ಶ್ರೀ ಶ್ರೀ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ ಜೀರ್ಣೋದ್ಧಾರ

ತುಮಕೂರು : ಕಲ್ಪತರು ನಾಡದ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯ ಶುಕ್ರವಾರದ ಕೋಟೆ ಬಾಗಿಲು ಹೊಸ ಬೀದಿಯ ಇತಿಹಾಸ ಪ್ರಸಿದ್ಧ ಶ್ರೀ ಮಹಾಲಕ್ಷ್ಮೀ ಮದ್ದರ ಲಕ್ಕಮ್ಮ ದೇವಾಲಯವು ದೊಡ್ಡಣ್ಣ ಗುಡ್ಡೆಯ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದ ಧರ್ಮದರ್ಶಿಗಳಾದ ಪರಮಪೂಜ್ಯ ಶ್ರೀ ರಮಾನಂದ ಗುರೂಜಿಯವರ ಮಾರ್ಗದರ್ಶನದಲ್ಲಿ ಜೀರ್ಣೋದ್ಧಾರಗೊಳ್ಳಲಿದೆ.

ಆ ಪ್ರಯುಕ್ತ ನಡೆದ ಸಭೆಯಲ್ಲಿ ಮದರ ಲಕ್ಕಮ್ಮ ಟ್ರಸ್ಟ್ ಹಾಗೂ ಜೀರ್ಣೋದ್ದಾರ ಸಮಿತಿಯ ಗೌರವ ಅಧ್ಯಕ್ಷರನ್ನಾಗಿ ದೇವಾಲಯದ ಭಕ್ತರು ಮತ್ತು ಆಡಳಿತ ಮಂಡಳಿಯ ಸದಸ್ಯರುಗಳು ಸರ್ವಾನುಮತದಿಂದ ಪರಮ ಪೂಜ್ಯ ಶ್ರೀ ಗುರೂಜಿರವರನ್ನು ನೇಮಕ ಮಾಡಿಕೊಂಡಿದ್ದ ಅದರ ಅಂಗವಾಗಿ ಸಮಿತಿಯ ಎಲ್ಲಾ ಸದಸ್ಯರುಗಳು ಹಾಗೂ ದೇವಳದ ಮುಖ್ಯಸ್ಥರಾದ ಶ್ರೀ ಲಕ್ಷ್ಮೀಶ ರವರ ನೇತೃತ್ವದಲ್ಲಿ ಜಗನ್ಮಾತೆ ಶ್ರೀ ದುರ್ಗಾ ಆದಿಶಕ್ತಿಯ ಕ್ಷೇತ್ರದೊಡ್ಡಣ್ಣಗುಡ್ಡೆಗೆ ಭೇಟಿ ನೀಡಿ ಪೂಜ್ಯರನ್ನು ಮೈಸೂರು ಪೇಟ ತೊಡಿಸಿ ಮಂಗಳೂರು ಮಲ್ಲಿಗೆ ಅರ್ಪಿಸಿ, ಶಾಲು ಹೊದಿಸಿ ಗೌರವಿಸಲಾಯಿತು.

ಗೌರವ ಸ್ವೀಕರಿಸಿ ಮಾತನಾಡಿದ ಪೂಜ್ಯ ಗುರುಗಳು ಅಜೀರ್ಣಾವಸ್ಥೆಯಲ್ಲಿರುವ ದೇವಳಗಳ ಜೀರ್ಣೋದ್ಧಾರ ಇಡೀ ಊರಿಗೆ ಮಾತ್ರವಲ್ಲ ನಾಡಿಗೆ ಒಳಿತನ್ನು ಮಾಡಲಿದೆ. ಈ ಐತಿಹಾಸಿಕ ಕಾರ್ಯಕ್ಕೆ ನಿಮ್ಮಗಳೆಲ್ಲರ ಸಂಕಲ್ಪ ವಿಕಲ್ಪ ವಾಗದೆ ನಿಮ್ಮೆಲ್ಲರನ್ನು ಮುನ್ನಡೆಸಲಿ ಎಂದು ಹಾರೈಸಿದರು. ಜೀರ್ಣೋದ್ದಾರಕ್ಕೆ ಬೇಕಾದ ಎಲ್ಲ ರೀತಿಯ ಮಾರ್ಗದರ್ಶನ, ಸಲಹೆ, ಸೂಚನೆಯನ್ನು ನೀಡುವುದಾಗಿ ಅಭಯ ನೀಡಿ ಆಶೀರ್ವಾದ ಮಾಡಿದರು. ಟ್ರಸ್ಟ್ ನ ಅಧ್ಯಕ್ಷರಾದ ಶ್ರೀ ರಂಗಸ್ವಾಮಿ ಸಿ ಎನ್ , ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷರಾದ ಶ್ರೀ ಚಿನಿ ಪುರುಷೋತ್ತಮ್, ಉಪಾಧ್ಯಕ್ಷರಾದ ಶ್ರೀ ವೆಂಕಟೇಶ್ ಹೆಚ್ ಆರ್, ಟ್ರಸ್ಟಿ ಗಳಾದ ಶ್ರೀ ಮತಿ ನಾಗರತ್ನ, ಶ್ರೀ ರವಿಕುಮಾರ್ ಸಿ ಎನ್, ಶ್ರೀಮತಿ ಶಾಂತ, ಶ್ರೀ ಮತಿ ಅಕ್ಷತ ಅವರು ಉಪಸ್ಥಿತರಿದ್ದರು.