ಬ್ರಿಟನ್: ಇನ್ನೂರು ವರ್ಷಗಳ ಕಾಲ ಭಾರತೀಯರ ಮೇಲೆ ದಬ್ಬಾಳಿಕೆ ಮಾಡಿದ, ಭಾರತವನ್ನು ಕೊಳ್ಳೆ ಹೊಡೆದ ಬ್ರಿಟನ್ ಗೆ ಇದು ನುಂಗಲಾರದ ತುತ್ತಾಗಿದ್ದರೂ ಒಪ್ಪಿಕೊಳ್ಳಲೇ ಬೇಕಾದ ಅನಿವಾರ್ಯತೆ. ಅಪ್ಪಟ ಬ್ರಿಟಿಷರಿಗೆ ಮೀಸಲಾಗಿದ್ದ ಪ್ರಧಾನಿ ಪದವಿಗಿಂದು ಭಾರತೀಯ ಮೂಲದ ರಿಷಿ ಸುನಕ್ ಅವರು ಪ್ರಧಾನಿಯಾಗಿ ಆಯ್ಕೆ ಆಗಿದ್ದಾರೆ. ಆರ್ಥಿಕವಾಗಿ ತೀವ್ರ ಸಂಕಷ್ಟದಲ್ಲಿರುವ ಸೂರ್ಯ ಮುಳುಗದ ನಾಡಿಗೆ ಇದು ಅತ್ಯಂತ ಅನಿವಾರ್ಯವಾಗಿದೆ.
ಬ್ರಿಟನ್ ಪ್ರಧಾನಿ ಲಿಜ್ ಟ್ರಸ್ ಅವರ ರಾಜೀನಾಮೆಯ ಬಳಿಕ ತೆರವಾಗಿದ್ದ ಬ್ರಿಟನ್ ಪ್ರಧಾನಿ ಪಟ್ಟಕ್ಕೆ ಭಾರತೀಯ ಮೂಲದ ರಿಷಿ ಸುನಕ್ ಆಯ್ಕೆಯಾಗಿದ್ದಾರೆ. ಪೆನ್ನಿ ಮೊರ್ಡಾಂಟ್, ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ ಸ್ಪರ್ಧೆಯಿಂದ ಹಿಂದೆ ಸರಿದ ನಂತರ ಇದೇ ಮೊದಲ ಬಾರಿಗೆ ಬ್ರಿಟಿಷ್ ಮೂಲ ಹೊರತು ಪಡಿಸಿದ ವ್ಯಕ್ತಿಯೊಬ್ಬರು ಮುಂದಿನ ಬ್ರಿಟಿಷ್ ಪ್ರಧಾನಿಯಾಗಿ ಇತಿಹಾಸ ಸೃಷ್ಟಿ ಮಾಡಲಿದ್ದಾರೆ. ರಿಷಿ ಸುನಕ್ ಅವರು ಬ್ರಿಟಿಷ್ ಪ್ರಧಾನಿಯಾದ ಮೊದಲ ಭಾರತೀಯ ಮೂಲದ ವ್ಯಕ್ತಿಯಾಗಲಿದ್ದಾರೆ.