ಚಂದನ್ ಶೆಟ್ಟಿಗೆ ಜೊತೆಯಾದ ರಾಗಿಣಿ ದ್ವಿವೇದಿ: ಎಲ್ರ ಕಾಲೆಳೆಯತ್ತೆ ಕಾಲ ಚಿತ್ರದಲ್ಲಿ ಹೆಜ್ಜೆಗೂಡಿಸಿದ ರ‍್ಯಾಪರ್ ಹಾಗೂ ತುಪ್ಪದ ಬೆಡಗಿ

ಸುಜಯ್ ಶಾಸ್ತ್ರಿ ನಿರ್ದೇಶನದ ‘ಎಲ್ರ ಕಾಲೆಳೆಯತ್ತೆ ಕಾಲ’ ಚಿತ್ರದಲ್ಲಿ ನಟನಾಗಿರುವ ಜನಪ್ರಿಯ ರ‍್ಯಾಪರ್ ಮತ್ತು ಸಂಗೀತ ಸಂಯೋಜಕ ಚಂದನ್ ಶೆಟ್ಟಿ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಜೊತೆ ಹೆಜ್ಜೆಗೆ ಹೆಜ್ಜೆ ಕೂಡಿಸಿದ್ದಾರೆ

ಚಂದನ್ ಅವರ ಸಂಗೀತ ಸಂಯೋಜನೆಯಲ್ಲಿ ಹಾಡು ಮೂಡಿಬಂದಿದ್ದು ಮಂಗ್ಲಿ ಹಾಗೂ ಚಂದನ್ ಶೆಟ್ಟಿ ಗಾಯನವಿದೆ. ಮುರಳಿ ಮಾಸ್ಟರ್ ನೃತ್ಯ ಸಂಯೋಜನೆ ಮಾಡಿದ್ದಾರೆ.

ಹಾಡು ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಚಂದನ್, ‘ನಟಿ ರಾಗಿಣಿ ದ್ವಿವೇದಿ ಅವರ ಮೊದಲ ಸಿನಿಮಾ ಕೆಂಪೇಗೌಡದಿಂದಲೂ ಅವರ ದೊಡ್ಡ ಅಭಿಮಾನಿಯಾಗಿದ್ದು, ಅವರೊಂದಿಗೆ ತೆರೆ ಹಂಚಿಕೊಂಡಿದ್ದು ಖುಷಿ ತಂದಿದೆ. ಎಲ್ರ ಕಾಲೆಳೆಯತ್ತೆ ಕಾಲ ನನ್ನ ಮೊದಲ ಚಿತ್ರ ಮತ್ತು ನನಗೆ ಸಾಕಷ್ಟು ಪ್ರೋತ್ಸಾಹ ಸಿಗುತ್ತದೆ ಎಂದು ನಾನು ಭಾವಿಸುತ್ತೇನೆ’ ಎಂದರು.

ಚಂದನ್ ಅವರಿಗೆ ಶುಭ ಹಾರೈಸಿದ ರಾಗಿಣಿ, ಚಂದನ್ ಸಂಗೀತವನ್ನು ಆನಂದಿಸುತ್ತಿದ್ದಾರೆ ಮತ್ತು ಅವರೊಂದಿಗೆ ಹೆಜ್ಜೆ ಹಾಕಿರುವುದು ಸಂತೋಷವಾಗಿದೆ ಎಂದರು.

80 ಮತ್ತು 90ರ ದಶಕದಲ್ಲಿ ನಡೆಯುವ ಕಾಮಿಡಿ ಎಂಟರ್‌ಟೈನರ್ ಸಿನಿಮಾದಲ್ಲಿ ನಾಯಕಿಯಾಗಿ ಅರ್ಚನಾ ಕೊಟ್ಟಿಗೆ ನಟಿಸಿದ್ದಾರೆ. ಚಿತ್ರದಲ್ಲಿ ಮಂಡ್ಯ ರಮೇಶ್, ಮಂಜು ಪಾವಗಡ, ರಾಕೇಶ್ ಪುರ್ಜರಿ ಮೊದಲಾದವರು ನಟಿಸಿದ್ದಾರೆ.

ಗೋಕುಲ್ ಎಂಟರ್‌ಟೈನರ್ಸ್ ಬ್ಯಾನರ್ ಅಡಿಯಲ್ಲಿ ಉಷಾ ಗೋವಿಂದರಾಜು ಅವರ ಬೆಂಬಲದ ಈ ಚಿತ್ರಕ್ಕೆ ಪ್ರವೀಣ್ ಮತ್ತು ಪ್ರದೀಪ್ ಸಂಗೀತ ಸಂಯೋಜಿಸಿದ್ದಾರೆ. ಜೂನ್‌ನಲ್ಲಿ ಸಿನಿಮಾ ಬಿಡುಗಡೆಗಾಗಿ ಚಿತ್ರತಂಡ ಎದುರು ನೋಡುತ್ತಿದೆ.