ದೊಡ್ಡಣ್ಣಗುಡ್ಡೆ: ಮೇ. 4 ರಂದು ಶ್ರೀದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ ನವೀಕೃತ ನಾಗಾಲಯದ ಪುನ: ಪ್ರತಿಷ್ಠಾ ಮಹೋತ್ಸವ

ಉಡುಪಿ: ದೊಡ್ಡಣ್ಣ ಗುಡ್ಡೆಯ ಶ್ರೀಚಕ್ರ ಪೀಠ ಸುರಪೂಜಿತೆ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದ ನಾಗಾಲಯದಲ್ಲಿ ಸಪರಿವಾರ ನಾಗದೇವರ ಪುನ: ಪ್ರತಿಷ್ಠೆ ಮೇ 4 ರಂದು ನೆರವೇರಲಿದೆ.

ಕ್ಷೇತ್ರದ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ ವೇದಮೂರ್ತಿ ಕೃಷ್ಣಮೂರ್ತಿ ತಂತ್ರಿಗಳ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಲಿದೆ.

ಆ ಪ್ರಯುಕ್ತ ಮೇ 3ರ ಸಂಜೆ ಗಂಟೆ 5 ರಿಂದ ತೋರಣ ಉಗ್ರಾಣ ಮುಹೂರ್ತ, ವಾಸ್ತು ರಾಕ್ಷೋಜ್ಞಾದಿ ಪ್ರಕ್ರಿಯೆ, ಸಪರಿವಾರ ನಾಗ ಬಿಂಬ, ಆದಿ ವಾಸ ಪ್ರಕ್ರಿಯೆ, ಮೇ 4ರ ಬೆಳಿಗ್ಗೆ ಗಂಟೆ ಏಳರಿಂದ ಪ್ರತಿಷ್ಠ ಪ್ರಧಾನ ಹೋಮ ಪ್ರತಿಷ್ಠಾ ಕಲಶ ಬೆಳಿಗ್ಗೆ ಗಂಟೆ 8:55 ಕ್ಕೆ ಪುನ ಪ್ರತಿಷ್ಠಾ ಕಲಶ ಅಭಿಷೇಕ, ಸರ್ವ ಪ್ರಾಯಶ್ಚಿತ ಪೂರ್ವಕ ಪವಮಾನ ಹೋಮ, ಪುಷ್ಮಾಂಡ ಹೋಮ, ಬ್ರಹ್ಮ ಗಾಯತ್ರಿ ಸರ್ಪತ್ರಯ ಹೋಮ, ಸಪರಿವಾರ ನಾಗದೇವರ ಪ್ರಧಾನ ಹೋಮ, 49 ಕಲಶ ಆರಾಧನೆ, ಬೆಳಿಗ್ಗೆ 9.30ಕ್ಕೆ ನಾಗ ಸಂದರ್ಶನ, 10 ಆಶ್ಲೇಷ ಬಲಿದಾನ, ಮಧ್ಯಾಹ್ನ ಮಹಾಪೂಜೆ, ಪಲ್ಲ ಪೂಜೆ ಹಾಗೂ ಮಹಾ ಅನ್ನಸಂತರ್ಪಣೆ, ನೆರವೇರಲಿದೆ.

ಸಾಂಸ್ಕೃತಿಕ ಕಾರ್ಯಕ್ರಮವಾಗಿ ಕ್ಷೇತ್ರದ ನವಶಕ್ತಿ ವೇದಿಕೆಯಲ್ಲಿ ಲತಾಂಗಿ ಸ್ಕೂಲ್ ಆಫ್ ಮ್ಯೂಸಿಕ್ ಪ್ರಸ್ತುತಪಡಿಸುವ ಭಕ್ತಿ ಸಂಗೀತ ಕಾರ್ಯಕ್ರಮ ಹಾಗೂ ವಿಶೇಷ ಸೇವೆಯಾದ ನೃತ್ಯ ಸೇವೆ ನೆರವೇರಲಿದೆ.

