ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ಅವರ “ಬುದ್ಧಿವಂತ-2” ಹೆಸರಿನಲ್ಲಿ ಮತ್ತೊಂದು ಸಿನಿಮಾ ಬರುತ್ತಿದ್ದು, ವಿಶೇಷವಾಗಿ ಸಿನಿಮಾದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಎರಡು ಪೋಸ್ಟರ್ ಗಳ ಮೂಲಕ ಉಪೇಂದ್ರ ದರ್ಶನವನ್ನು ನಿರ್ದೇಶಕರು ಮಾಡಿಸಿದ್ದಾರೆ. ಎರಡೂ ಪೋಸ್ಟರ್ ಗಳು ಒಂದಷ್ಟು ಕುತೂಹಲ ಹುಟ್ಟಿಸಿವೆ. ಮೌರ್ಯ ಈ ಸಿನಿಮಾದ ನಿರ್ದೇಶನ ಮಾಡುತ್ತಿದ್ದಾರೆ.
ನಟಿ ಸೋನಾಲ್ ಹಾಗೂ ಮೇಘನಾ ರಾಜ್ ಚಿತ್ರದ ನಾಯಕಿಯರಾಗಿದ್ದು, ನಟ ಆದಿತ್ಯ ವಿಲನ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಬುದ್ಧಿವಂತ 2 ಎಂಬ ಹೆಸರಿನ ಕಾರಣ ಸಿನಿಮಾದ ಮೇಲೆ ನಿರೀಕ್ಷೆ ದೊಡ್ಡದಾಗಿದೆ. ನಿರ್ಮಾಪಕ ಚಂದ್ರಶೇಖರ್ ಈ ಚಿತ್ರಕ್ಕೆ ಬಂಡವಾಳ ಹಾಕುತ್ತಿದ್ದಾರೆ.
ಗುರುಕಿರಣ್ ಸಂಗೀತ ಸಂಯೋಜನೆ ಮಾಡುತ್ತಿದ್ದು, ಬೆಂಗಳೂರಿನ ಶ್ರೀ ಧರ್ಮಗಿರಿ ಮಂಜುನಾಥ ಸ್ವಾಮಿ ದೇವಾಲಯದಲ್ಲಿ ಸಿನಿಮಾ ಮುಹೂರ್ತ ನಡೆಯುತ್ತಿದೆ ಎಂದು ತಿಳಿದು ಬಂದಿದೆ.