4 ಕ್ಷೇತ್ರಗಳಲ್ಲೂ BJP-JDS ಮೈತ್ರಿ ಅಭ್ಯರ್ಥಿಗಳಿಗೆ ಭರ್ಜರಿ ಜಯ! ಪರಿಷತ್​ ಫೈಟ್​ನಲ್ಲಿ ಕಾಂಗ್ರೆಸ್​​ ಸೋಲಿಗೆ ಕಾರಣ ಇದೇನಾ

ಪರಿಷತ್​​ ಫೈಟ್​ನಲ್ಲಿ ನಾಲ್ಕಕ್ಕೆ ನಾಲ್ಕೂ ಕ್ಷೇತ್ರಗಳಲ್ಲಿ ಮೈತ್ರಿ ಪಕ್ಷದ ಅಭ್ಯರ್ಥಿಗಳು ವಿಜಯ ಸಾಧಿಸಿದ್ದು, ಆಡಳಿತಾರೂಢ ಕಾಂಗ್ರೆಸ್ ಘಟನಾನುಘಟಿ ಅಭ್ಯರ್ಥಿಗಳನ್ನೇ ಕಣಕ್ಕಿಳಿಸಿದ್ದರೂ ಸೋಲನುಭವಿಸಿದೆ.ಕಾರಣ ಏನು

ಬೆಂಗಳೂರು (ಅ.28): ರಾಜ್ಯ ವಿಧಾನ ಪರಿಷತ್ತಿನ ನಾಲ್ಕು ಸ್ಥಾನಗಳ ಚುನಾವಣಾ ಫಲಿತಾಂಶ ಹೊರಬಿದ್ದಿದ್ದು, ಭಾರೀ ಹಿನ್ನೆಡೆ ಆಗಿದೆ. ಈಶಾನ್ಯ ಶಿಕ್ಷಕರ ಕ್ಷೇತ್ರ ಮತ್ತು ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ ಎನ್‌ಡಿಎ ಅಭ್ಯರ್ಥಿಗಳು ಜಯಭೇರಿ ಬಾರಿಸಿದ್ದು, ಇತ್ತ ಪಶ್ಚಿಮ ಪದವೀಧರ ಕ್ಷೇತ್ರ ಮತ್ತು ಆಗ್ನೆಯಪದವೀಧರ ಕ್ಷೇತ್ರಗಳಲ್ಲೂ ಮೈತ್ರಿ ಗೆದ್ದು ಬೀಗಿದೆ. ಆಡಳಿತಾರೂಢ ಕಾಂಗ್ರೆಸ್​​ಗೆ ಭಾರೀ ಹಿನ್ನಡೆ ಆಗಲು ಕಾರಣ ಏನು?

 4 ಕ್ಷೇತ್ರಗಳಲ್ಲೂ ಎನ್​ಡಿಎ ಅಭ್ಯರ್ಥಿಗೆ ಭರ್ಜರಿ ಜಯ

ಈಶಾನ್ಯ ಶಿಕ್ಷಕರ ಕ್ಷೇತ್ರ ಮತ್ತು ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ ಎನ್‌ಡಿಎ ಅಭ್ಯರ್ಥಿಗಳು ಜಯಭೇರಿ ಬಾರಿಸಿದ್ರೆ, ಪಶ್ಚಿಮ ಪದವೀಧರ ಕ್ಷೇತ್ರ ಮತ್ತು ಆಗ್ನೆಯಪದವೀಧರ ಕ್ಷೇತ್ರಗಳಲ್ಲಿ ಮತಗಳ ಎಣಿಕೆ ಇಂದು ಬೆಳಗಿನ ಜಾವದ ವರೆಗೂ ನಡೆದಿದ್ದು, ಎನ್​ಡಿಎ ಅಭ್ಯರ್ಥಿಗಳು ಕೂಡ ಗೆದ್ದಿದ್ದಾರೆ.

66,020 ಮತಗಳಿಂದ ಗೆದ್ದ ಕೆ.ಎಂ ಸುರೇಶ್

ಆಗ್ನೇಯ ಪದವೀಧರ ಕ್ಷೇತ್ರದ ಮತ ಎಣಿಕೆ ಇಂದು ಮುಕ್ತಾಯವಾಗಿದ್ದು, ಕಾಂಗ್ರೆಸ್ ಅಭ್ಯರ್ಥಿ ಶಶಿ ಹುಲಿಕುಂಟೆ ಮಠ್ 42,922 ಮತಗಳನ್ನು ಪಡೆದಿದ್ದು, ಬಿಜೆಪಿ ಅಭ್ಯರ್ಥಿ ಕೆಎಂ ಸುರೇಶ್ 66,020 ಮತಗಳನ್ನ ಗೆದ್ದಿದ್ದಾರೆ. ಬಿಜೆಪಿ ಅಭ್ಯರ್ಥಿ 23,098 ಮತಗಳಿಂದ ಭರ್ಜರಿ ಜಯಭೇರಿ ಬಾರಿಸಿದ್ದಾರೆ. ನಾಲ್ಕು ಕ್ಷೇತ್ರಗಳ ಪರಿಷತ್ ಚುನಾವಣೆಯಲ್ಲೂ ಎನ್​ಡಿಎಗೆ ಗೆಲುವಾಗಿದ್ದು,  ನಾಲ್ಕರಲ್ಲಿ ಒಂದು ಸ್ಥಾನವನ್ನು ಕೂಡ ಕಾಂಗ್ರೆಸ್​ಗೆ ಗೆಲ್ಲಲು ಸಾಧ್ಯವಾಗಿಲ್ಲ.