ರಕ್ಷಿತ್ ಶೆಟ್ಟಿ ಅಭಿನಯದ ಬಹುನಿರೀಕ್ಷಿತ ‘777 ಚಾರ್ಲಿ’ ಚಿತ್ರದ ರಿಲೀಸ್ ಡೇಟ್ ಅನೌನ್ಸ್.!

ಸಿಂಪಲ್ ಸ್ಟಾರ್ ರಕ್ಷಿತ್ ಅಭಿನಯದ ಬಹುನಿರೀಕ್ಷಿತ ‘777 ಚಾರ್ಲಿ’ ಚಿತ್ರದ ರಿಲೀಸ್ ಡೇಟ್ ಅನೌನ್ಸ್ ಮಾಡಿದ್ದು, ಬರುವ ಜೂನ್ 10ಕ್ಕೆ ವಿಶ್ವದೆಲ್ಲೆಡೆ ‘777 ಚಾರ್ಲಿ’ ಸಿನೆಮಾ ತೆರೆ ಕಾಣುತ್ತಿದೆ.

ಪ್ರತಿ ಸಿನಿಮಾದಲ್ಲೂ ವಿಭಿನ್ನ ಪಾತ್ರದಲ್ಲಿ ಎಂಟ್ರಿ ಕೊಡುವ ರಕ್ಷಿತ್ ಶೆಟ್ಟಿ ಈ ಚಿತ್ರದಲ್ಲೂ ವಿಭಿನ್ನ ಪಾತ್ರದಲ್ಲಿ ಮಿಂಚಲು ಸಜ್ಜಾಗಿದೆ.

ಚಿತ್ರ ತಂಡವು ‘777 ಚಾರ್ಲಿ’ ಸಿನೆಮಾದ ದಿನಾಂಕವನ್ನು ಇದೇ ಬರುವ ಜೂನ್ 10ಕ್ಕೆ ದೇಶಾದ್ಯಂತ ತೆರೆ ಕಾಣಲಿದೆ ಎಂದು ಅನೌನ್ಸ್ ಮಾಡಿದೆ.

ಕಿರಣ್ ರಾಜ್ ನಿರ್ದೇಶನದ  777 ಚಾರ್ಲಿ ಸಿನೆಮಾವು ಶ್ವಾನ ಮತ್ತು ಮನುಷ್ಯನ ಸಂಬಂಧದ ಮೇಲೆ ಹೆಣೆಯಲಾದ ಕಥೆಯಾಗಿದೆ. ರಕ್ಷಿತ್ ಶೆಟ್ಟಿಗೆ ನಾಯಕಿಯಾಗಿ ಸಂಗೀತ ಶೃಂಗೇರಿ ನಟಿಸಿದ್ದಾರೆ.

777 ಚಾರ್ಲಿ ಮೂರು ವರ್ಷಗಳ ನಂತರ ಈ ಚಿತ್ರ ತೆರೆ ಕಾಣುತ್ತಿದ್ದು, ಈ ಚಿತ್ರಕ್ಕೆ ಅಭಿಮಾನಿಗಳು ದೊಡ್ಡಮಟ್ಟದ ನಿರೀಕ್ಷೆಯನ್ನು ಇಟ್ಟಿದ್ದಾರೆ.

ಹಾಗೂ  ಈ ಚಿತ್ರದಲ್ಲಿ ರಾಜ್ ಬಿ ಶೆಟ್ಟಿ, ದಾನಿಷ್ ಶೇಠ್, ಬಾಬಿ ಸಿಂಹ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಈಗಾಗಲೇ 777 ಚಾರ್ಲಿ ಚಿತ್ರದ ಟೀಸರ್, ಪೋಸ್ಟರ್‌ ರಿಲೀಸ್ ಆಗಿ, ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ.

ಈ ಚಿತ್ರ ಕನ್ನಡ ಮಾತ್ರವಲ್ಲದೇ ಹಿಂದಿ, ತೆಲುಗು ಮತ್ತು ಮಲಯಾಳಂನಲ್ಲಿ ತೆರೆ ಕಾಣಲಿದೆ.