ಉಡುಪಿ: ವಿಭಿನ್ನ ಶೈಲಿಯ ಸಂಗೀತ ಸಂಯೋಜನೆಯ ಮೂಲಕ ಕನ್ನಡಿಗರ ಮನ ಗೆದ್ದಿರುವ ಖ್ಯಾತ ಸಂಗೀತ ನಿರ್ದೇಶಕ ರವಿ ಬಸ್ರೂರು ಅವರು, ತಮ್ಮ ಹುಟ್ಟೂರಿಗೆ ವಿಶೇಷ ಕೊಡುಗೆಯನ್ನು ಕೊಟ್ಟಿದ್ದಾರೆ. ಆ ಮೂಲಕ ತಮ್ಮ ಹಳ್ಳಿಯನ್ನು ನಗರಕ್ಕೆ ಪರಿಚಯಿಸುವ ಮಾದರಿ ಕಾರ್ಯ ಮಾಡುತ್ತಿದ್ದಾರೆ.
ಹೌದು, ರವಿ ಅವರು ತಮ್ಮ ಮೆಚ್ಚಿನ ಊರು ಬಸ್ರೂರಿನಲ್ಲಿ ಸುಸಜ್ಜಿತವಾಗಿ ಮ್ಯೂಸಿಕ್ ಸ್ಟುಡಿಯೋ ಒಂದನ್ನು ಕಟ್ಟಿದ್ದಾರೆ. ಅಲ್ಲಿಂದಲೇ ಕನ್ನಡ, ತೆಲುಗು, ತಮಿಳು ಸಿನಿಮಾಗಳಿಗೆ ಕೆಲಸ ಮಾಡುತ್ತಿದ್ದಾರೆ. ರವಿ ಬಸ್ರೂರು ನಗರಕ್ಕೆ ತೆರಳಿ ಖ್ಯಾತಿ, ಹಣ ಸಂಪಾದಿಸಿದರೂ ತನ್ನ ಊರಿನ ಮೋಹವನ್ನು ಬಿಟ್ಟಿರಲಿಲ್ಲ. ಅದಕ್ಕೆ ಈ ಸ್ಟೂಡಿಯೋ ಉತ್ತಮ ಉದಾಹರಣೆ. ಆ ಮೂಲಕ ಬಸ್ತೂರು ಮಾದರಿ ಸಂಗೀತ ನಿರ್ದೇಶಕರಾದ್ದಾರೆ.
ಸಂಗೀತದ ಮೂಲಕವೇ ತನ್ನ ಮಾತೃ ಭಾಷೆ ಕುಂದಾಪುರ ಕನ್ನಡದ ಸೊಗಡನ್ನು ಇಡೀ ವಿಶ್ವ ಕ್ಕೆ ಪರಿಚಯಿಸಿದ್ದಾರೆ. ಇದೀಗ ಸ್ಟುಡಿಯೋ ನಿರ್ಮಾಣ ಮಾಡುವ ತನ್ನ ಊರಿನ ಕೀರ್ತಿ ಪಾತಕೆಯನ್ನು ವಿಶ್ವದಾದ್ಯಂತ ಪರಿಚಯಿಸಲು ಹೊರಟಿದ್ದಾರೆ. ರವಿ ಅವರು ತಮ್ಮ ಊರನ್ನು ಎಷ್ಟು ಪ್ರೀತಿಸುತ್ತಾರೆ ಎನ್ನುವುದಕ್ಕೆ ಇದು ಸಾಕ್ಷಿಯಾಗಿದೆ.
ತವರೂರಿನಲ್ಲಿ ಸ್ಟೂಡಿಯೋ ಕಟ್ಟಿದ ರವಿ:
ರವಿ ಬಸ್ರೂರು ಮ್ಯೂಸಿಕ್ ಆಂಡ್ ಮೂವೀಸ್ ಎಂಬ ಸ್ಟುಡಿಯೋವನ್ನು ತಮ್ಮ ಹಳ್ಳಿಯಲ್ಲೇ ಕಟ್ಟಿದ್ದಾರೆ. ಇನ್ನು ಮುಂದೆ ಅಲ್ಲಿನಿಂದಲೇ ಕೆಲಸ ಮುಂದುವರೆಸಲಿದ್ದಾರೆ. ಸಂಗೀತದ ಕೆಲಸ ಮಾತ್ರವೇ ಅಲ್ಲದೆ, ಇತರೆ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಸಹ ಇದೇ ಸ್ಟುಡಿಯೋದಲ್ಲಿ ನಡೆಯಲಿವೆ.
ಕೆಜಿಎಫ್2, ಕಬ್ಜ ಸಿನಿಮಾಗಳಲ್ಲಿ ಬ್ಯುಸಿ
ರವಿ ಅವರ ಸ್ಟುಡಿಯೋದಲ್ಲಿ, ಹಿನ್ನೆಲೆ ಸಂಗೀತ, ಡಬ್ಬಿಂಗ್, ಎಡಿಟಿಂಗ್ ಇನ್ನೂ ಹಲವು ಕಾರ್ಯಗಳನ್ನು ಮಾಡಲು ವ್ಯವಸ್ಥೆ ಮಾಡಲಾಗಿದೆ. ರವಿ ಬಸ್ರೂರು ಅವರು ಪ್ರಸ್ತುತ ಬಹುನಿರೀಕ್ಷಿತ ಕೆಜಿಎಫ್ 2, ಕಬ್ಜ ಸಿನಿಮಾದಲ್ಲಿ ಕೆಲಸ ಮಾಡುತ್ತಿದ್ದಾರೆ.
ಸಂಗೀತ ನಿರ್ದೇಶಕ ಮಾತ್ರವೇ ಅಲ್ಲದೆ ರವಿ ಬಸ್ರೂರು ಅವರು ಸಿನಿಮಾ ನಿರ್ದೇಶಕರೂ ಹೌದು. ಈಗಾಗಲೇ ಗರ್ಗರ್ ಮಂಡ್ಲ, ಕಟಕ, ಗಿರ್ಮಿಟ್ ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ಇನ್ನು ಮುಂದೆಯೂ ಒಳ್ಳೆಯ ಸಿನಿಮಾಗಳನ್ನು ನಿರ್ದೇಶಿಸುವ ಕನಸಿಟ್ಟುಕೊಂಡಿದ್ದಾರೆ.