ಟ್ವಿಟರ್ನಲ್ಲಿ ಪ್ರೇಕ್ಷಕರ ಪ್ರತಿಕ್ರಿಯೆ: ‘ಘೂಮರ್’ ವೀಕ್ಷಿಸಿದ ವ್ಯಕ್ತಿಯೊಬ್ಬರು ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಅಭಿಷೇಕ್ ಬಚ್ಚನ್ ಮತ್ತು ಸೈಯಾಮಿ ಖೇರ್ ಅಭಿನಯವನ್ನು ಶ್ಲಾಘಿಸಿದ್ದಾರೆ. “ಘೂಮರ್ ತುಂಬಾ ಚೆನ್ನಾಗಿದೆ. ಉತ್ತಮ ಸ್ಫೂರ್ತಿದಾಯಕ ಕ್ರಿಕೆಟ್ ಆಧಾರಿತ ಕಥೆಯಾಗಿದೆ. ನೋಡುಗರ ಭಾವನೆಯ ಮೇಲೆ ಹೆಚ್ಚು ಅವಲಂಬಿತವಾಗಿದೆ. ಚಿತ್ರದ ಅಂತ್ಯವು ಭಾವನಾತ್ಮಕತೆಯನ್ನು ನೀಡುತ್ತದೆ. ಅಭಿಷೇಕ್ ಬಚ್ಚನ್ ಪಾತ್ರವು ತುಂಬಾ ಚೆನ್ನಾಗಿದೆ” ಎಂದು ಬರೆದುಕೊಂಡಿದ್ದಾರೆ. ಚಿತ್ರಕ್ಕೆ ಮೂರು ಸ್ಟಾರ್ ನೀಡಿದ್ದಾರೆ.
ಈ ಕ್ರೀಡಾಧಾರಿತ ಚಿತ್ರದಲ್ಲಿ ಜೂನಿಯರ್ ಬಚ್ಚನ್ ಕೋಚ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕೋಚ್ ಅಭಿಷೇಕ್ ಬಚ್ಚನ್ ಮಾರ್ಗದರ್ಶನದಲ್ಲಿ ಕ್ರಿಕೆಟ್ ತರಬೇತಿ ಪಡೆಯುವ ಸೈಯಾಮಿ ಖೇರ್ (Saiyami) ಪಾತ್ರ ಕೂಡ ಗಮನ ಸೆಳೆದಿದೆ. ಸ್ಫೂರ್ತಿದಾಯಕ ಕಥೆಗೆ ಆರ್.ಬಾಲ್ಕಿ ಆಯಕ್ಷನ್ ಕಟ್ ಹೇಳಿದ್ದಾರೆ. ಚಿತ್ರವು ಬಿಡುಗಡೆಯಾದ ಮೊದಲ ದಿನ ವಿಮರ್ಶಕರು ಮತ್ತು ಪ್ರೇಕ್ಷಕರಿಂದ ಉತ್ತಮ ವಿಮರ್ಶೆ ದಕ್ಕಿಸಿಕೊಂಡಿದೆ. ಅಭಿಷೇಕ್ ಬಚ್ಚನ್ ಮತ್ತು ಸೈಯಾಮಿ ಖೇರ್ ಮುಖ್ಯಭೂಮಿಕೆಯಲ್ಲಿರುವ ‘ಘೂಮರ್’ ಸಿನಿಮಾ ಇಂದು ತೆರೆ ಕಂಡಿದೆ. ಈ ಚಿತ್ರ ನೋಡಿದ ಪ್ರೇಕ್ಷಕರ ಟ್ವಿಟರ್ ಪ್ರತಿಕ್ರಿಯೆ ಹೀಗಿದೆ..ಬಾಲಿವುಡ್ ಬಿಗ್ ಬಿ ಪುತ್ರ, ನಟ ಅಭಿಷೇಕ್ ಬಚ್ಚನ್ ಅಭಿನಯದ ಬಹುನಿರೀಕ್ಷಿತ ‘ಘೂಮರ್’ ಸಿನಿಮಾ ಇಂದು ಬಿಡುಗಡೆಯಾಗಿದೆ.
