ಉಡುಪಿ: ನಗರದ ಅಲಂಕಾರ್ ಚಿತ್ರ ಮಂದಿರದ ಹಿಂಭಾಗದ ಮಾಂಡವಿ ಆಕ್ರೊಪೊಲಿಸ್ ವಸತಿ ಸಮುಚ್ಚಯದಲ್ಲಿ 300ಕ್ಕೂ ಹೆಚ್ಚಿನ ನಿವಾಸಿಗಳು ಸರ್ವ ಧರ್ಮದ ಸೌಹಾರ್ದ ದೀಪಾವಳಿ ಆಚರಿಸಿದರು.
ಸೊಸೈಟಿ ಅಧ್ಯಕ್ಷ ಸುಕುಮಾರ್ ಶೆಟ್ಟಿ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ದೀಪಾವಳಿಯ ಮಹತ್ವದ ಬಗ್ಗೆ ತಿಳಿಸಿದರು.
ನಿವಾಸಿಗಳು ಸಾವಿರಾರು ಹಣತೆ ದೀಪಗಳನ್ನು ಬೆಳಗಿಸಿದರ, ಹೂಗಳಿಂದ ರಚಿಸಿದ ವಿಶೇಷ ರಂಗೋಲಿ, ಸುಡು ಮದ್ದು ಪ್ರದರ್ಶನ ನಡೆಯಿತು. ಸೋಮವಾರದಂದು ರಾತ್ರಿ ಮಹಿಳೆಯರು , ಮಕ್ಕಳು , ಪುರುಷರು ಒಟ್ಟಾಗಿ ದಾಂಡಿಯಾ ನೃತ್ಯ ಮಾಡಿದರು.
ಸೊಸೈಟಿ ಕಾರ್ಯದರ್ಶಿ ರಾಘವ ನಾಯಕ್, ಲೆನ್ಸಿ ಡಯಾಸ್ , ವಿದ್ಯಾ ಸರಸ್ಪತಿ ತಂಡಹೂವಿನ ರಂಗೋಲಿ ರಚನೆಗೆ ಸಹಕರಿಸಿದರು.
ಸತೀಶ ಹೆಗ್ಡೆ ನಿರೂಪಿಸಿದರು.












