ಹೊಸ ವರ್ಷ ನೆಮ್ಮದಿಯಿಂದಿರೋಕೆ ನೀವು ಈ ಸಂಕಲ್ಪಗಳನ್ನು ಮಾಡಲೇಬೇಕು!

ಮೊನ್ನೆ ಮೊನ್ನೆಯಷ್ಟೇ 2024 ನೇ ಇಸವಿಗೆ ಕಾಲಿಟ್ಟ ನೆನಪು, ಅಷ್ಟರಲ್ಲಾಗಲೇ ಈ ವರ್ಷ ಕಳೆದು ಮತ್ತೆ ಹೊಸವರ್ಷ ಬರಲು ಸಿದ್ಧವಾಗಿದೆ. ನಾವು ದಿನಗಳು, ತಿಂಗಳುಗಳು ಉರುಳುವುದೇ ಗೊತ್ತಾಗದಷ್ಟು ಬ್ಯುಸಿಯೂ ಆಗಿದ್ದೇವೆ. ಇದರ ಮಧ್ಯೆಯೂ ಪ್ರತಿವರ್ಷ ಹೊಸವರ್ಷಕ್ಕೊಂದಿಷ್ಟು ರೆಸೊಲ್ಯೂಷನ್, ಸಂಕಲ್ಪಗಳನ್ನು ಮರೆಯದೇ ಕೈಗೊಳ್ಳುತ್ತೇವೆ. ಆದರೆ ವರ್ಷದ ಕೊನೆಯಲ್ಲಿ ನೋಡಿದಾಗ ಅದರಲ್ಲಿ ಕಾಲು ಭಾಗದಷ್ಟನ್ನು ನಾವು ಪೂರೈಸಿದ್ದರೆ ಅದೇ ಗ್ರೇಟ್. ಹಾಗಾದ್ರೆ ಈ ವರ್ಷವೀ ನಮ್ಮ ಸಂಕಲ್ಪಗಳು ನೀರಿನಲ್ಲಿ ಮಾಡಿದ ಹೋಮವಾಗದೇ, ಸಂಕಲ್ಪಗಳು ಕೈಗೂಡಬೇಕಾದ್ರೆ ಏನ್ ಮಾಡ್ಬೇಕು ಇಲ್ಲಿ ನೋಡಿ.1
• ಸಂಕಲ್ಪ ಕೈಗೊಳ್ಳುವ ಮೊದಲು ಒಂದಷ್ಟು ಸಮಯ ಅದಕ್ಕೆ ಮೀಸಲಿಡಿ. ಶಾಂತವಾಗಿ ಕುಳಿತು ಯೋಚಿಸಿ.
• ನಿಮಗೆ ನಿಜವಾಗ್ಲೂ ಆಸಕ್ತಿ ಇರುವ, ನಿಮ್ಮಿಷ್ಟದ ಸಂಕಲ್ಪಗಳನ್ನು ಮಾತ್ರ ಯೋಜಿಸಿಕೊಳ್ಳಿ. ಬೇರೆಯವರ ಒತ್ತಾಯದ ಮೇಲೋ ಅಥವಾ ಇನ್ನೊಬ್ಬರಿಂದ ಪ್ರಭಾವಿತರಾಗಿಯೋ ಸಂಕಲ್ಪ ಕೈಗೊಳ್ಳದಿರಿ.
• ದೊಡ್ಡ ದೊಡ್ಡ ಯೋಜನೆಗಳಿಗಿಂತ, ನಿಮಗೆ ಒಂದು ವರ್ಷಗಳ ಸಮಯಾವಕಾಶ ಮಾತ್ರ ಇರುತ್ತದೆ. ಆ ಒಂದು ವರ್ಷದಲ್ಲಿ ಮಾಡಬಹುದಾದ, ಸಣ್ಣ ಸಣ್ಣ ರೆಸೊಲ್ಯೂಷನ್ ಗಳನ್ನು ಮಾತ್ರ ಯೋಚಿಸಿ.


• ಹಣ, ದೈಹಿಕ ಶ್ರಮ, ಮಾನಸಿಕ ಸ್ಥೈರ್ಯ, ಸಮಯ ಮುಂತಾದ ಸಂಪನ್ಮೂಲಗಳನ್ನು ಬಳಸಿಕೊಳ್ಳುವಂತಹಾ ಸಂಕಲ್ಪ ಅದಾಗಿದ್ದರೆ ನಿಮ್ಮ ಮಿತಿಯನ್ನು ಅರಿತು ಮುಂದಡಿಯಿಡಿ.
• ನಿಮ್ಮ ಸಂಕಲ್ಪ ಕೈಗೂಡಲು ನೀವೇ ಪ್ರಯತ್ನಿಸುವಂತಿರಬೇಕೇ ಹೊರತು ಬೇರೆಯವರನ್ನು ಅದರಲ್ಲಿ ಸೇರಿಸಿಕೊಳ್ಳಬೇಡಿ. ಅಥವಾ ಇತರಪರಿಂದ ಯಾವುದೇ ನಿರೀಕ್ಷೆ ಇಟ್ಟುಕೊಳ್ಳಬೇಡಿ.
• ಕೊನೆಯದಾಗಿ, ನಿಮ್ಮ ಪ್ರಯತ್ನವಿದ್ದೂ, ಮನಸ್ಸಿಟ್ಟು ಕೆಲಸ ಮಾಡಿಯೂ ನಿಮ್ಮ ಸಂಕಲ್ಪ ಕೈಗೂಡಲಿಲ್ಲವೆಂದಾದಲ್ಲಿ ಹೆಚ್ಚು ತಲೆಕೆಡಿಸಿಕೊಳ್ಳಬೇಡಿ. ಬೇರೆ ಮಾರ್ಗಗಳಲ್ಲಿ ಪ್ರಯತ್ನಿಸಿ. ಪರಿಣಿತರ ಮಾರ್ಗದರ್ಶನ ಪಡೆಯಿರಿ.

  1. ↩︎