ಹೇಮಂತ್ ಎಂ ರಾವ್ ಕಥೆ ಮತ್ತು ನಿರ್ದೇಶನ ಹಾಗೂ ಕಿರಿಕ್ ಹುಡುಗ ರಕ್ಷಿತ್ ಶೆಟ್ಟಿ ನಟನೆ ಮತ್ತು ನಿರ್ಮಾಣದ ‘ಸಪ್ತ ಸಾಗರದಾಚೆ ಎಲ್ಲೋ’ ಚಲನಚಿತ್ರವು ಸೆಟ್ಟೇರಿದ್ದು, ಸಿನಿಮಾದ ಶೂಟಿಂಗ್ ಬಹುತೇಕ ಮುಕ್ತಾಯವಾಗಿದೆ. ಸಿನಿಮಾದ ಮೇಕಿಂಗ್ ಫೋಟೋಗಳನ್ನು ರಕ್ಷಿತ್ ಶೆಟ್ಟಿ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಚಿತ್ರದಲ್ಲಿ ರಕ್ಷಿತ್ ಶೆಟ್ಟಿ ‘ಮನು’ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸದಾ ಹೊಸತನದೊಂದಿಗೆ ಬರುವ ರಕ್ಷಿತ್ ಈ ಬಾರಿ ಹೊಸತೇನನ್ನು ನೀಡಲಿದ್ದಾರೆ ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
ರಕ್ಷಿತ್‌ಗೆ ನಾಯಕಿಯಾಗಿ ರುಕ್ಮಿಣಿ ವಸಂತ್ ಮುಖ್ಯಭೂಮಿಕೆಯಲ್ಲಿದ್ದಾರೆ. ಇನ್ನುಳಿದಂತೆ ರಕ್ಷಿತ್ ಟೀಮ್ ನ ಖಾಯಂ ಸದಸ್ಯ ನಟ ಅಚ್ಯುತ್ ಕುಮಾರ್, ಪವಿತ್ರಾ ಲೋಕೇಶ್, ಅವಿನಾಶ್, ಶರತ್ ಲೋಹಿತಾಶ್ವ ಸೇರಿದಂತೆ ದೊಡ್ಡ ತಾರಾಗಣವಿದೆ. ರಕ್ಷಿತ್ ಶೆಟ್ಟಿಯವರ ಪರಂವಃ ಸ್ಟುಡಿಯೋಸ್ ಈ ಚಿತ್ರ ನಿರ್ಮಾಣದ ಹೊಣೆ ಹೊತ್ತಿದ್ದು ಪ್ರಣವ್ ಆರ್ ಭಾರದ್ವಾಜ್ ಸಹ ನಿರ್ಮಾಪಕರಾಗಿದ್ದಾರೆ. ಚರಣ್ ರಾಜ್ ಸಂಗೀತ ನಿರ್ದೇಶನವಿದ್ದು, ಅದ್ವೈತ್ ಗುರುಮೂರ್ತಿ ಕ್ಯಾಮೆರಾ ಹಿಂದೆ ಕೆಲಸ ಮಾಡಿದ್ದಾರೆ. ವರುಣ್ ಗೋಳಿ ಸಂಕಲನ ವಿಭಾಗದಲ್ಲಿದ್ದಾರೆ.
ಈ ಮಧ್ಯೆ ಫಿಲ್ಮ್ ಬಾಜಾರ್ ಇಂಡಿಯಾದ ವರ್ಕ್-ಇನ್-ಪ್ರೋಗ್ರೆಸ್ ಲ್ಯಾಬ್ 2022 ರಲ್ಲಿ ಪರಂವಃ ಸ್ಟುಡಿಯೋಸ್ ನಿರ್ಮಾಣದ, ಸುಮಂತ್ ಭಟ್ ನಿರ್ದೇಶನದ ‘ಮಿಥ್ಯಾ’ ಚಿತ್ರವು ಅಧಿಕೃತವಾಗಿ ಆಯ್ಕೆಯಾಗಿದೆ.
ಚಿತ್ರಕೃಪೆ: ರಕ್ಷಿತ್ ಶೆಟ್ಟಿ/ಟ್ವಿಟರ್