ಮಲ್ಪೆ: ಶ್ರೀರಾಮ ಮಂದಿರ ಜಿ ಎಸ್ ಬಿ ಸಮಾಜ ವತಿಯಿಂದ ವೈಭವಪೂರ್ಣ ರಾಮನಾಮ ಹವನ

ಮಲ್ಪೆ: ಶ್ರೀರಾಮ ಮಂದಿರ ಜಿ ಎಸ್ ಬಿ ಸಮಾಜ ವತಿಯಿಂದ ಅಯೋಧ್ಯೆಯಲ್ಲಿ ಶ್ರೀರಾಮಚಂದ್ರ ದೇವರ ಪ್ರತಿಷ್ಠೆ ಪ್ರಯುಕ್ತ ಸೋಮವಾರ ಬೆಳ್ಳಿಗೆ ಸಾಮೂಹಿಕ ಪ್ರಾರ್ಥನೆ, ಪಂಚಾಮೃತ ಅಭಿಷೇಕ, ಕಲಶಾಭಿಷೇಕ , ರಾಮ ನಾಮ ಹವನ, ಶ್ರೀ ದೇವರಿಗೆ ವಿಶೇಷ ಅಲಂಕಾರ, ಮಹಾಪೂಜೆ ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.

ಶ್ರೀ ರಾಮ ಮಂದಿರ ಜಿ ಎಸ್ ಬಿ ಸಮಾಜ ಮಲ್ಪೆ ಇದರ ಅಧ್ಯಕ್ಷ ಕೆ. ಗೋಕುಲದಾಸ್ ಪೈ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ಜರಗಿತು.

ಮುಖ್ಯ ಅತಿಥಿಗಳಾಗಿ ಶಾಸಕ ಯಶಪಾಲ್ ಸುವರ್ಣ, ಮಾಜಿ ಶಾಸಕ ರಘುಪತಿ ಭಟ್ , ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ನಾರಾಯಣ ಪೈ ಮಣಿಪಾಲ, ಕಲ್ಯಾಣಪುರ ಶ್ರೀ ವೆಂಕಟರಮಣ ದೇವಸ್ಥಾನ ಮೊಕ್ತೇಸರ ಅನಂತಪದ್ಮನಾಭ ಕಿಣಿ, ಪ್ರೊ. ಪವನ್ ಕಿರಣ್ ಕೆರೆ , ಶ್ರೀ ಶಂಕರ ನಾರಾಯಣ ದೇವಸ್ಥಾನದ ಅಧ್ಯಕ್ಷ ಸಾಧು ಸಾಲಿಯಾನ್ , ಆನಂದ ಸುವರ್ಣ, ನಾಗರಾಜ್ ಸುವರ್ಣ, ಗೋಪಾಲ್ ಸಿ ಬಂಗೇರ, ಉಪಸ್ಥಿತರಿದ್ದರು.

ಶಾಸಕ ಯಶಪಾಲ್ ಸುವರ್ಣ ಇವರಿಗೆ ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಅಯೋಧ್ಯೆಯ ಶ್ರೀ ರಾಮ ಮಂದಿರದ ಕರಸೇವಕರಾಗಿ ಸೇವೆ ಸಲ್ಲಿಸಿದ ನರೇಂದ್ರ ನಾಯಕ್ ಉಡುಪಿ , ಪ್ರಮೋದ್ ಭಂಡಾರ್ಕರ್ ಮಲ್ಪೆ, ಜಯಂತ್ ಸಾಲಿಯಾನ್ ಪಡುಕೆರೆ ಇವರಿಗೆ ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಪ್ರಸಿದ್ದ ಆಕಾಶವಾಣಿ ಕಲಾವಿದ ರಾಜೇಶ್ ಪಡಿಯಾರ್ ಮೈಸೂರು, ರಂಜಿತ್ ಭಟ್, ವಾಣಿಶ್ರೀ ಪ್ರಮೋದ್ ಇವರಿಂದ ಸುಗಮ ಸಂಗೀತ ಕಾರ್ಯಕ್ರಮ ನಡೆಯಿತು. ರಾತ್ರಿ ದೀಪಾರಾಧನೆ, ಭಜನಾ ಕಾರ್ಯಕ್ರಮ, ಸುಡುಮದ್ದು ಪ್ರದರ್ಶನ ಜರಗಿತು. ಶ್ರೀರಾಮ ಮಂದಿರದ ಶ್ರೀರಾಮಾಂಜನೇಯ ಸೇವಾ ಟ್ರಸ್ಟ್ ಅಧ್ಯಕ್ಷರು, ಪದಾಧಿಕಾರಿಗಳು, ಜಿ ಎಸ್ ಬಿ ಯುವಕ ಹಾಗೂ ಮಹಿಳಾ ಮಂಡಳಿಯ ಸದಸ್ಯರು ನೂರಾರು ಭಕ್ತರು ಉಪಸ್ಥಿತರಿದ್ದರು.