ಮುಂಬೈ: 15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ಗೆ (IPL 2022) ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಭರ್ಜರಿ ಸಿದ್ಧತೆ ನಡೆಸುತ್ತಿದೆ.
ಹರಾಜಿಗೂ ಮುನ್ನ 8 ಫ್ರಾಂಚೈಸಿಗಳಿಗೆ 4 ಆಟಗಾರರನ್ನು ಉಳಿಸಿಕೊಳ್ಳುವ ಆಯ್ಕೆ ನೀಡಲಾಗಿತ್ತು. ಅದರಂತೆ ಹಳೆಯ 8 ಫ್ರಾಂಚೈಸಿ ಉಳಿಸಿಕೊಂಡಿರುವ ಆಟಗಾರರ ಪಟ್ಟಿ ಸಲ್ಲಿಸಲು ಇಂದು ಕೊನೆಯ ದಿನಾಂಕವಾಗಿದೆ. ಈ ಹಿನ್ನೆಲೆಯಲ್ಲಿ ಹಲವು ಫ್ರಾಂಚೈಸಿಗಳು ಈಗಾಗಲೇ ಅಂತಿಮ ಪಟ್ಟಿಯನ್ನು ನೀಡಿವೆ. ಪ್ರತಿ ತಂಡ ಗರಿಷ್ಠ ಇಬ್ಬರು ವಿದೇಶಿ ಮತ್ತು ಮೂವರು ಭಾರತೀಯರ ಸಹಿತ ಗರಿಷ್ಠ ನಾಲ್ವರು ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶವಿದೆ.
ಆಟಗಾರರ ರಿಟೈನ್ ಪ್ರಕಿಯೆಯು ನವೆಂಬರ್ 30 ರಂದು ರಾತ್ರಿ 9:30ಕ್ಕೆ ಶುರುವಾಗಲಿದೆ. ಈ ರಿಟೈನ್ ಪಟ್ಟಿ ಸಲ್ಲಿಕೆ ಕಾರ್ಯಕ್ರಮವನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ನೇರ ಪ್ರಸಾರ ವೀಕ್ಷಿಸಬಹುದು. ಜೊತೆಗೆ ಡಿಸ್ನಿ+ ಹಾಟ್ಸ್ಟಾರ್ನಲ್ಲೂ ಲೈವ್ ಸ್ಟ್ರೀಮಿಂಗ್ ನೋಡಬಹುದು.
ಸಂಭಾವ್ಯ ರಿಟೇನ್ ಆಟಗಾರರ ಪಟ್ಟಿ:
ಕೆಲ ಫ್ರಾಂಚೈಸಿಗಳ ಮೂಲಗಳ ಮಾಹಿತಿ ಈ ಬಾರಿ ಪ್ರಮುಖ ಆಟಗಾರರನ್ನು ಉಳಿಸಿಕೊಂಡಿರುವುದು ಖಚಿತವಾಗಿದೆ. ಆ ಆಟಗಾರರ ಪಟ್ಟಿ ಹೀಗಿದೆ.
ಚೆನ್ನೈ ಸೂಪರ್ ಕಿಂಗ್ಸ್:
ರವೀಂದ್ರ ಜಡೇಜಾ, ಎಂಎಸ್ ಧೋನಿ, ರುತುರಾಜ್ ಗಾಯಕ್ವಾಡ್, ಮೊಯಿನ್ ಅಲಿ.
ಚೆನ್ನೈ ಸೂಪರ್ ಕಿಂಗ್ಸ್: ರವೀಂದ್ರ ಜಡೇಜಾ, ಎಂಎಸ್ ಧೋನಿ, ರುತುರಾಜ್ ಗಾಯಕ್ವಾಡ್, ಮೊಯಿನ್ ಅಲಿ.
ಕೋಲ್ಕತ್ತಾ ನೈಟ್ ರೈಡರ್ಸ್ : ಸುನಿಲ್ ನರೈನ್, ಆಂಡ್ರೆ ರಸೆಲ್, ವರುಣ್ ಚಕ್ರವರ್ತಿ, ವೆಂಕಟೇಶ್ ಅಯ್ಯರ್
ಮುಂಬೈ ಇಂಡಿಯನ್ಸ್ : ರೋಹಿತ್ ಶರ್ಮಾ, ಜಸ್ಪ್ರೀತ್ ಬುಮ್ರಾ
ಡೆಲ್ಲಿ ಕ್ಯಾಪಿಟಲ್ಸ್ : ರಿಷಭ್ ಪಂತ್, ಪೃಥ್ವಿ ಶಾ, ಅಕ್ಷರ್ ಪಟೇಲ್, ಅನ್ರಿಕ್ ನೋಕಿಯಾ
ರಾಜಸ್ಥಾನ್ ರಾಯಲ್ಸ್ : ಸಂಜು ಸ್ಯಾಮ್ಸನ್
ಸನ್ ರೈಸರ್ಸ್ ಹೈದರಾಬಾದ್ : ಕೇನ್ ವಿಲಿಯಮ್ಸನ್
ರಾಯಲ್ ಚಾಲೆಂಜರ್ಸ್ ಬೆಂಗಳೂರು : ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್ ವೆಲ್
ಪಂಜಾಬ್ ಕಿಂಗ್ಸ್: ಪ್ರಸ್ತುತ ಮಾಹಿತಿ ಪ್ರಕಾರ ಪಂಜಾಬ್ ಕಿಂಗ್ಸ್ ಯಾವುದೇ ಆಟಗಾರರನ್ನು ಉಳಿಸಿಕೊಂಡಿರುವ ಬಗ್ಗೆ ಮಾಹಿತಿಯಿಲ್ಲ.
ಆಟಗಾರರನ್ನು ಉಳಿಸಿಕೊಂಡರೆ: ಮೊದಲ ಆಟಗಾರನಿಗೆ 16 ಕೋಟಿ ರೂ, 2ನೇ ಆಟಗಾರನಿಗೆ 12 ಕೋಟಿ ರೂ, 3ನೇ ಆಟಗಾರನಿಗೆ 8 ಕೋಟಿ ರೂ , 4ನೇ ಆಟಗಾರನಿಗೆ 6 ಕೋಟಿ ರೂ. ನೀಡಬೇಕು. ಅದರಂತೆ ಒಟ್ಟು ಮೊತ್ತ 42 ಕೋಟಿ ಆಗಲಿದೆ.
4 ಆಟಗಾರರನ್ನು ಉಳಿಸಿಕೊಂಡರೆ: ಮೊದಲ ಆಟಗಾರನಿಗೆ 16 ಕೋಟಿ ರೂ, 2ನೇ ಆಟಗಾರನಿಗೆ 12 ಕೋಟಿ ರೂ, 3ನೇ ಆಟಗಾರನಿಗೆ 8 ಕೋಟಿ ರೂ , 4ನೇ ಆಟಗಾರನಿಗೆ 6 ಕೋಟಿ ರೂ. ನೀಡಬೇಕು. ಅದರಂತೆ ಒಟ್ಟು ಮೊತ್ತ 42 ಕೋಟಿ ಆಗಲಿದೆ.