ಶಾಲೆಗಳಲ್ಲಿ ಪ್ರತಿ ಮಕ್ಕಳಿಗೂ ಒಂದನೇ ತರಗತಿಗೆ ಸೇರ್ಪಡೆಗೊಳಿಸುವಾಗ ಜೂನ್ ಒಂದು ತಾರೀಕಿಗೆ ಸರಿಯಾಗಿ ಆರು ವರ್ಷ ತುಂಬಲೇಬೇಕು ಎನ್ನುವ ಕಡ್ಡಾಯ ನಿಯಮ ಎಷ್ಟು ಸರಿ..!
ಜೂನ್ 2 , 4 ಅಥವಾ 8 ಹೀಗೆ ಜೂನ್ ತಿಂಗಳಲ್ಲಿ ಹುಟ್ಟಿದ ಮಕ್ಕಳು ಒಂದನೇ ತರಗತಿಗೆ ಸೇರ್ಪಡೆಗೊಳ್ಳಬೇಕಾದರೆ ಮತ್ತೂ ಒಂದು ವರ್ಷ ಕಾಯಬೇಕಾ..?
ಈ ಬಗ್ಗೆ ಶಿಕ್ಷಣಾಧಿಕಾರಿಗಳಲ್ಲಿ ವಿಚಾರಿಸಿದಾಗ ನಿಯಮ ಹಾಗೆ ಇರುವಾಗ ನಾವೇನು ಮಾಡಲು ಸಾಧ್ಯ ಎಂದು ಹೇಳುತ್ತಾರೆ… ಈ ನಿಯಮ ಪೋಷಕರಲ್ಲಿ ಬಹಳಷ್ಟು ತೊಂದರೆಗಳನ್ನು ತಂದೊಡ್ಡಲಿದೆ.. ದಯವಿಟ್ಟು ಈ ಗೊಂದಲಗಳನ್ನು ಸಂಬಂಧಪಟ್ಟ ಶಿಕ್ಷಣ ಇಲಾಖೆ ಹಾಗೂ ಸರಕಾರಗಳು ಬಗೆಹರಿಸಬೇಕೆಂದು ಎಲ್ಲಾ ನೊಂದ ಪೋಷಕರ ಪರವಾಗಿ ವಿನಂತಿಯನ್ನು ಮಾಡುತ್ತಿದ್ದೇನೆ.
? ಇದು ವೈಜ್ಞಾನಿಕವಾದ ನಿರ್ಧಾರ ಅಲ್ಲ ಅನ್ನೋದು ನನ್ನ ಭಾವನೆ ಈ ಬಗ್ಗೆ ಈ ನಿಯಮ ಜಾರಿ ಮಾಡಿರುವವರು ಮತ್ತೊಮ್ಮೆ ಪರಿಶೀಲನೆ ಮಾಡುವುದು ಉತ್ತಮ ..ಒಂದು ವೇಳೆ ಈ ನಿಯಮ ಕಡ್ಡಾಯವಾಗಿ ಜಾರಿಯಾದರೆ ಬಹಳಷ್ಟು ಪೋಷಕರು ತೊಂದರೆಯನ್ನು ಅನುಭವಿಸುತ್ತಾರೆ.
ಮೂರು ವರ್ಷಕ್ಕೆ ನರ್ಸರಿ, ನಾಲ್ಕು ವರ್ಷಕ್ಕೆಎಲ್ಕೆಜಿ, ಐದು ವರ್ಷಕ್ಕೆಯುಕೆಜಿ, ಹಾಗೆ ಒಂದನೇ ಕ್ಲಾಸ್ ಸೇರ್ಪಡೆ ಮಾಡುವಾಗ ಮಕ್ಕಳಿಗೆ ಆರು ವರ್ಷ ವಾಗಬೇಕು ಅದು ನಿಜ.. ಹಾಗಾದರೆ ಜೂನ್ ಒಂದರ ನಂತರ ಹುಟ್ಟಿದ ಮಕ್ಕಳು ಉಳಿದ 11 ತಿಂಗಳು 29 ದಿವಸ ಏನು ಮಾಡಬೇಕು ಈ ಬಗ್ಗೆ ನಿಖರವಾದ ಸ್ಪಷ್ಟವಾದ ಮಾಹಿತಿ ಇಲ್ಲ ಸಂಬಂಧಪಟ್ಟವರು ಈ ವಿಚಾರವಾಗಿ ಸಾರ್ವಜನಿಕರಿಗೆ ತಿಳಿಸಬೇಕು ಹಾಗೆಯೇ( ಈ ಮೊದಲು ಇದ್ದ ಹಾಗೆ ಐದು ವರ್ಷ 10 ತಿಂಗಳು) ಕನಿಷ್ಠ ಒಂದೆರಡು ತಿಂಗಳು (ಆಗಸ್ಟ್ ತಿಂಗಳವರೆಗೆ) ಆದರೂ ವಿನಯತಿ ನೀಡಲೇಬೇಕು ಎಂಬುವುದು ಎಲ್ಲಾ ಪೋಷಕರ ಅಭಿಪ್ರಾಯ..
ಸರಕಾರಗಳು ಯಾವುದೇ ಒಂದು ನಿಯಮ ಅಥವಾ ಯೋಜನೆಗಳನ್ನು ಜಾರಿಗೊಳಿಸುವಾಗ ಅದರ ಸಾಧಕ ಬಾದಕಗಳನ್ನ ಅರಿತುಕೊಂಡು ಮಾಡಿದರೆ ಉತ್ತಮ ಎಂಬುದು ನನ್ನ ಅಭಿಪ್ರಾಯ… ಇಂತಹ ನಿಯಮಗಳು ನಿಜವಾಗಿಯೂ ಸರಿಯಲ್ಲ ಇದನ್ನು ಕೂಡಲೇ ಬಗೆಹರಿಸಬೇಕು ಎಂಬುದು ಎಲ್ಲರ ಒತ್ತಾಯ.. ಹಾಗೆ ಶಿಕ್ಷಣ ತಜ್ಜರು ಕೂಡ ಈ ಬಗ್ಗೆ ಎಚ್ಚೆತ್ತುಕೊಂಡು ಈ ಗೊಂದಲಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಪ್ರಯತ್ನ ಪಡಬೇಕು ಎಂದು ನೀರೆ ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ರಮೇಶ್ ಕಲ್ಲೋಟ್ಟಿ ಅವರು ಮನವಿಯನ್ನು ಮಾಡಿದ್ದಾರೆ.