ರಾಖಿ ಕಟ್ಟುವ ಮುನ್ನ ಇವೆಲ್ಲಾ ಸಂಗತಿಗಳನ್ನು ತಿಳಿದುಕೊಂಡಿರಿ: ರಾಖಿ ಮಾತ್ರವಲ್ಲ ಸಂಬಂಧವೂ ಗಟ್ಟಿಯಾಗಿರುತ್ತೆ!

ರಾಖಿ ಕಟ್ಟುವ ನಿಜವಾದ ಉದ್ದೇಶವಿದು:

ರಕ್ಷಾ ಬಂಧನವು ಸಹೋದರ ಸಹೋದರಿಯರ ನಡುವಿನ ಅಂತ್ಯವಿಲ್ಲದ ಪ್ರೀತಿಯ ಸಂಕೇತ. ತಮ್ಮ ಸಹೋದರ ಜೀವನದಲ್ಲಿ ಯಶಸ್ವಿಯಾಗಲಿ ಮತ್ತು ಶಾಶ್ವತವಾಗಿ ಆರೋಗ್ಯವಾಗಿರಲಿ ಎಂಬ ಭಾವನೆಯಿಂದ ಸಹೋದರಿಯರು ರಾಖಿಯನ್ನು ಕಟ್ಟುತ್ತಾರೆ. ಶ್ರಾವಣ ಮಾಸದ ಹುಣ್ಣಿಮೆಯಂದು ರಾಖಿ ಹಬ್ಬವನ್ನು ಆಚರಿಸಲಾಗುತ್ತದೆ.

ಈ ವರ್ಷ ರಕ್ಷಾ ಬಂಧನ ಆಗಸ್ಟ್ 9 ರಂದು ನಡೆಯಲಿದೆ.  ಹಳದಿ, ಕೆಂಪು, ಹಸಿರು ಮತ್ತು ಬಿಳಿ ರಾಖಿಗಳು ಶುಭ ಫಲಿತಾಂಶಗಳನ್ನು ತರುತ್ತವೆ. ಕಪ್ಪು ರಾಖಿಗಳನ್ನು ಕಟ್ಟಲೇಬಾರದು ಎನ್ನು ನಂಬಿಕೆ ಇದೆ.

ದುಬಾರಿ ರಾಖಿ ಬೇಡ, ಪ್ರೀತಿಯೇ ಮುಖ್ಯ

ಮಾರುಕಟ್ಟೆಯಲ್ಲಿ 10 ರೂ ಯಿಂದ ಹಿಡಿದು ಸಾವಿರ ರೂ ಗಳ ರೆಗೂ ರಾಖಿಗೆ ಬೆಲೆ ಇದೆ. ದುಬಾರಿಯ ರಾಖಿ ಕಟ್ಟಿದರೆ ಮಾತ್ರ ಮರ್ಯಾದೆ ಎನ್ನುವ ಮನೋಭಾವ ತುಂಬಾ ಮಂದಿಯಲ್ಲಿದೆ. ಆದರೆ  ಒಂದು ನೆನೆಪಿಡಿ. ಪ್ರೀತಿಗಿಂತ ಮೌಲ್ಯಯುತವಾದದ್ದು ಲೋಕದಲ್ಲಿ ಯಾವುದೂ ಇಲ್ಲ, ರಾಖಿ ಒಂದು ಸಂಕೇತವಷ್ಟೇ ಬಿಟ್ಟರೆ ಆಡಂಭರ ತೋರಿಕೆಯಲ್ಲ, ಹಾಗಾಗಿ ನೀವು ಖರೀದಿಸುವ ರಾಖಿ ಸರಳವಾಗಿಯೇ ಇರಲಿ. ಕಟ್ಟುವಾಗ ಪ್ರೀತಿ ಅಕ್ಕರೆ ಜಾಸ್ತಿ ಇದ್ದರೆ ಸಾಕು.

ಸಹೋದರರಿಗೆ ಉಡುಗೊರೆ ನೀಡ್ತೀರಾ?
 
ರಾಖಿ ಕಟ್ಟಿದ ಸಹೋದರಿಯರು ಸಹೋದರರಿಗೆ ಉಡುಗೊರೆ ನೀಡುತ್ತಾರೆ, ಕೆಲವೆಡೆ ಕಟ್ಟಿಸಿಕೊಂಡವರೂ ಉಡುಗೊರೆ ನೀಡುತ್ತಾರೆ. ತುಂಬಾ ದುಬಾರಿ ಉಡುಗೊರೆಯನ್ನೆ ನೀಡಬೇಕು ಎನ್ನುವ ಹಟ ಬೇಡ. ಸಹೋದರರ ಹವ್ಯಾಸ, ಇಷ್ಟ ನೋಡಿ ಅವರಿಗೆ ಪ್ರೀತಿಯ ನೆನೆಪಿನ ಕಾಣಿಕೆ ನೀಡಿ. ಅದರ ಬೆಲೆ ಮುಖ್ಯವಲ್ಲ. ನೀವು ಪ್ರೀತಿಯಿಂದ ಕೊಡುವುದಷ್ಟೇ ಮುಖ್ಯ.