ಉಡುಪಿ ಜಿಲ್ಲೆಯ ವಿವಿಧ ಗೋಶಾಲೆಗಳ ಸುಮಾರು ಒಂದು ಸಾವಿರ ಗೋವುಗಳನ್ನು ದತ್ತು ಸ್ವೀಕಾರ ನಡೆಸಲು ಉದ್ದೇಶಿಸಿರುವ ವಂದೇ ಗೋಮಾತರಂ ಕಾರ್ಯಕ್ರಮದ ಸಭೆ ಬಹ್ಮಾವರದ ಬಂಟರ ಭವನದಲ್ಲಿ ನಡೆಯಿತು.
ಸಭೆಯಲ್ಲಿ ಉಡುಪಿ ಜಿಲ್ಲೆಯ ವಿವಿಧ ಗೋಶಾಲೆಗಳಲ್ಲಿ ಗೋವುಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಈ ನಿಟ್ಟಿನಲ್ಲಿ ಈ ಎಲ್ಲಾ ಗೋಶಾಲೆಗಳಲ್ಲಿರುವ ಒಂದು ಸಾವಿರ ಹಸುಗಳನ್ನು ವಿವಿಧ ಸಂಘಸಂಸ್ಥೆಗಳು ಸಹಿತ ಗೋಪ್ರೇಮಿಗಳು ದತ್ತು ಸ್ವೀಕಾರ ಮಾಡುವ ರೂಪುರೇಷೆಗಳ ಕುರಿತಾಗಿ ಚರ್ಚೆ ನಡೆಯಿತು.
ವಂದೇ ಗೋಮಾತರಂ ಸಾವಿರ ಗೋವುಗಳ ದತ್ತು ಸ್ವೀಕಾರ ಸಂಕಲ್ಪದ ರುವಾರಿ, ನ್ಯಾಯವಾದಿ ಬೈಕಾಡಿ ಸುಪ್ರಸಾದ ಶೆಟ್ಟಿ ಅವರು ಮಾತನಾಡಿ, ಜಿಲ್ಲೆಯ ವಿವಿಧ ಗೋಶಾಲೆಗಳಲ್ಲಿ ಗೋವುಗಳ ಸಂಖ್ಯೆ ಹೆಚ್ಚಾಗುತ್ತಿದ್ದು ನಿರ್ವಹಣೆ ಕಷ್ಟಕರವಾಗುತ್ತಿದೆ. ಪ್ರತಿ ದಿನ ವಿವಿಧ ಭಾಗಗಳಲ್ಲಿ ರಕ್ಷಣೆ ಮಾಡಿದ ಗೋವುಗಳನ್ನು ಗೋಶಾಲೆಗಳಿಗೆ ಬಿಡಲಾಗುತ್ತಿದೆ. ಹೀಗಾಗಿ ಗೋವುಗಳ ಸಂಖ್ಯೆ ಏರಿಕೆಯಾಗುತ್ತಿದ್ದು, ಸಾರ್ವಜನಿಕರ ಸಹಕಾರದ ಅಗತ್ಯವಿದೆ. ಹೀಗಾಗಿ ಸಾವಿರ ಗೋವುಗಳನ್ನು ದತ್ತು ಸ್ವೀಕಾರ ಮಾಡುವ ಮೂಲಕ ಗೋವಿನ ಸೇವೆಗೆ, ಗೋಶಾಲೆಗಳ ನಿರ್ವಹಣೆಗೆ ಪ್ರೋತ್ಸಾಹ ನೀಡಬೇಕು ಎಂದರು.
ಸಭೆಯಲ್ಲಿ ನಂಚಾರು ಕಾಮಧೇನು ಗೋಶಾಲೆಯ ಟ್ರಸ್ಟಿ ರಾಜೀವ ಚಕ್ಕೇರ, ಉದ್ಯಮಿ ರಮೇಶ್ ದೇವಾಡಿಗ, ಅನಿವಾಸಿ ಭಾರತೀಯ ಉದ್ಯಮಿ ಬಿ.ಕೆ ಶೆಟ್ಟಿ, ನಿವೃತ್ತ ಅಧಿಕಾರಿ ಭಾಸ್ಕರ್ ಶೆಟ್ಟಿ, ಮತ್ಸ್ಯೋಧ್ಯಮಿ ಶಂಭು ಟಿ ಸಾಲ್ಯಾನ್, ನಿವೃತ್ತ ಶಿಕ್ಷಕ ಬೈಕಾಡಿ ದಿನಕರ ಶೆಟ್ಟಿ ನಿರೂಪಿಸಿದರು. ಎಳ್ಳಂಪಳ್ಳಿ ಸಂತೋಷ್ ಶೆಟ್ಟಿ ವಂದಿಸಿದರು.