ರಿಷಿ ನಟನೆಯ ಹೊಸ ಚಿತ್ರ ‘ರುದ್ರ ಗರುಡ ಪುರಾಣ’

ಈ ಹಿಂದೆ “ಡಿಯರ್‌ ವಿಕ್ರಂ’ ಸಿನಿಮಾ ನಿರ್ದೇಶನ ಮಾಡಿದ್ದ ಕೆ.ಎಸ್‌. ನಂದೀಶ್‌ ಈ ಚಿತ್ರದ ನಿರ್ದೇಶಕರು. ಈ ಚಿತ್ರಕ್ಕೆ “ರುದ್ರ ಗರುಡ ಪುರಾಣ’ ಎಂದು ಟೈಟಲ್‌ ಇಡಲಾಗಿದೆ.

ರಿಷಿ ನಟನೆಯ ಹೊಸ ಚಿತ್ರದ ಮುಹೂರ್ತ ಶುಕ್ರವಾರ ನಡೆದಿದೆ.
ಚಿತ್ರದ ಬಗ್ಗೆ ಮಾತನಾಡುವ ರಿಷಿ, “ನನಗೆ ಒಂದೇ ಜಾನರ್‌, ಒಂದೇ ತೆರನಾದ ಪಾತ್ರಗಳಲ್ಲಿ ಕಾಣಿಸಿಕೊಳ್ಳಲು ಇಷ್ಟವಿಲ್ಲ. ಆದರೆ, ಈ ಕಥೆ ಕೇಳಿದ ನಂತರ ಖುಷಿಯಿಂದ ಒಪ್ಪಿಕೊಂಡೆ.

ನನ್ನ ಹಿಂದಿನ ಚಿತ್ರಗಳಿಗೆ ಈ ಚಿತ್ರಕ್ಕೂ ಯಾವುದೇ ಹೋಲಿಕೆ ಇಲ್ಲ. ಚಿತ್ರದಲ್ಲಿ ಸಾಕಷ್ಟು ಆಯಾಮಗಳು ಬರುತ್ತವೆ. ಗರುಡ ಪುರಾಣದ ಕೆಲವು ಅಂಶಗಳು ಕೂಡಾ ಈ ಸಿನಿಮಾದಲ್ಲಿ ಬರುತ್ತವೆ’ ಎಂದು ಚಿತ್ರದ ಬಗ್ಗೆ ಹೇಳುತ್ತಾರೆ. ಪ್ರಿಯಾಂಕಾ ಈ ಚಿತ್ರದ ನಾಯಕಿ

ಈ ಹಿಂದೆ “ಕವಲುದಾರಿ’ ಚಿತ್ರದಲ್ಲಿ ರಿಷಿ ಪೊಲೀಸ್‌ ಪಾತ್ರ ಮಾಡಿದ್ದರು. ಈ ಚಿತ್ರವನ್ನು ಅಶ್ವಿ‌ನಿ ಲೋಹಿತ್‌ ನಿರ್ಮಿಸುತ್ತಿದ್ದಾರೆ. ಅಂದಹಾಗೆ, ಇದೊಂದು ಆ್ಯಕ್ಷನ್‌ ಡ್ರಾಮಾವಾಗಿದ್ದು, ಈ ಚಿತ್ರದಲ್ಲಿ ರಿಷಿ ಪೊಲೀಸ್‌ ಆಫೀಸರ್‌ ಆಗಿ ಕಾಣಿಸಿಕೊಳ್ಳಲ್ದಿದಾರೆ.