ಉಡುಪಿ: ವಿಕಲಚೇತನರು ಸರ್ಕಾರಿ ಮತ್ತು ಸರ್ಕಾರೇತರ ಸೌಲಭ್ಯ ಪಡೆಯಲು ವಿಶೇಷ ಗುರುತು ಚೀಟಿ (ಯು.ಡಿ.ಐ.ಡಿ ಕಾರ್ಡ್) ಗಾಗಿ ಏ.18 ಮತ್ತು 19 ರಂದು ಉಡುಪಿ ನಗರಸಭಾ ಕಚೇರಿ, 20 ಮತ್ತು 21 ರಂದು ಬಡಗುಬೆಟ್ಟು ನಗರಸಭಾ ಉಪಕಚೇರಿ, 22 ಮತ್ತು 25 ರಂದು ಮಣಿಪಾಲ ನಗರಸಭಾ ಉಪಕಚೇರಿ, 26 ಮತ್ತು 27 ರಂದು ಹೆರ್ಗಾ ನಗರಸಭಾ ಉಪ ಕಚೇರಿ, 28 ಮತ್ತು 29 ರಂದು ಮಲ್ಪೆ ನಗರಸಭಾ ಕಚೇರಿ ಹಾಗೂ ಏ. 30 ಮತ್ತು ಮೇ.2 ರಂದು ಪುತ್ತೂರು ನಗರಸಭಾ ಕಚೇರಿಯಲ್ಲಿ ನೋಂದಾವಣಾ ಶಿಬಿರ ನಡೆಯಲಿದೆ.
ಉಡುಪಿ ನಗರಸಭಾ ವ್ಯಾಪ್ತಿಯ ವಿಕಲಚೇತನರು ಈ ಸೌಲಭ್ಯದ ಸದುಪಯೋಗ ಪಡೆದುಕೊಳ್ಳುವಂತೆ ನಗರಸಭೆ ಪೌರಾಯುಕ್ತರ ಕಚೇರಿ ಪ್ರಕಟಣೆ ತಿಳಿಸಿದೆ.