ಕನ್ನಡ ಚಿತ್ರರಂಗದಲ್ಲಿ ಯುವ ಸಾಮ್ರಾಟ್ ಆಗಿ ಕನ್ನಡಿಗರ ಮನಸ್ಸು ಕದ್ದಿದ್ದ ನಟ ಚಿರಂಜೀವಿ ಸರ್ಜಾ. ‘ರಾಜಮಾರ್ತಾಂಡ’ ಚಿತ್ರದ ಕಲರ್ಫುಲ್ ಮೇಕಿಂಗ್ ವಿಡಿಯೋವನ್ನು ಚಿತ್ರತಂಡ ಅನಾವರಣಗೊಳಿಸಿದೆ. ಇದರಲ್ಲಿ ಚಿರಂಜೀವಿ ಮಗ ರಾಯನ್ ಸರ್ಜಾ ತನ್ನ ತಂದೆಯನ್ನು ಕಂಡು ಕುಣಿದು ಕುಪ್ಪಳಿಸಿದ ಪರಿ ನೋಡುಗರನ್ನು ಭಾವುಕರನ್ನಾಗಿಸಿದೆ.ಈ ಸಿನಿಮಾದ ಚಿತ್ರೀಕರಣ ಚಿರು ನಿಧನಕ್ಕೂ ಮುನ್ನವೇ ಪೂರ್ಣಗೊಂಡಿತ್ತು. ಆದರೆ ಡಬ್ಬಿಂಗ್ ಮಾತ್ರ ಬಾಕಿಯಿತ್ತು. ಬಳಿಕ ಅಣ್ಣನ ಪಾತ್ರಕ್ಕೆ ತಮ್ಮ ಧ್ರುವ ಸರ್ಜಾ ಧ್ವನಿ (ಡಬ್ಬಿಂಗ್) ನೀಡಿದರು. ಇನ್ನು ಚಿತ್ರವನ್ನು ಪೂರ್ಣ ಮಾಡಲು ಚಿರು ಪತ್ನಿ ಮೇಘನಾ ರಾಜ್ ಸರ್ಜಾ ಅವರು ನೀಡಿದ ಸಹಕಾರ ಮರೆಯುವ ಹಾಗಿಲ್ಲ. ಇದೀಗ ರಾಜಮಾರ್ತಾಂಡ ಚಿತ್ರದ ಕಲರ್ಫುಲ್ ಮೇಕಿಂಗ್ ವಿಡಿಯೋವನ್ನು ಚಿತ್ರತಂಡ ಅನಾವರಣ ಮಾಡಿದೆ.
ಇದರಲ್ಲಿ ಚಿರು ಶೂಟಿಂಗ್ ಸೆಟ್ನಲ್ಲಿ ಹೇಗಿದ್ದರು ಅನ್ನೋದನ್ನು ತೋರಿಸಲಾಗಿದೆ. ಜೊತೆಗೆ ಚಿರಂಜೀವಿ ಮಗ ರಾಯನ್ ಸರ್ಜಾ ‘ರಾಜಮಾರ್ತಾಂಡ’ ಸಿನಿಮಾದಲ್ಲಿ ಅಪ್ಪನನ್ನು ಕಂಡು ಖುಷಿಪಟ್ಟ ಸುಂದರ ಕ್ಷಣಗಳನ್ನು ಕೂಡ ತೋರಿಸಲಾಗಿದೆ. ಅಪ್ಪನನ್ನು ನೋಡಿ ಕುಣಿದು ಕುಪ್ಪಳಿಸಿದ ಪರಿ ನೋಡುಗರನ್ನು ಭಾವುಕರನ್ನಾಗಿಸಿದೆ.ಚಿತ್ರರಂಗದಲ್ಲಿ ಮಾಸ್ ಇಮೇಜ್ ಕ್ರಿಯೇಟ್ ಮಾಡಿಕೊಂಡಿದ್ದ ಚಿರಂಜೀವಿ ಸರ್ಜಾ ಅವರ ಅಕಾಲಿಕ ನಿಧನ ಕರುನಾಡ ಜನರಿಗೆ ಕಣ್ಣೀರು ತರಿಸಿತ್ತು. ಚಿರು ತಮ್ಮ ನಿಧನಕ್ಕೂ ಮುಂಚೆ ‘ರಾಜಮಾರ್ತಾಂಡ’ ಚಿತ್ರದಲ್ಲಿ ನಾಯಕನಾಗಿ ಅಭಿನಯಿಸಿದ್ದರು. ಸದ್ಯ ಈ ಸಿನಿಮಾ ಸ್ಯಾಂಡಲ್ವುಡ್ನಲ್ಲಿ ಹಲವಾರು ವಿಚಾರಗಳಿಗೆ ಟಾಕ್ ಆಗುತ್ತಿದೆ.
