ಬೆಂಗಳೂರು: ಸಿ.ಡಿ ಪ್ರಕರಣದಲ್ಲಿನ ಸಂತ್ರಸ್ತ ಯುವತಿ ಇದುವರೆಗೆ ನನ್ನನ್ನು ಭೇಟಿಯಾಗಿಲ್ಲ. ಆದರೆ ನನ್ನನ್ನು ಭೇಟಿಯಾದರೆ ಆಕೆಗೆ ಸಹಾಯ ಮಾಡಲು ಸಿದ್ಧ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿದಿನ ಮನೆ, ಕಚೇರಿಗೆ ಸಾವಿರಾರು ಜನ ನನ್ನನ್ನು ಭೇಟಿಯಾಗಲು ಬರುತ್ತಾರೆ. ಆ ಯುವತಿ ಕೂಡಾ ಭೇಟಿ ಮಾಡಲು ಯತ್ನಿಸಿರಬಹುದು ಎಂದರು.
ನರೇಶ್ ನನ್ನ ಆಪ್ತ. ಮಾಧ್ಯಮದಲ್ಲಿ ಇದ್ದವನು. ನನಗೆ ಬಹಳ ಪರಿಚಯ. ಆದರೆ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನರೇಶ್ ನನ್ನನ್ನು ಸಂಪರ್ಕಿಸಿಲ್ಲ. ಸಹಾಯ ಕೇಳಿಲ್ಲ ಎಂದು ಹೇಳಿದರು.