ವಿರಾಟ್ ಕೊಹ್ಲಿ, ಎಂಎಸ್ ಧೋನಿ ಹಿಂದಿಕ್ಕಿದ ರೋಹಿತ್ ಶರ್ಮಾ: ಟೀಂ ಇಂಡಿಯಾ ನಾಯಕನಾಗಿ 60 ಸಿಕ್ಸರ್‌ ಸಿಡಿಸಿ ದಾಖಲೆ

ಮಂಗಳವಾರ (ಆಗಸ್ಟ್ 2) ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಟಿ20ಐ ಪಂದ್ಯದಲ್ಲಿ ಭಾರತ ತಂಡದ ನಾಯಕ ರೋಹಿತ್ ಶರ್ಮಾ 60 ಸಿಕ್ಸರ್‌ ಸಿಡಿಸಿ ಹೊಸ ದಾಖಲೆಯನ್ನು ರಚಿಸುವಲ್ಲಿ ಯಶಸ್ವಿಯಾಗಿದ್ದಾರೆ. ನೋವಿನ ಭಯದಿಂದ ನಿವೃತ್ತರಾಗಿ ಮೈದಾನದಿಂದ ಹೊರನಡೆಯುವ ಮೊದಲು ಅವರು ಒಂದು ಬೌಂಡರಿ ಮತ್ತು ಒಂದು ಸಿಕ್ಸರ್ ಅನ್ನು ಸಿಡಿಸಿದ್ದರು.

ಮಂಗಳವಾರದ ಪಂದ್ಯದಲ್ಲಿ ಅವರ ಏಕೈಕ ಸಿಕ್ಸರ್‌ನೊಂದಿಗೆ, ಭಾರತದ ನಾಯಕನಾಗಿ ಅವರ ಹೆಸರಿಗೆ ಒಟ್ಟು 60 ಸಿಕ್ಸರ್‌ಗಳು ದಾಖಲಾಗಿವೆ. ಶರ್ಮಾ ಈ ಮಾರ್ಕ್ ತಲುಪಲು 34 ಇನ್ನಿಂಗ್ಸ್ ತೆಗೆದುಕೊಂಡಿದ್ದರೆ, ಮಾಜಿ ನಾಯಕ ವಿರಾಟ್ ಕೊಹ್ಲಿ 50 ಪಂದ್ಯಗಳಲ್ಲಿ 59 ಸಿಕ್ಸರ್‌ಗಳನ್ನು ಸಿಡಿಸಿದ್ದಾರೆ. ಮಾಜಿ ನಾಯಕ ಎಂಎಸ್ ಧೋನಿ 34 ಸಿಕ್ಸರ್ ಸಿಡಿಸಿದ್ದಾರೆ.

ಪುರುಷರ ಟಿ20ಐಗಳಲ್ಲಿ ಭಾರತೀಯ ನಾಯಕರುಸಿಡಿಸಿದ ಸಿಕ್ಸರ್ಗಳು:
60 – ರೋಹಿತ್ ಶರ್ಮಾ
59 – ವಿರಾಟ್ ಕೊಹ್ಲಿ
34 – ಎಂಎಸ್ ಧೋನಿ

ಶರ್ಮಾ ಅವರು ಆರಂಭಿಕ ದೊಡ್ಡ ಹಿಟ್‌ಗಳನ್ನು ಹೊಡೆಯುತ್ತಿದ್ದಾಗ ಫಾರ್ಮ್‌ನಲ್ಲಿದ್ದಂತೆ ಕಾಣುತ್ತಿದ್ದರು, ಆದರೆ ಎರಡನೇ ಓವರ್‌ನಲ್ಲಿ, ಆನ್-ಸೈಡ್‌ಗೆ ಸ್ಪೋಟಕವಾಗಿ ಸ್ವಿಂಗ್ ಮಾಡಲು ಪ್ರಯತ್ನಿಸುತ್ತಿದ್ದಾಗ, ಕೆಳ ಬೆನ್ನಿಗೆ ನೋವುಂಟು ಮಾಡಿಕೊಂಡರು. ಶೀಘ್ರದಲ್ಲೇ, ಭಾರತೀಯ ಫಿಸಿಯೋ ಕಮಲೇಶ್ ಜೈನ್ ಮೈದಾನಕ್ಕೆ ಬಂದು ಸ್ವಲ್ಪ ಸಮಯ ಫೀಲ್ಡ್ ನಲ್ಲಿ ಮಾತುಕತೆ ನಡೆಸಿ ನಂತರ ಮೈದಾನವನ್ನು ತೊರೆದರು. ಆ ಬಳಿಕ ಬಿಸಿಸಿಐ ರೋಹಿತ್ ಆರೋಗ್ಯದ ಬಗ್ಗೆ ಮಾಹಿತಿ ನೀಡಿ ಅವರು ಬೆನ್ನಿನಲ್ಲಿ ಸೆಳೆತ ಹೊಂದಿದ್ದಾರೆ ಎಂದಿತು.

ಮುಂದಿನ ಟಿ20ಐಗಳಲ್ಲಿ ತಂಡವನ್ನು ಸೇರಿಸಿಕೊಳ್ಳುವ ಬಗ್ಗೆ ಊಹಾಪೋಹಗಳಿಗೆ ತೆರೆ ಎಳೆದ ರೋಹಿತ್, ನೋವು ಗಂಭೀರವಾಗಿಲ್ಲ ಹಾಗೂ ತಾನು ಸರಣಿಯ ಮುಂದಿನ ಎರಡು ಪಂದ್ಯಗಳಿಗೆ ಲಭ್ಯವಿರುತ್ತೇನೆ ಎನ್ನುವ ಸುಳಿವು ನೀಡಿದರು.