ಕಾಪು: ಅ.15 ರಿಂದ 17 ರವರೆಗೆ ಜೀರ್ಣೋದ್ದಾರ ನಿಧಿ ಸ್ಥಾಪನೆ, ಮುಷ್ಠಿ ಕಾಣಿಕೆ ಸಮರ್ಪಣೆ, ಮಹಾಸಂಕಲ್ಪ

ಕಾಪು: ಹಳೆ ಮಾರಿಯಮ್ಮ ದೇವಸ್ಥಾನದ ಸುತ್ತುಪೌಳಿಯ ಜೀರ್ಣೋದ್ದಾರದ ಪ್ರಯುಕ್ತ ಅ.15 ರಂದು ಜೀರ್ಣೋದ್ದಾರ ನಿಧಿ ಸ್ಥಾಪನೆ, ಮುಷ್ಠಿ ಕಾಣಿಕೆ ಸಮರ್ಪಣೆ ಮತ್ತು ಮಹಾಸಂಕಲ್ಪ ಅಭಿಯಾನ ಪ್ರಾರಂಭಗೊಳ್ಳಲಿದ್ದು, ಶ್ರೀ ಸಂಸ್ಥಾನ ಕಾಶೀ ಪೀಠಾಧಿಪತಿ ಶ್ರೀಮತ್ ಸಂಯಮೀಂದ್ರ ತೀರ್ಥ ಶ್ರೀಪಾದರ ಆಶೀರ್ವಾದ ಮತ್ತು ಮಾರ್ಗದರ್ಶನದಂತೆ ಸುತ್ತುಪೌಳಿಯ ಸಮಗ್ರ ಜೀರ್ಣೋದ್ದಾರದ ಯೋಜನೆ ಹಾಕಿಕೊಳ್ಳಲಾಗಿದೆ.

ಕಾಪು ಶ್ರೀವೆಂಕಟರಮಣ ದೇವಸ್ಥಾನ ಮತ್ತು ಶ್ರೀ ಹಳೆ ಮಾರಿಯಮ್ಮ ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಕಾಪು ಪೇಟೆಯ ಹತ್ತು ಸಮಸ್ತರು ನವರಾತ್ರಿಯ ಮೊದಲ ದಿನ ಬೆಳಗ್ಗೆ ವೆಂಕಟರಮಣ ದೇವರಿಗೆ ಪ್ರಾರ್ಥನೆ ಸಲ್ಲಿಸಿ, ಬಳಿಕ ಬೆಳಗ್ಗೆ 9 ಗಂಟೆಗೆ ಮಾರಿಯಮ್ಮ ದೇವಸ್ಥಾನದಲ್ಲಿ ಜೀರ್ಣೋದ್ಧಾರ ನಿಧಿ ಸ್ಥಾಪನೆ, ಮುಷ್ಠಿ ಕಾಣಿಕೆ ಮತ್ತು ಮಹಾಸಂಕಲ್ಪಕ್ಕೆ ಚಾಲನೆ ನೀಡಲಿದ್ದಾರೆ.

ಅ.17 ರವರೆಗೆ ಮುಷ್ಠಿ ಕಾಣಿಕೆ ಸಮರ್ಪಣೆ ನಡೆಯಲಿದೆ ಎಂದು ಆಡಳಿತ ಮೊಕ್ತೇಸರ ಪ್ರಸಾದ್ ಗೋಕುಲ್ ದಾಸ್ ಶೆಣೈ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.