ಉಡುಪಿ: ಹೊಸದಿಲ್ಲಿಯ ಲೆಕ್ಕಪರಿಶೋಧಕರ ಸಂಸ್ಥೆ (ಐಸಿಎಐ) ನವೆಂಬರ್ 2022ರಲ್ಲಿ ನಡೆಸಿದ ಸಿಎ ಅಂತಿಮ ಪರೀಕ್ಷೆಯಲ್ಲಿ ಸುರತ್ಕಲ್ ನ ಕುಮಾರಿ ರಮ್ಯಾಶ್ರೀ ರಾವ್ ಅಖಿಲಭಾರತ ಶ್ರೇಣಿಯಲ್ಲಿ 2 ನೇ ರ್ಯಾಂಕ್ ಗಳಿಸಿದ್ದಾರೆ. ಇವರು ಚಾರ್ಟೆಡ್ ಅಕೌಂಟೆನ್ಸಿಯ ಸಿಪಿಟಿ ಹಾಗೂ ಇಂಟರ್ ಮೀಡಿಯೆಟ್ ನ ತರಬೇತಿಯನ್ನು ತ್ರಿಶಾ ಕ್ಲಾಸಸ್ ನಲ್ಲಿ ಪಡೆದಿದ್ದು, ಮಂಗಳೂರಿನ ಕಾಮತ್ ಆಂಡ್ ರಾವ್ ಸಂಸ್ಥೆಯಲ್ಲಿ ಆರ್ಟಿಕಲ್ ಶಿಪ್ ಪೂರೈಸಿರುತ್ತಾರೆ.
ಇವರು ಮಂಗಳೂರಿನ ಎಲ್ ಐ ಸಿ ಉದ್ಯೋಗಿಯಾದ ರಮೇಶ್ ರಾವ್ ಹಾಗೂ ನೇಷನಲ್ ಇನ್ಸೂರೆನ್ಸ್ ಕಂಪನಿ ಉದ್ಯೋಗಿಯಾದ ಮೀರಾ ಎಂ ದಂಪತಿಗಳ ಪುತ್ರಿ.












