ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ ಮದಗಜ ಸಿನಿಮಾದ ನಾಯಕಿಯಾಗಿ ನಟಿ ಆಶಿಕಾ ರಂಗನಾಥ್ ಸಿನಿಮಾದ ಹೀರೋಯಿನ್ ಆಗಿ ಆಯ್ಕೆ ಆಗಿದ್ದಾರೆ. ಮೊದಲ ಬಾರಿ ರೋರಿಂಗ್ ಸ್ಟಾರ್ ಗೆ ಆಶಿಕಾ ಅವರು ಜೋಡಿಯಾಗಿದ್ದಾರೆ. ಶ್ರೀಮುರಳಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ನಾಯಕಿಯ ಹೆಸರನ್ನು ಬಹಿರಂಗಪಡಿಸಿದ್ದಾರೆ. ಹಳ್ಳಿ ಜೀವನದ ಬಗ್ಗೆ ಆಸಕ್ತಿ ಇರುವ ರೈತರ ಜೀವನವನ್ನು ಪ್ರೀತಿಸುವ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ನಾಯಕಿ ಆಶಿಕಾ ಅವರು ಮದಗಜ ಚಿತ್ರದಲ್ಲಿ ಲಂಗ ದಾವಣಿ ಹಾಕಿಕೊಂಡು ಕೈನಲ್ಲಿ ಬುಟ್ಟಿ, ಸಲಿಕೆ ಹಿಡಿದುಕೊಂಡು ಆಶಿಕಾ ರಂಗನಾಥ್ ಪೋಸ್ ನೀಡಿದ್ದಾರೆ. ಮೊದಲ ಬಾರಿಗೆ ಈ ರೀತಿಯ ಪಾತ್ರದಲ್ಲಿ ಆಶಿಕಾ ನಟಿಸುತ್ತಿದ್ದು, ನಾಯಕಿ ಪಾತ್ರಕ್ಕೆ ಬಹಳ ಪ್ರಾಮುಖ್ಯತೆ ಇದೆ ಎಂದು ನಿರ್ದೇಶಕ ಮಹೇಶ್ ಕುಮಾರ್ ಹೇಳಿದ್ದಾರೆ.
ಪ್ರೇಮಿಗಳ ದಿನದಂದು ಸಿನಿಮಾದ ನಾಯಕಿಯ ಪೋಸ್ಟರ್ ಬಿಡುಗಡೆ ಮಾಡಿ, ಚಿತ್ರತಂಡಕ್ಕೆ ಆಶಿಕಾ ಅವರನ್ನು ಸ್ವಾಗತ ಮಾಡಲಾಗಿದೆ. ಮದಗಜ ಸಿನಿಮಾದ ಚಿತ್ರೀಕರಣ ಫೆಬ್ರವರಿ 20 ರಂದು ಶುರು ಆಗಲಿದೆ. ಅಯೋಗ್ಯ ನಂತರ ಮಹೇಶ್ ಕುಮಾರ್ ನಿರ್ದೇಶಕ ಮಾಡುತ್ತಿರುವ ಎರಡನೇ ಸಿನಿಮಾ ಇದಾಗಿದ್ದು, ಉಮಾಪತಿ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ದೊಡ್ಡ ಸ್ಟಾರ್ ಬಳಗವೇ ಈ ಸಿನಿಮಾದಲ್ಲಿ ಇರಲಿದೆ ಎಂದು ತಿಳಿಸಿದ್ದಾರೆ.