು ನೆರವೇರಿಸಿದರು.
ಮುಖ್ಯ ಅತಿಥಿಯಾಗಿ ನಿವೃತ್ತ ಪ್ರಾಂಶುಪಾಲೆ ಮಿತ್ರ ಪ್ರಭ ಹೆಗಡೆ ಭಾಗವಹಿಸಿ ಮಾತನಾಡಿ, ಹೆಣ್ಣು ಸ್ವಾಭಿಮಾನಿ ಆಗಿ ನಿಲ್ಲಬೇಕು, ಎಲ್ಲಾ ಕ್ಷೇತ್ರದಲ್ಲೂ ತನ್ನನ್ನು ತಾನು ತೊಡಗಿಸಿಕೊಳ್ಳಬೇಕು, ಮಹಿಳೆಯರು ಮುಂದೆ ಬಂದು ಸಮಾಜಮುಖಿಯಾಗಿ ಕಾರ್ಯನಿರ್ವಹಿಸಬೇಕು ಎಂದರು.
ಅಧ್ಯಕ್ಷೆಯಾಗಿ ಅಧಿಕಾರವನ್ನು ಸ್ವೀಕರಿಸಿದ ರಮಿತಾ ಶೈಲೇಂದ್ರ ರಾವ್, ತನ್ನ ಅಧಿಕಾರವಧಿಯನ್ನು  ಉತ್ತಮವಾಗಿ ಬಳಸಿಕೊಳ್ಳುತ್ತೇನೆ ಎಂದರು.
ಕಾರ್ಯಕ್ರಮದಲ್ಲಿ ಮೂರು ಬಡಕುಟುಂಬಗಳಿಗೆ ಮಹಿಳಾ ಸಹಾಯವಾಣಿಯ ಮೂಲಕ ದಿನಸಿ ಸಾಮಾನುಗಳ ವಿತರಣೆ, ಸರಕಾರಿ ಆಸ್ಪತ್ರೆ ಕಾರ್ಕಳಕ್ಕೆ ಕುಡಿಯುವ ನೀರಿನ ವ್ಯವಸ್ಥೆ, ಮಗುವಿನ ಶಸ್ತ್ರಚಿಕಿತ್ಸೆಗೆ ಧನಸಹಾಯ, ಅಗತ್ಯ ಇರುವವರಿಗೆ ಲೇಡೀಸ್ ಗೇಟಿನ ವಿತರಣೆ ಮತ್ತು ಶಾಲಾ ಪುಸ್ತಕದ ವಿತರಣೆಯನ್ನು ಆಶಾ ಕಾರ್ಯಕರ್ತರಾದ ಸರೋಜಿನಿ ಹಾಗೂ ಶೈಲಜಾ ಭಟ್ ಅವರಿಗೆ ಗುರು ನಮನ ಕಾರ್ಯಕ್ರಮ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ  ವಿದ್ಯಾರ್ಥಿಯಾಗಿದ್ದ ವಿಶಿಷ್ಟ ಶ್ರೇಣಿಯಲ್ಲಿ ಅಂ ಗಳಿಸಿದ  ಕೃಷಿಕ ಅವರಿಗೆ ಸನ್ಮಾನ ಕಾರ್ಯಕ್ರಮ ಜರಗಿತು.
ಸಂಸ್ಥೆಯ ಮಾಜಿ ಅದ್ಯಕ್ಷೆ ಮತ್ತು ಕಾರ್ಯದರ್ಶಿಗೆ ಬೀಳ್ಗೊಡುಗೆ ಕಾರ್ಯಕ್ರಮ ನಡೆಯಿತು. ಸ್ವಾತಿ ಪ್ರಕಾಶ್  ಸ್ವಾಗತಿಸಿ, ಕಾರ್ಯದರ್ಶಿ ಪ್ರೀತಿ ಶೆಟ್ಟಿ ವರದಿ ವಾಚನ ಮಾಡಿದರು. ಜ್ಯೋತಿ ಶೆಟ್ಟಿ  ಸಮಾರಂಭದ ನಿರೂಪಿಸಿ ನೂತನ ಕಾರ್ಯದರ್ಶಿ ಸುಮಾ ನಾಯಕ್ ವಂದಿಸಿದರು. ಪದ್ಮಜಾ ಪ್ರಾರ್ಥಿಸಿ,  ವೃಂದಾ,  ಶಶಿಕಲಾ ಗೌಡ, ಕವಿತಾ ಕುಟಿನೋ ಅತಿಥಿಗಳನ್ನು ಪರಿಚಯಿಸಿದರು.