ಮುಖದ ಕಾಂತಿ ಹೆಚ್ಚಿಸಿಕೊಳ್ಳಲು ಮನೆಯಲ್ಲೇ ಈ ಸಿಂಪಲ್ ಮಾರ್ಗ ಅನುಸರಿಸಿ: ಸೌಂದರ್ಯ ಲಹರಿ ಅಂಕಣ

«ರಮಿತಾ ಶೈಲೇಂದ್ರ ರಾವ್

ಮುಖದ ಕಾಂತಿಯನ್ನು ಹೆಚ್ಚಿಸಿಕೊಳ್ಳಲು ಎಷ್ಟೆಲ್ಲಾ ಹರಸಾಹಸ ಪಡೆತ್ತೇವೆ. ನೋಡಲು ಸುಂದರವಾಗಿ ಕಾಣಬೇಕು ಎಂಬುದು ಎಲ್ಲರ ಆಸೆಯೂ ಹೌದು. ಮನೆಮದ್ದು ಬಳಸಿ ಸುಲಭವಾಗಿ ಮುಖದ ಕಾಂತಿ ಹೆಚ್ಚಿಸಿಕೊಳ್ಳಬಹುದು.
ಮಧ್ಯಾಹ್ನದ ವಿಪರೀತ ಬಿಸಿಲನ್ನು ಸ್ವಲ್ಪ ಅವಾಯ್ಡ್ ಮಾಡಿದರೆ ಸಾಕು. ಏಕೆಂದರೆ ಈ ಸಮಯದಲ್ಲಿ ನಮ್ಮ ಚರ್ಮದ ಭಾಗದಲ್ಲಿ ಮರ್ಕ್ಯೂರಿ ಅಂಶ ಹೆಚ್ಚಾಗುತ್ತದೆ ಎಂದು ಹೇಳುತ್ತಾರೆ. ಇದರಿಂದ ನಮ್ಮ ಕೋಮಲ ತ್ವಚೆ ಕ್ರಮೇಣವಾಗಿ ಗಟ್ಟಿಯಾಗತೊಡಗುತ್ತದೆ. ಬಿಸಿಲಿನ ಸಮಯದಲ್ಲಿ ನಮ್ಮ ಚರ್ಮದ ಭಾಗದಿಂದ ಹೆಚ್ಚು ನೀರಿನ ಅಂಶ ಆವಿಯಾಗುವುದರಿಂದ ನಮ್ಮ ತ್ವಚೆಯ ಭಾಗಕ್ಕೆ ನಿರ್ಜಲೀಕರಣ ಸಮಸ್ಯೆ ಎದುರಾಗುತ್ತದೆ.

ಹಾಗಾಗಿ ಪ್ರತಿದಿನ ಸುಮಾರು ಹತ್ತರಿಂದ ಹನ್ನೆರಡು ಗ್ಲಾಸ್ ನೀರು ಕುಡಿಯಬೇಕು ಜೊತೆಗೆ ತಾಜಾ ಹಣ್ಣಿನ ರಸಗಳನ್ನು ಸೇವನೆ ಮಾಡಬೇಕು. ಬಿಸಿಲಿನ ಬೇಗೆಯಿಂದ ತಪ್ಪಿಸಿಕೊಳ್ಳಲು ಚರ್ಮದ ಆರೈಕೆ ಪ್ರಕ್ರಿಯೆಗಳನ್ನು ಕೈಗೊಳ್ಳಬೇಕು. ಬನ್ನಿ ಇಂದಿನ ಲೇಖನದಲ್ಲಿ ಬೇಸಿಗೆಯಲ್ಲಿ ತ್ವಚೆಯ ಆರೈಕೆ ಮಾಡಿಕೊಳ್ಳುವುದು ಹೇಗೆ ಎಂಬುದನ್ನು ನೋಡೋಣ.

