ಹಿರಿಯಡ್ಕ: ಹಿಂದು ಜಾಗರಣ ವೇದಿಕೆ ಹಿರಿಯಡ್ಕ ವಲಯ ಮತ್ತು ಶ್ರೀ ಶನೇಶ್ವರ ಸೇವಾ ಸಮಿತಿ ಹಿರಿಯಡ್ಕ ಇವರ ವತಿಯಿಂದ ಹಿಂದೂ ಧಾರ್ಮಿಕ ಕಾರ್ಯಕ್ರಮ
ಏಪ್ರಿಲ್ 30 ರಂದು ಶನಿವಾರ ಹಿರಿಯಡ್ಕ ಶ್ರೀ ಕ್ಷೇತ್ರ ವೀರಭದ್ರ ದೇವಸ್ಥಾನದ ಮುಂಬಾಗದಲ್ಲಿ ನಡೆಯಲಿದೆ.
ಶ್ರೀ ಶ್ರೀ ಶ್ರೀ ಈಶಪ್ರೀಯ ತೀರ್ಥ ಸ್ವಾಮೀಜಿ ಅದಮಾರು ಮಠ, ಇವರ ದಿವ್ಯ ಉಪಸ್ಥಿತಿಯಲ್ಲಿ ನವಗ್ರಹ ಪೂರ್ವಕ ಶ್ರೀ ಶನಿಶಾಂತಿ ಮಹಾಯಾಗ ನಡೆಯಲಿದೆ.
ಬೆಳಗ್ಗೆ 7.30 ಕ್ಕೆ ಗಣಹೋಮ, 8.00 ಕ್ಕೆ ಶನೇಶ್ವರ ಯಾಗ ಪ್ರಾರಂಭ, 11.00 ಗಂಟೆಗೆ ಪ್ರಸಾದ ವಿತರಣೆ , 11.30 ಕ್ಕೆ ಧಾರ್ಮಿಕ ಕಾರ್ಯಕ್ರಮ ಪ್ರಾರಂಭವಾಗಲಿದ್ದು, ಯುವ ವಾಗ್ಮಿ ಕುಮಾರಿ ಹಾರಿಕಾ ಮಂಜುನಾಥ್ ಇವರು ದಿಕ್ಸೂಚಿ ಭಾಷಣ ಮಾಡಲಿದ್ದಾರೆ.
ಮಧ್ಯಾಹ್ನ 1 ಗಂಟೆಗೆ ಮಹಾ ಅನ್ನಸಂತರ್ಪಣೆ, ಮದ್ಯಾಹ್ನ 2 ರಿಂದ ಜಗದೀಶ್ ಪುತ್ತೂರು ಇವರಿಂದ “ಸಂಗೀತ ಗಾನ ಸಂಭ್ರಮ” ನಡೆಯಲಿದೆ.