ಅಗ್ನಿಪಥ್ ಯೋಜನೆಯಡಿ ರಕ್ಷಣಾ ಪಡೆಗಳ ಭಾಗವಾಗಲಿದ್ದಾರೆ ಬಿಜೆಪಿ ಸಂಸದ ರವಿ ಕಿಶನ್ ಮಗಳು

ಅವದೆಹಲಿ: ಬಿಜೆಪಿ ಸಂಸದ, ನಟ ರವಿ ಕಿಶನ್ ಅವರ ಪುತ್ರಿ ಇಶಿತಾ ಶುಕ್ಲಾ ಅವರು ಅಗ್ನಿಪಥ್ ಯೋಜನೆಯಡಿ ರಕ್ಷಣಾ ಪಡೆಗಳ ಭಾಗವಾಗಲಿದ್ದಾರೆ.

ರವಿ ಕಿಶನ್ ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಈ ವಿಷಯವನ್ನು ಹಂಚಿಕೊಂಡಿದ್ದಾರೆ. ಇಶಿತಾಗೆ ಕೇವಲ 21 ವರ್ಷ. ಇಶಿತಾ ದೆಹಲಿ ನಿರ್ದೇಶನಾಲಯದ ‘7 ಗರ್ಲ್ ಬೆಟಾಲಿಯನ್’ನ ಕೆಡೆಟ್ ಎಂದು ರವಿ ಕಿಶನ್ ಹೇಳಿದ್ದಾರೆ

ಅಗ್ನಿಪಥ್ ಯೋಜನೆಯು ಭಾರತೀಯ ನಾಗರಿಕರ ಸೇನಾ ನೇಮಕಾತಿ ಕಾರ್ಯಕ್ರಮವಾಗಿದ್ದು, ಈ ಯೋಜನೆಯಡಿ ತರಬೇತಿ ಪಡೆದವರು ಸೇನೆ, ನೌಕಾಪಡೆ ಮತ್ತು ವಾಯುಪಡೆಗೆ ಸೇರಿಕೊಳ್ಳುತ್ತಾರೆ. ಯುವಕ-ಯುವತಿಯರು ನಾಲ್ಕು ವರ್ಷಗಳ ಅವಧಿಗೆ ಸಶಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸಲು ಅಗ್ನಿಪಥ್ ಯೋಜನೆ ಅನುವು ಮಾಡಿಕೊಡುತ್ತದೆ. ಅಗ್ನಿಪಥ್ ಯೋಜನೆಯಲ್ಲಿ ಸೇವೆ ಸಲ್ಲಿಸಿದ ಸೈನಿಕರಿಗೆ ಹಲವಾರು ಕ್ಷೇತ್ರಗಳಲ್ಲಿ ಉದ್ಯೋಗ ಮೀಸಲಾತಿಯನ್ನೂ ನೀಡಲಾಗಿದೆ.