ಅಮರನಾಥ ಯಾತ್ರೆ: ಜಿಲ್ಲಾ ಯಾತ್ರಾರ್ಥಿಗಳ ಸಂಬಂಧಿಕರು ಜಿಲ್ಲಾಡಳಿತದ ಟೋಲ್ ಫ್ರೀ ಸಂಖ್ಯೆಗೆ ಕರೆ ಮಾಡುವಂತೆ ಜಿಲ್ಲಾಧಿಕಾರಿ ಮನವಿ

ಉಡುಪಿ: ಜಿಲ್ಲೆಯಿಂದ ಅಮರನಾಥ ಕ್ಷೇತ್ರ ಯಾತ್ರೆ ಕೈಗೊಂಡು, ಮೇಘಸ್ಪೋಟದ ಪ್ರವಾಹಕ್ಕೆ ಸಿಲುಕಿರುವ, ಸುರಕ್ಷಿತವಾಗಿರುವ ಯಾತ್ರಾರ್ಥಿಗಳು ಯಾರಾದರೂ ಇದ್ದಲ್ಲಿ ಇವರ ಸಂಬಂಧಿಕರು ಕೂಡಲೇ ಜಿಲ್ಲಾಡಳಿತದ ನಿಯಂತ್ರಣ ಕೊಠಡಿ ಟೋಲ್ ಫ್ರೀ ಸಂಖ್ಯೆ 1077 (0820-2574802) ಕರೆ ಮಾಡಿ ಸಂಬಂಧಪಟ್ಟ ಯಾತ್ರಾರ್ಥಿಗಳ ಮಾಹಿತಿಯನ್ನು ನೀಡುವಂತೆ ಜಿಲ್ಲಾಧಿಕಾರಿ ಕೂರ್ಮಾ ರಾವ್ ಎಂ ಕೋರಿದ್ದಾರೆ.