ರಮಾನಂದ ಗುರೂಜಿ ಮುಂಬೈ ಪ್ರವಾಸ: ಡಿ. 2 ರಿಂದ ಭೇಟಿಗೆ ಲಭ್ಯ

ದೊಡ್ಡಣ್ಣಗುಡ್ಡೆ: ಇಲ್ಲಿನ ಶ್ರೀಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿ ಡಿಸೆಂಬರ್ 2 ಹಾಗೂ 3 ರಂದು ಎರಡು ದಿನಗಳ ಕಾಲ ಮುಂಬಯಿಯ ಲೋವರ್ ಪರೇಲಿನಲ್ಲಿರುವ ಪಂಚತಾರಾ ಹೋಟೆಲ್ ಸೇಂಟ್ ರೆಜಿಸ್ ನಲ್ಲಿ ಲಭ್ಯವಿರಲಿದ್ದಾರೆ.

ಡಿ.4 ಮತ್ತು 5 ರಂದು ಗುಜರಾತ್ ನಲ್ಲಿ ಸಂಪನ್ನಗೊಳ್ಳಲಿರುವ ಧಾರ್ಮಿಕ ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ಪಾಲ್ಗೊಳ್ಳಲಿದ್ದಾರೆ. ಡಿ. 6 ಮತ್ತು 7 ರಂದು ಪುನಃ ಮುಂಬಯಿಯಲ್ಲಿ ಭಕ್ತರ ಭೇಟಿಗೆ ಲಭ್ಯವಿರಲಿದ್ದಾರೆ.

ದೇವಿ ಅನುಗ್ರಹಿತ ಭಕ್ತನಾಗಿ ತನ್ನ ಸೂಕ್ತ ಮಾರ್ಗದರ್ಶನದಿಂದ ಸಂಕಷ್ಟ ನಿವಾರಿಸಿ ಭಕ್ತ ಜನರ ಮಾತನಾಡುವ ಶಕ್ತಿ ಎನಿಸಿದ ಗುರೂಜಿಯವರ ಸಂದರ್ಶನ ಬಯಸುವ ಭಕ್ತಾದಿಗಳು ಆಪ್ತ ಕಾರ್ಯದರ್ಶಿ ಕುಸುಮ ನಾಗರಾಜ್ ಇವರನ್ನು ಮೊಬೈಲ್ ಸಂಖ್ಯೆ 9342749650/ 6362408747 ಸಂಪರ್ಕಿಸಿ ಮುಂಗಡ ಹೆಸರು ನೋಂದಾಯಿಸಿಕೊಳ್ಳಬಹುದು ಎಂದು ಪ್ರಕಟಣೆ ತಿಳಿಸಿದೆ.

ವಿಳಾಸ:
ಸೇಂಟ್ ರೆಜಿಸ್
462, ತುಳಸಿ ಪೈಪ್ ರಸ್ತೆ, ಲೋವರ್ ಪರೇಲ್, ಮುಂಬೈ, ಮಹಾರಾಷ್ಟ್ರ 400013