ಉಡುಪಿ: ಉಡುಪಿ ಜಿಲ್ಲೆಯ ಕಮಲಶಿಲೆ ನಿವಾಸಿ ಸುಧಾಕರ ಆಚಾರ್ಯ ಹಾಗೂ ಸುಚೇತಾ ದಂಪತಿಯ ಮಗಳು ರಿತನ್ಯ ಎಸ್. ಆಚಾರ್ಯ (1 ವರ್ಷ 4 ತಿಂಗಳು) ತನ್ನ ಅಪರೂಪದ ಪ್ರತಿಭೆಯಿಂದ ಇಂಟರ್‌ನ್ಯಾಷನಲ್ ಬುಕ್ ಆಫ್ ರೆಕಾರ್ಡ್ಸ್ ವತಿಯಿಂದ “ಸೂಪರ್ ಟ್ಯಾಲೆಂಟೆಡ್ ಕಿಡ್” ಎಂಬ ಬಿರುದನ್ನು ಪಡೆದು “ಒನ್ ಇನ್ ಎ ಮಿಲಿಯನ್” ಗೌರವವನ್ನು ಪಡೆದಿದ್ದಾಳೆ.
ರಿತನ್ಯ 21 ಪಕ್ಷಿಗಳು, 28 ಪ್ರಾಣಿಗಳು, 15 ದೇಹಭಾಗಗಳು, 20 ಹಣ್ಣುಗಳು, 10 ಜಲಚರ ಪ್ರಾಣಿಗಳು, 6 ಕೀಟಗಳು, 23 ತರಕಾರಿಗಳು, 65 ಕ್ಕೂ ಹೆಚ್ಚು ಗೃಹೋಪಯೋಗಿ ವಸ್ತುಗಳನ್ನು ಗುರುತಿಸುವ ಸಾಮರ್ಥ್ಯ ತೋರಿದಷ್ಟೇ ಅಲ್ಲದೆ, 30 ವಸ್ತುಗಳನ್ನು ಹುಡುಕಿ ತರುವುದು, ಹೇಳಿದ ಆಜ್ಞೆಗಳನ್ನು ಪಾಲಿಸಿ ಮಾಡುವುದು, 8 ಕ್ಕೂ ಹೆಚ್ಚು ಸಾಕುಪ್ರಾಣಿಗಳ ಧ್ವನಿಯನ್ನು ಅನುಕರಿಸುವುದು ಮತ್ತು ಕೇವಲ 2 ನಿಮಿಷ 40 ಸೆಕೆಂಡ್‌ಗಳಲ್ಲಿ 35 ಮೆಟ್ಟಿಲುಗಳನ್ನು ಸಹಾಯವಿಲ್ಲದೆ ಏರಿರುವ ಮೂಲಕ ತನ್ನ ವಯಸ್ಸಿಗೆ ಮೀರಿದ ಪ್ರತಿಭೆಯನ್ನು ಸಾಬೀತುಪಡಿಸಿದ್ದಾಳೆ.
ಪೋಷಕರು ಪ್ರೋತ್ಸಾಹ ನೀಡಿದ್ದು, ಈ ಸಾಧನೆಗೆ ಸಮಾಜದಲ್ಲಿ ಎಲ್ಲರೂ ಸಂತಸ ವ್ಯಕ್ತಪಡಿಸಿದ್ದಾರೆ.