ಇನ್ನು, ರಾಜಮಾರ್ತಾಂಡ ಸಿನಿಮಾದ ಚಿರಂಜೀವಿ ಪಾತ್ರಕ್ಕೆ ಧ್ರುವ ಸರ್ಜಾ ಡಬ್ಬಿಂಗ್ ಮಾಡಿದ್ದಾರೆ. ಇದರ ಜೊತೆಗೆ ರಾಜಮಾರ್ತಾಂಡದಲ್ಲಿ ನಟ ದರ್ಶನ್ ಅವರ ಧ್ವನಿ ಸಹ ಕೇಳಬಹುದು. ಇದು ಈ ಚಿತ್ರಕ್ಕೆ ದೊಡ್ಡ ಮಟ್ಟದ ಪ್ಲಸ್ ಪಾಯಿಂಟ್ ಅಂತಲೇ ಹೇಳಬಹುದು. ರಾಜ ಮಾರ್ತಾಂಡ ಚಿತ್ರವನ್ನು ಧ್ರುವ ಸರ್ಜಾ ಅವರ ಹುಟ್ಟುಹಬ್ಬದ ದಿನದಂದು (ಅಕ್ಟೋಬರ್ 6) ಬಿಡುಗಡೆ ಮಾಡಲು ನಿರ್ಮಾಪಕ ಹಾಗೂ ನಿರ್ದೇಶಕರು ನಿರ್ಧರಿಸಿದ್ದಾರೆ. ಇದು ಚಿರಂಜೀವಿ ಸರ್ಜಾ ಹಾಗು ಧ್ರುವ ಸರ್ಜಾ ಅಭಿಮಾನಿ ಬಳಗದಲ್ಲಿ ಕೌತುಕ ಮೂಡಿಸಿದೆ.
ಈ ಚಿತ್ರವನ್ನು ಶ್ರೀ ಮಾದೇಶ್ವರ ಪ್ರೊಡಕ್ಷನ್ಸ್ ಮೂಲಕ ಪ್ರಣವ್ ಗೌಡ.ಎನ್, ನಿವೇದಿತಾ ಹಾಗೂ ಶಿವಕುಮಾರ್ ನಿರ್ಮಿಸಿದ್ದಾರೆ. ಚಿತ್ರದಲ್ಲಿ ಸುಮಧುರವಾದ ನಾಲ್ಕು ಹಾಡುಗಳಿದ್ದು, ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಧರ್ಮವಿಶ್ ಹಿನ್ನೆಲೆ ಸಂಗೀತ ‘ರಾಜಮಾರ್ತಾಂಡ’ನ ವೈಭವವನ್ನು ಮತ್ತಷ್ಟು ಹೆಚ್ಚಿಸಿದೆ. ಜೆ.ಕೆ.ಗಣೇಶ್ ಛಾಯಾಗ್ರಹಣ, ವೆಂಕಟೇಶ್ ಯು ಡಿ ವಿ ಸಂಕಲನ, ವಿನೋದ್, ಪಳನಿರಾಜ್ ಸಾಹಸ ನಿರ್ದೇಶನ ಹಾಗೂ ಭೂಷಣ್, ಹರ್ಷ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.
ಚಿತ್ರತಂಡ ಹೀಗಿದೆ.. ಚಿರಂಜೀವಿ ಸರ್ಜಾ ಅವರಿಗೆ ನಾಯಕಿಯರಾಗಿ ದೀಪ್ತಿ ಸಾತಿ, ಮೇಘಶ್ರೀ, ತ್ರಿವೇಣಿ (ಟಗರು) ಅಭಿನಯಿಸಿದ್ದಾರೆ. ಭಜರಂಗಿ ಲೋಕಿ, ಚಿಕ್ಕಣ್ಣ, ದೇವರಾಜ್, ಸುಮಿತ್ರ, ಶಂಕರ್ ಅಶ್ವಥ್, ವಿನೀತ್ ಕುಮಾರ್ (ಬಾಂಬೆ) ಮುಂತಾದವರು ತಾರಾಬಳಗದಲ್ಲಿದ್ದಾರೆ. ಗೀತರಚನೆಕಾರರಾಗಿ ಜನಪ್ರಿಯರಾಗಿರುವ ಜೆ.ಕೆ.ರಾಮನಾರಾಯಣ್ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶಿಸಿದ್ದಾರೆ.ರಾಜಮಾರ್ತಾಂಡ ಚಿತ್ರದ ಟೀಸರ್ ಈಗಾಗಲೇ ರಿಲೀಸ್ ಆಗಿದ್ದು, ಇದು ರಾಜಮನೆತನದ ಕಥೆ ಅನ್ನೋದು ಗೊತ್ತಾಗುತ್ತೆ. ಚಿರಂಜೀವಿ ಸರ್ಜಾ ಭರ್ಜರಿ ಆಕ್ಷನ್ ಮಾಡುವುದರ ಜೊತೆಗೆ ಸಖತ್ ಎಂಜಾಯ್ ಮಾಡಿಕೊಂಡು ಈ ಸಿನಿಮಾದ ಚಿತ್ರೀಕರಣ ಮುಗಿಸಿದ್ದಾರೆ. ಚಿರು ಜೊತೆ ಹಾಸ್ಯ ನಟ ಚಿಕ್ಕಣ್ಣ, ನಾಯಕಿ ದೀಪ್ತಿ ಸಾತಿ, ಮೇಘಶ್ರೀ, ಟಗರು ಖ್ಯಾತಿಯ ತ್ರಿವೇಣಿ ಶೂಟಿಂಗ್ ಎಂಜಾಯ್ ಮಾಡಿಕೊಂಡು ಭಾಗವಹಿಸಿದ್ದಾರೆ.












