ಇನ್ಕಮ್ ಟ್ಯಾಕ್ಸ್ ರಿಟರ್ನ್ಸ್: ಕೊನೆಯ ದಿನ ದಾಖಲೆಯ 72.42 ಲಕ್ಷ ಐಟಿಆರ್‌ ಸಲ್ಲಿಕೆ; ಒಟ್ಟು 5 ಕೋಟಿ 83 ಲಕ್ಷ ಐಟಿಆರ್‌ ಗಳು

ನವದೆಹಲಿ: ಇನ್ಕಮ್ ಟ್ಯಾಕ್ಸ್ ರಿಟರ್ನ್ಸ್ ಸಲ್ಲಿಸಲು ಜುಲೈ 31 ಕೊನೆಯದಿನವಾಗಿದ್ದು, ಈ ದಿನಾಂಕವನ್ನು ವಿಸ್ತರಣೆ ಮಾಡಬೇಕೆಂದು ಕೂಗು ಕೇಳಿ ಬಂದಿದ್ದರೂ ವಿತ್ತ ಇಲಾಖೆಯು ದಿನಾಂಕ ವಿಸ್ತರಣೆಗೆ ಹಿಂದೇಟು ಹಾಕಿತ್ತು. ಆದಾಗೂ, ಕೊನೆಯ ದಿನವಾದ ಜುಲೈ 31 ರವರೆಗೆ 5 ಕೋಟಿ 83 ಲಕ್ಷ ಆದಾಯ ತೆರಿಗೆ ರಿಟರ್ನ್ಸ್ (ಐಟಿಆರ್) ಸಲ್ಲಿಕೆಯಾಗಿದೆ ಎಂದು ತಿಳಿದುಬಂದಿದೆ. ಭಾನುವಾರ ಒಂದೇ ದಿನ 72 ಲಕ್ಷದ 42 ಸಾವಿರಕ್ಕೂ ಅಧಿಕ ಐಟಿಆರ್ ಸಲ್ಲಿಕೆಯಾಗಿದೆ ಎಂದು ಕಂದಾಯ ಇಲಾಖೆ ತಿಳಿಸಿದೆ. ಕ್ಲಪ್ತ ಸಮಯಕ್ಕೆ ಐಟಿಆರ್‌ ಫೈಲ್ ಮಾಡಿದ್ದಕ್ಕಾಗಿ ಇಲಾಖೆಯು ತೆರಿಗೆದಾತರಿಗೆ ಮತ್ತು ತೆರಿಗೆ ವೃತ್ತಿಪರರಿಗೆ ಕೃತಜ್ಞತೆಯನ್ನು ಸಲ್ಲಿಸಿದೆ. ಐಟಿಆರ್‌ಗಳ ಫೈಲಿಂಗ್‌ನಲ್ಲಿ ಹೆಚ್ಚಳವು ಹೊಸ ದಾಖಲೆಯನ್ನು ನಿರ್ಮಾಣ ಮಾಡಿದೆ ಎಂದು ಇಲಾಖೆ ಹೇಳಿದೆ.