ಘೂಮರ್ ಚಿತ್ರಕಥೆ..: ಘೂಮರ್ ಚಿತ್ರ ಕಥೆಯು ಮಹಿಳಾ ಆಟಗಾರ್ತಿ ಅನಿನಾ ಮೇಲೆ ಕೇಂದ್ರೀಕೃತವಾಗಿದೆ. ಅಂತರರಾಷ್ಟ್ರೀಯ ಕ್ರಿಕೆಟ್ಗೆ ಪಾದಾರ್ಪಣೆ ಮಾಡುವ ವೇಳೆ ಸಂಭವಿಸಿದ ಭೀಕರ ಅಪಘಾತದಲ್ಲಿ ಆಕೆ ತನ್ನ ಬಲಗೈಯನ್ನು ಕಳೆದುಕೊಳ್ಳುತ್ತಾಳೆ. ಅನಿನಾ ಕನಸುಗಳು ಭಗ್ನಗೊಳ್ಳುತ್ತವೆ. ಕನಸು ವಿಫಲವಾಗಿ ಹತಾಶೆಗೊಂಡಿದ್ದ ಕ್ರಿಕೆಟಿಗ ಅನಿನಾಳ ಜೀವನದಲ್ಲಿ ಒಂದು ವ್ಯಕ್ತಿಯ ಆಗಮನವಾಗುತ್ತದೆ. ಅವರ ಹೊಸ ಕನಸಿಗೆ ವೇಗ ವೇಗವರ್ಧಕನಾಗುತ್ತಾರೆ. ತರಬೇತಿಯ ಮೂಲಕ ಮತ್ತೆ ಬೌಲರ್ ಆಗಿ ಕ್ರಿಕೆಟ್ ತಂಡಕ್ಕೆ ಮರಳಲು ದಾರಿ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಅವರು ತಮ್ಮ ಎದುರಾಳಿಯನ್ನು ಸೋಲಿಸಲು ಘೂಮರ್ ಎಂಬ ಶೈಲಿಯ ಬೌಲಿಂಗ್ ಅನ್ನು ಪ್ರದರ್ಶಿಸಿದರು.
ಹೀಗಾಗಿ ಸಿನಿಮಾಗೆ ಘೂಮರ್ ಎಂದು ಹೆಸರಿಡಲಾಗಿದೆ. ಆಕೆಯ ಬದುಕಿಗೆ ದಾರಿದೀಪವಾಗಿ ಬಂದ ಕೋಚ್ ಪಾತ್ರದಲ್ಲಿ ಅಭಿಷೇಕ್ ಬಚ್ಚನ್ ಮತ್ತು ಅನಿನಾ ಪಾತ್ರದಲ್ಲಿ ಸಯಾಮಿ ನಟಿಸಿದ್ದಾರೆ. ಇದೇ ಘೂಮರ್ ಸಿನಿಮಾದ ಹೂರಣ. ಘೂಮರ್ ಚಿತ್ರದಲ್ಲಿ ಹೊಸ ಬೌಲಿಂಗ್ ಶೈಲಿಯನ್ನು ವಿನ್ಯಾಸಗೊಳಿಸಲಾಗಿದೆ. ಸಿನಿಮಾ ಅಥ್ಲೀಟ್ ಕರೋಲಿ ಟಕಾಕ್ಸ್ (Karoly Takacs) ಸಾಧನೆಯಿಂದ ಸ್ಫೂರ್ತಿ ಪಡೆದಿದೆ. ನಟ ಅಭಿಷೇಕ್ ಬಚ್ಚನ್ ಅವರಿಗೆ ಸಿನಿಮಾ ಜೀವನದ ಯಶಸ್ಸಿಗೆ ಸಹಾಯವಾಗಲಿದೆ ಎಂದು ನಂಬಲಾಗಿದೆ.ಮತ್ತೊಬ್ಬರು, “ಘೂಮರ್ ತುಂಬಾ ಸ್ಫೂರ್ತಿದಾಯಕ ಚಿತ್ರವಾಗಿದೆ. ಅಭಿಷೇಕ್ ಬಚ್ಚನ್ ಮತ್ತು ಸೈಯಾಮಿ ಖೇರ್ ನಟನೆ ವಿಶೇಷಗಾಗಿ ಕ್ರಿಕೆಟ್ ಪ್ರೇಮಿಗಳನ್ನು ಆಕರ್ಷಿಸುತ್ತದೆ” ಎಂದು ಟ್ವೀಟ್ ಮಾಡಿದ್ದಾರೆ. ‘ಘೂಮರ್’ ಚಿತ್ರಕ್ಕೆ ಆರ್ ಬಾಲ್ಕಿ ಅವರೇ ಕಥೆ ಬರೆದು ಆಯಕ್ಷನ್ ಕಟ್ ಹೇಳಿದ್ದಾರೆ. ಶಬಾನಾ ಅಜ್ಮಿ ಮತ್ತು ಅಂಗದ್ ಬೇಡಿ ಕೂಡ ಸಿನಿಮಾದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.












