ಮಣಿಪಾಲ ಪೊಲೀಸ್​ ಠಾಣೆಯಲ್ಲಿ ಕೋಳಿ ಹರಾಜು; ಖರೀದಿಸಲು ಮುಗಿಬಿದ್ದ ಜನ

ಮಣಿಪಾಲ: ಇಲಾಖೆಯ ಅನುಮತಿ ಇಲ್ಲದೆ ನಡೆಸುತ್ತಿದ್ದ ಕೋಳಿ ಅಂಕ (ಕೋರ್ದಟ್ಟ) ಬೆಟ್ಟಿಂಗ್​ ಅಡ್ಡೆ ಮೇಲೆ ಮಣಿಪಾಲ ಠಾಣೆ ಪೊಲೀಸರು ದಾಳಿ ನಡೆಸಿದ್ದು, ಸುಮಾರು 25 ಕೋಳಿಗಳನ್ನು ವಶಕ್ಕೆ ಪಡೆದುಕೊಂಡಿದ್ದರು. ಸೋಮವಾರದಂದು ಈ ಕೋಳಿಗಳನ್ನು ಪೊಲೀಸರು ಹರಾಜು ಹಾಕಿದ್ದು, ಅಂಕದ ಕೋಳಿಗಳನ್ನು ಖರೀದಿಸಲು ಜನರು ಮುಗಿಬಿದ್ದಿದ್ದಾರೆ.

ಒಂದು ಕೋಳಿಗೆ 400 ರೂ. ಒಂದು ವಾರ್, ಎರಡು ವಾರ್, ಮೂರು ವಾರ್ ಅಂತ ಹರಾಜು ಪ್ರಕ್ರಿಯೆ ನಡೆದಿದೆ. ಈ ಕೋಳಿಗಳನ್ನು ಖರೀದಿಸಲು ಕೋಳಿಪ್ರಿಯ ನಾ ಮುಂದು ತಾ ಉಂದು ಎಂದು ಮುಂದೆ ಬಂದಿದ್ದಾರೆ.