ಉಡುಪಿ: ಭಾರತೀಯ ಜನತಾಪಾರ್ಟಿ ಉಡುಪಿ ಜಿಲ್ಲಾ ಮಹಿಳಾ ಮೋರ್ಚದ ವತಿಯಿಂದ ಪಕ್ಷದ ಸಹೋದರರಿಗೆ ರಕ್ಷೆ ಕಟ್ಟುವ ಮೂಲಕ ರಕ್ಷಾಬಂಧನ ಕಾರ್ಯಕ್ರಮವನ್ನು ಬಿಜೆಪಿ ಕಚೇರಿಯಲ್ಲಿ ಆಚರಿಸಲಾಯಿತು.
ರಕ್ಷೆ ಸ್ವಾಭಿಮಾನದ ಸಂಕೇತ, ಗಿಡಕ್ಕೆ ಬೇರಿನ ರಕ್ಷಣೆ, ಬೆಂಕಿಗೆ ಗಾಳಿಯ ರಕ್ಷಣೆ, ದೇಶಕ್ಕೆ ಯೋಧರ ರಕ್ಷಣೆ ಹಾಗೇ ನಮಗೆ ಸಹೋದರತೆಯೇ ರಕ್ಷಣೆ ಈ ಪರಿಕಲ್ಪನೆಯಲ್ಲಿ ಮಹಿಳಾ ಮೋರ್ಚಾ ರಕ್ಷಾಬಂಧನ ಹಬ್ಬ ಆಚರಿಸಿದೆ ಎಂದು ಜಿಲ್ಲಾ ಮಹಿಳಾ ಮೋರ್ಚ ಅಧ್ಯಕ್ಷೆ ವೀಣಾ ಶೆಟ್ಟಿ ಹೇಳಿದರು.
ಬಿಜೆಪಿ ಜಿಲ್ಲಾದ್ಯಕ್ಷ ಸುರೇಶ್ ನಾಯಕ್ ರಕ್ಷಾಬಂಧನದ ಸಂದೇಶ ಸಾರಿದರು.
ಬಿಜೆಪಿ ಮುಖಂಡರುಗಳಾದ ಮಹೇಶ್ ಠಾಕೂರ್, ಮಟ್ಟಾರು ರತ್ನಾಕರ ಹೆಗ್ಡೆ, ಶಾಸಕರಾದ ಲಾಲಾಜಿ ಮೆಂಡನ್, ರಶ್ನಿತಾ ಶೆಟ್ಟಿ, ಉದಯ್ ಕುಮಾರ್ ಶೆಟ್ಟಿ, ಗೀತಾಜಂಲಿ ಸುವರ್ಣ, ಯಶ್ ಪಾಲ್ ಸುವರ್ಣ ಹಾಗೂ ಪಕ್ಷದ ಪ್ರಮುಖರು, ಮಹಿಳಾ ಮೋರ್ಚದ ಸದಸ್ಯರು ಉಪಸ್ಥಿತರಿದ್ದರು.