ಕಾರಣಿಕ ಕ್ಷೇತ್ರ

ಕಲಿಯುಗದಲ್ಲಿ ನಾಗರ ಮಹಿಮೆ ಏನೆಂಬುದನ್ನು ಭಕ್ತರಿಗೆ ತೋರಿಸಿಕೊಟ್ಟ ನಿದರ್ಶನಗಳಿಗೆ ಸಾಕ್ಷಿಭೂತವಾದ ಕ್ಷೇತ್ರದ ಪಂಚ ದೈವಿಕ ಸ್ಥಾನವಾದ ನಾಗಾಲಯದಲ್ಲಿ ನಾಗದೇವರ ಪ್ರೇರಣೆಯಂತೆ ಭಕ್ತರ ಸಾಕಾರದೊಂದಿಗೆ ನಾಗಾಲಯದ ಜೀರ್ಣೋದ್ಧಾರ ಕಾರ್ಯ ನೆರವೇರುತ್ತಿದೆ. ಪ್ರಥಮ ಹಂತದ ಜೀರ್ಣೋದ್ಧಾರ ಕಾರ್ಯದ ಅಂಗವಾಗಿ ನಾಗದೇವರಿಗೆ ವೃತ್ತಾಕಾರವನ್ನು ಹೋಲುವ ಕೆಂಪು ಕಲ್ಲು ಮತ್ತು ಮಣ್ಣು ಮಿಶ್ರಿತ ವಾಸ್ತು ಪ್ರಕಾರವಾಗಿ (ಹಿಂದೆ ರಾಜಶ್ರಯದಲ್ಲಿ ಆರಾಧಿಸಲ್ಪಡುತ್ತಿದ್ದ ಸಾನಿಧ್ಯಗಳ ಮಾದರಿಯಂತೆ )ನಿರ್ಮಿಸಲಾಗಿದೆ.
ಈ ನೂತನ ಆರೂಢದಲ್ಲಿ ಸಪರಿವಾರ ನಾಗದೇವರು ಸಹಿತ ಬ್ರಹ್ಮಲಿಂಗೇಶ್ವರ ರಕ್ತೇಶ್ವರಿ ನಂದಿಕೋಣ ಕ್ಷೇತ್ರ ಪಾಲರ ಪುನ ಪ್ರತಿಷ್ಠಾಪನೆ ನಡೆಯಲಿದೆ ಎಂದು ಕ್ಷೇತ್ರ ಉಸ್ತುವಾರಿ ಶ್ರೀಮತಿ ಕುಸುಮ ನಾಗರಾಜು ತಿಳಿಸಿದ್ದಾರೆ.

ಕಾರಣಿಕ ಶಕ್ತಿ ತಾಣ

ಮೂಲಸ್ಥಾನ ತಿಳಿಯದವರಿಗೆ ಮೂಲಸ್ಥಾನವಾಗಿ ಆದಿಸ್ತಾನ ಅರಿಯದವರಿಗೆ ಆದಿ ಸ್ಥಾನವಾಗಿ ಸಂತಾನ ಹೀನರಿಗೆ ಸಂತಾನ ಕರುಣಿಸುವ ಸಾನಿಧ್ಯವಾಗಿ ಮನೋಕ್ ಶೋಭೆಗೊಳಗಾದವರಿಗೆ ಮಾನಸಿಕ ನೆಮ್ಮದಿ ನೀಡಿ ಸಂಪತ್ತನ್ನು ಕರುಣಿಸುವ ಶಕ್ತಿ ತಾಣವಾಗಿ ನಾಗಾಲಯ ಬೆಳಗಲಿದೆ ಎಂಬುದು ನಾಗದೇವರ ಅಭಯ. ಅಂತೆಯೇ ಅದು ಅಕ್ಷರಶ ಸತ್ಯವಾಗಿದೆ. ಏಕಕಾಲದಲ್ಲಿ 109 ಆಶ್ಲೇಷ ಬಲಿ ಸೇವೆ ನಡೆದು ಸರ್ವ ನಾಗದೋಷ ನಿವಾರಣ ಕ್ಷೇತ್ರವಾಗಿ ಹೊರಹೊಮ್ಮಿದೆ. ನಾಗದೇವರ ಅಪ್ಪಣೆಯಂತೆ ಚಿತ್ರಕೂಟ ಸಹಿತವಾದ ನೂತನ ಆರೂಢವನ್ನು ಪ್ರಾಕೃತಿಕವಾಗಿ ನಿರ್ಮಿಸಲಾಗಿದೆ. ನಂಬಿ ಬಂದ ಭಕ್ತರ ಸಕಲ ಇಷ್ಟಾರ್ಥ ನೆರವೇರಿಸುತ್ತಿರುವ ಸಾನಿಧ್ಯದಲ್ಲಿ ನಡೆಯಲಿರುವ ಸತ್ಕಾರ್ಯದಲ್ಲಿ ಭಕ್ತರು ಪಾಲ್ಗೊಂಡು ನಾಗದೇವರ ಕೃಪೆಗೆ ಪಾತ್ರರಾಗಬೇಕೆಂದು ಧರ್ಮದರ್ಶಿ ಶ್ರೀ ರಮಾನಂದ ಗುರೂಜಿ ತಿಳಿಸಿದ್ದಾರೆ.