ಸೌತೆಕಾಯಿ ಚರ್ಮಕ್ಕೆ ಒಳ್ಳೆಯದು :

ಕತ್ತರಿಸಿದ ಸೌತೆಕಾಯಿಯನ್ನು ಕಣ್ಣಿನ ತಂಪಿಗೆ ಬಳಸುತ್ತೇವೆ. ಅದೇ ರೀತಿ ಸೌತೆಕಾಯಿ ರುಬ್ಬಿದ ಪೇಸ್ಟ್​ಅನ್ನು ಮುಖಕ್ಕೆ ಹಚ್ಚಿಕೊಳ್ಳಿ. 5 ನಿಮಿಷ ಬಿಟ್ಟು ಶುದ್ಧ ನೀರಿನಲ್ಲಿ ಮುಖ ತೊಳೆಯುವುದರಿಂದ ಚರ್ಮದ ಕಾಂತಿಯನ್ನು ಹೆಚ್ಚಿಸಿಕೊಳ್ಳಬಹುದು.

ಬಿಸಿಲಿನ ಬೇಗೆ ತೊಡೆದು ಹಾಕಲು ಮೊಸರಿನಿಂದ ಸಾಧ್ಯ :

ಮನೆಯಲ್ಲಿ ಹೆಪ್ಪು ಹಾಕಿ ರೆಡಿ ಮಾಡಿದ ಗಟ್ಟಿ ಮೊಸರನ್ನು 4 ಚಮಚದಷ್ಟು ತೆಗೆದುಕೊಳ್ಳಿರಿ. 2-3 ನಿಮಿಷಗಳ ಕಾಲ ಮುಖಕ್ಕೆ ಮೊಸರು ಹಾಕಿ ನುಣುಪಾಗಿ ಕೈ ಬೆರಳುಗಳಿಂದ ಮಸಾಜ್​ ಮಾಡಿಕೊಳ್ಳಿ. ವಾರದಲ್ಲಿ ನಾಲ್ಕು ದಿನವಾದರೂ ಈ ವಿಧಾನವನ್ನು ಅಳವಡಿಸಿಕೊಂಡರೆ ಒಳ್ಳೆಯದು. ಇದರಿಂದ ಮುಖದ ಕಾಂತಿ ಹೆಚ್ಚಿಸಿಕೊಳ್ಳಬಹುದು. ಜೊತೆಗೆ ನಮ್ಮ ಮುಖದಲ್ಲಿ ಸುಸ್ತು ಎದ್ದು ಕಾಣುವುದನ್ನು ಇದು ತೊರೆದು ಹಾಕುತ್ತದೆ.
ಅಲೋವೆರಾ ಜೆಲ್​ :

ನೈಸರ್ಗಿಕವಾಗಿ ಮನೆಯಲ್ಲಿಯೇ ಬೆಳೆದಿರುವ ಅಲೊವೆರಾದ ಮೇಲಿನ ಸಿಪ್ಪೆಯನ್ನು ತೆಗೆದು, ಒಳಗಿರುವ ನುಣಪಾದ ಜೆಲ್​ಅನ್ನು ಮುಖಕ್ಕೆ ಸವರಿಕೊಳ್ಳಿರಿ. ಬಿಸಿಲಿನ ಬೇಗೆಯಿಂದ ಹೊರಬರಲು ಅಲೋವೆರಾ ಜೆಲ್ ಉತ್ತಮ ಮನೆಮದ್ದು.

ಟೊಮೆಟೊ ರಸ :

ಟೊಮೆಟೊವನ್ನು ಎರಡು ತುಂಡುಗಳನ್ನಾಗಿ ಕತ್ತರಿಸಿಕೊಳ್ಳಿ. ಇದರ ಒಂದು ಭಾಗದ ರಸ ತೆಗೆದು ಬೌಲ್ ಗೆ ಹಾಕಿಕೊಳ್ಳಿ, ಅದಕೆ 2ಹನಿ ಜೇನು ತುಪ್ಪ, ಈ ಫೇಸ್‌ಪ್ಯಾಕ್ ನ್ನು ವಾರದಲ್ಲಿ ಎರಡು ಸಲ ಇದನ್ನು ಬಳಸುವುದರಿಂದ, ಡ್ರೈ ಸ್ಕಿನ್ ಸಮಸ್ಯೆ ನಿವಾರಣೆಯಾಗಿ, ಮುಖದ ಕಾಂತಿ ಹೆಚ್ಚುತ್ತೆ.  ಮುಖದ ಅಂದಕ್ಕಿಂತ ಮನಸಿನ ಅಂದ ಮುಖ್ಯ ಯಾವಾಗಲು ಖುಷಿ ಆಗಿರಿ

ರಮಿತಾ ಶೈಲೇಂದ್ರ ರಾವ್ ಕಾರ್ಕಳ